ಸ್ಪಂದನಾ ಮೇಲೆ ವಿಜಯ್ ಡಿಪೆಂಡ್ ಆಗ್ತಿದ್ದ, ದೇವರು ಅನ್ಯಾಯ ಮಾಡಿದ- ಗಿರಿಜಾ ಲೋಕೇಶ್

Public TV
2 Min Read

ಸ್ಯಾಂಡಲ್‌ವುಡ್ (Sandalwood) ನಟ ವಿಜಯ್ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ನಿಧನರಾಗಿದ್ದಾರೆ. ವಿಜಯ್ ಪತ್ನಿಯ ಬಗ್ಗೆ ಹಿರಿಯ ನಟಿ ಗಿರಿಜಾ ಲೋಕೇಶ್ (Girija Lokesh)  ಅವರು ಭಾವುಕರಾಗಿದ್ದಾರೆ. ಸ್ಪಂದನಾ ಸಾವಿನಿಂದ ರಾಘು ಅವರ ಜೀವನ ಮುಂದೇ ಹೇಗೆ ಎಂದು ನಟಿ ರಿಯಾಕ್ಟ್ ಮಾತನಾಡಿದ್ದಾರೆ.

ಮೊನ್ನೆ ಶೂಟಿಂಗ್ ಮುಗಿಸಿ ಮನೆಗೆ ಬಂದು ಊಟ ಮಾಡಿ ಮಲ್ಕೊಂಡೆ. ಬೆಳಿಗ್ಗೆ ಎದ್ದಾಗ ನನ್ನ ಸೊಸೆ ಗ್ರೀಷ್ಮಾ (Greeshma) ಹೇಳಿದ್ದರು. ಸ್ಪಂದನಾ ಸಾವಿನ ವಿಚಾರ, ಈ ವಿಚಾರ ಕೇಳಿದಾಗ ನಂಬಲಾಗಲಿಲ್ಲ. ಸುದ್ದಿ ಕೇಳಿದ ಕೂಡಲೇ ನಾನು ಕಿರುಚಿಕೊಂಡೆ. ಅಷ್ಟು ಫಿಟ್ ಆಗಿರುವ ಹುಡುಗಿ, ಇಷ್ಟು ಚಿಕ್ಕ ವಯಸ್ಸಿಗೆ ಹೋದರು. ದೇವರ ಮಾಡಿದ ಅನ್ಯಾಯ ಇದು ಎಂದು ನಟಿ ಗಿರಿಜಾ ಲೋಕೇಶ್ ಹೇಳಿದ್ದಾರೆ. ಇದನ್ನೂ ಓದಿ:ಸ್ಪಂದನಾ ನಿಧನ: ಮಲ್ಲೇಶ್ವರಂನಲ್ಲಿ ದರ್ಶನ, ಹರಿಶ್ಚಂದ್ರ ಘಾಟ್‍ ನಲ್ಲಿ ಅಂತಿಮ ಸಂಸ್ಕಾರ

ತುಂಬಾನೇ ನೋವಾಗುತ್ತೆ, ನಾವು ಇರುವವರೆಗೂ ಈ ನೋವನ್ನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ವಿಜಯ್ ಮನೆಯಲ್ಲಿ ತಂದೆ- ತಾಯಿ ಎಲ್ಲರೂ ವಯಸ್ಸಾದವರು ಹೇಗೆ ಸಹಿಸಿಕೊಳ್ಳುವುದು. ಸ್ಪಂದನಾ ಹಿರಿಯ ಸೊಸೆ ಎಲ್ಲರ ಜವಬ್ದಾರಿ ಆಕೆಯ ಮೇಲಿತ್ತು. ಸಂಸಾರದಲ್ಲಿ ಗಂಡು ಇಲ್ಲಾ ಅಂದರೆ ಬದುಕಬಹುದು. ಆದರೆ ಒಂದು ಹೆಣ್ಣಿಲ್ಲ ಅಂದರೆ ಬದುಕೋದು ಕಷ್ಟ. ವಿಜಯ್ ಎಲ್ಲದ್ದಕ್ಕೂ ಸ್ಪಂದನಾ ಮೇಲೆ ಡಿಪೆಂಡ್ ಆಗಿದ್ದ, ಪತ್ನಿಯ ನಡೆಗೆ ವಿಜಯ್ ಕೂಡ ಬೆಂಬಲಿಸುತ್ತಿದ್ದರು.

ಸ್ಪಂದನಾ ಸುಂದರವಾದ ಹೆಣ್ಣು, ಸರಳವಾದ ಅವರ ವ್ಯಕ್ತಿತ್ವ. ಸ್ಪಂದನಾಳಲ್ಲಿ ಯಾವುದೇ ನಿಶಕಲ್ಮಶ ಇರಲಿಲ್ಲ. ಆಕೆಯ ನಗುವಿನಲ್ಲೇ ನಿಶಕಲ್ಮಶ ಗುಣ ಗೊತ್ತಾಗುತ್ತಿತ್ತು. ನನ್ನ ಮಗ ಸೃಜನ್ (Srujan Lokesh) ಮತ್ತು ಸ್ಪಂದನಾ ಬರ್ತ್‌ಡೇ ಒಂದೇ ದಿನ, ಜೂನ್ 28ರಂದು ಇಬ್ಬರು ಒಟ್ಟಿಗೆ ಹುಟ್ಟುಹಬ್ಬ ಆಚರಿಸುತ್ತಿದ್ದರು. ಇಲ್ಲಿ ಬಂದು ಕೇಕ್ ಕಟ್ ಮಾಡ್ತಿದ್ದರು. ಆ ದಿನಗಳನ್ನ ಮರಿಯೋಕೆ ಸಾಧ್ಯವಿಲ್ಲ. ನಮ್ಮ ಕುಟುಂಬದ ಜೊತೆ ಸ್ಪಂದನಾಗೆ (Spandana)  ಒಳ್ಳೆಯ ಬಾಂದವ್ಯವಿತ್ತು.

ನಾನು ರಾಘುನ ಚಿಕ್ಕ ವಯಸ್ಸಿನಿಂದ ನೋಡಿದ್ದೀನಿ. ಆಗಿನಿಂದಲೂ ಅವನಿಗೆ ಅಗಾಧವಾದ ಪ್ರತಿಭೆಯಿದೆ. ಶಂಕರ್‌ನಾಗ್ ತೀರಿಕೊಂಡ ಸಮಯದಲ್ಲಿ ನಾನು ವಿಜಯ್ ಮನೆಯಲ್ಲಿಯೇ ಇದ್ದೆ, ಮೈಸೂರಿನಿಂದ ಅಲ್ಲಿಗೆ ಬರೋಕೆ ಆಗಲ್ಲ ಅಂತಾ. ಆಗ ರಾಘು ಎಲ್ಲಾ ಮಕ್ಕಳನ್ನ ಸೇರಿಸಿಕೊಂಡು ಹಾಡು- ಡ್ಯಾನ್ಸ್ ಮಾಡುತ್ತಿದ್ದ. ರಾಘು ಮನಸ್ಸಿಗೆ ಶತ್ರುಗಳೇ ಇರಲಿಲ್ಲ. ರಾಘು ತುಂಬಾ ಹಂಬಲ್ ವ್ಯಕ್ತಿಯಾಗಿದ್ದರು. ದೇವರು ವಿಜಯ್‌ಗೆ ಅನ್ಯಾಯ ಮಾಡಿದ್ದಾರೆ. ಸ್ಪಂದನಾ ಸಾವನ್ನ ಚೇತರಿಕೊಳ್ಳುವ ಶಕ್ತಿ ಆ ಕುಟುಂಬಕ್ಕೆ ಕೊಡಲಿ ಎಂದು ಗಿರಿಜಾ ಲೋಕೇಶ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್