ನನ್ನ ಮನೆಗೆ ಬಂದು ಒತ್ತಾಯ ಪೂರ್ವಕವಾಗಿ ಅತ್ಯಾಚಾರ ಮಾಡ್ದ- ಅಯೋಗ್ಯ ಸಹನಟಿ ದೃಶ್ಯ

Public TV
3 Min Read

– ಗೊತ್ತಿಲ್ಲದೇ ಅಶ್ಲೀಲ ಫೋಟೋ ಕಲೆಕ್ಟ್ ಮಾಡ್ಕೊಂಡ
– ನಾನು ಸಿಗಲಿಲ್ಲ ಎಂದು ಪ್ರತೀಕಾರ

ಬೆಂಗಳೂರು: ಅಯೋಗ್ಯ ಸಿನಿಮಾದ ಸಹ ನಟಿಯಾಗಿರುವ ದೃಶ್ಯ ಮೇಲೆ ಕೆಲವೊಂದು ಆರೋಪಗಳು ಕೇಳಿ ಬಂದಿದ್ದವು. ಇದೀಗ ಪ್ರಶಾಂತ್ ನನ್ನ ಹಿಂದೆ ಬಿದ್ದು ಒತ್ತಾಯ ಪೂರ್ವಕವಾಗಿ ಅತ್ಯಾಚಾರ ಮಾಡಿ. ಈಗ ಸುಳ್ಳು ಆರೋಪಗಳನ್ನು ಮಾಡಿದ್ದಾನೆ ಎಂದು ದೃಶ್ಯ ಅವರು ಹೇಳಿದ್ದಾರೆ.

ತನ್ನ ಮೇಲೆ ಬಂದಿರುವ ಆರೋಪದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದೃಶ್ಯ, ನಾನು ಆತನ ಫೇಸ್‍ಬುಕ್, ಇನ್ ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಿದ್ದೀನಿ ಎಂದು ಹೇಳಿದ್ದಾನೆ. ಆದರೆ ಆತನಿಗೆ ಫೇಸ್‍ಬುಕ್ ಅಕೌಂಟ್ ಇಲ್ಲ. ಆತ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ಮಾತ್ರ ಇನ್‍ಸ್ಟಾಗ್ರಾಮ್ ನಲ್ಲಿ ಕಾಣಿಸಿಕೊಂಡಿದ್ದಾನೆ. ನಾನು ಅವನ ಫೇಸ್‍ಬುಕ್, ಇನ್ ಸ್ಟಾಗ್ರಾಮ್ ನೋಡುತ್ತಿದ್ದೆ ಎಂದು ಸುಳ್ಳು ಆರೋಪ ಮಾಡಿದ್ದಾನೆ. ಆದರೆ ಆತನೇ ನನ್ನ ಫೇಸ್‍ಬುಕ್, ಇನ್ ಸ್ಟಾಗ್ರಾಮ್ ನೋಡುತ್ತಿದ್ದನು. ಜೊತೆಗೆ ಎರಡು ವರ್ಷದಿಂದ ಲಿವಿಂಗ್ ಟುಗೆದರ್ ನಲ್ಲಿದ್ದೆ ಎಂದು ಹೇಳಿದ್ದಾನೆ. ಅದು ಸುಳ್ಳು, ಯಾಕೆಂದರೆ ಪ್ರಶಾಂತ್ ನನಗೆ ಒಂದು ವರ್ಷದಿಂದ ಮಾತ್ರ ಪರಿಚಯವಿದೆ. ಹೀಗಾಗಿ ಆತ ತಪ್ಪು ಮಾಹಿತಿ ಕೊಟ್ಟಿದ್ದಾನೆ ಎಂದು ಹೇಳಿದ್ದಾನೆ.

ದೃಶ್ಯ ಹೇಳಿದ್ದು ಏನು?
ನಾನು ಮಾಡೆಲಿಂಗ್ ಮಾಡುತ್ತಿದ್ದ ಸಮಯದಲ್ಲಿ ಫೋಟೋಶೂಟ್ ಮಾಡಿಸುವಾಗ ಪ್ರಶಾಂತ್ ಪರಿಚಯವಾಗಿದ್ದನು. ಪರಿಚಯವಾಗಿ ಸ್ನೇಹವಾಗಿ ಇಬ್ಬರು ಎರಡು ತಿಂಗಳ ಲಿವಿಂಗ್ ರಿಲೇಷನ್ ಶಿಪ್‍ನಲ್ಲಿದ್ವಿ. ದಿನ ಕಳೆದಂತೆ ಪ್ರಶಾಂತ್ ಅನೇಕ ಹುಡುಗಿಯರಿಗೆ ಮೋಸ ಮಾಡಿರುವುದು, ಚಾಟ್ ಮಾಡುತ್ತಿದ್ದ ವಿಚಾರ ನನಗೆ ತಿಳಿಯಿತು. ಅಷ್ಟೇ ಅಲ್ಲದೇ ಫೋನಿನಲ್ಲಿ ಕದ್ದು ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದನು. ಜೊತೆಗೆ ಹುಡುಗಿಯರ ಅಶ್ಲೀಲ ಫೋಟೋವನ್ನು ಕಲೆಕ್ಟ್ ಮಾಡಿಕೊಳ್ಳುತ್ತಿದ್ದ. ನನಗೆ ಗೊತ್ತಿಲ್ಲದೇ ನನ್ನ ಅಶ್ಲೀಲ ಫೋಟೋವನ್ನು ಕಲೆಕ್ಟ್ ಮಾಡಿಕೊಂಡಿದ್ದನು. ಈ ವಿಚಾರ ನನಗೆ ಗೊತ್ತಾದ ಮೇಲೆ ಈ ಬಗ್ಗೆ ಆತನ ಬಳಿ ಮಾತನಾಡಿದೆ. ಆದರೆ ಪ್ರಶಾಂತ್ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಲು ಶುರು ಮಾಡಿದನು. ಕೊನೆಗೆ ಬಲವಂತವಾಗಿ ಫೆಬ್ರವರಿ 24 ರಂದು ನನ್ನ ಜೊತೆ ನಿಶ್ಚಿತಾರ್ಥ ಮಾಡಿಕೊಂಡನು.

ನಿಶ್ಚಿತಾರ್ಥವಾದ ಬಳಿಕ ಈಗಾಗಲೇ ಪ್ರಶಾಂತ್‍ಗೆ ಮದುವೆಯಾಗಿರುವ ವಿಚಾರ ತಿಳಿಯಿತು. ಪ್ರಶಾಂತ್ ರಾಜ್‍ಕುಮಾರ್ ಕುಟುಂಬಸ್ಥರ ಹೆಸರು ಬಳಸಿಕೊಂಡು ಓಡಾಡುತ್ತಿದ್ದು, ಅವರ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾನೆ. ನಂತರ ಈತನಿಂದ ದೂರವಾಗಿ ನಾನು ನಮ್ಮ ಮನೆ ಕುಶಾಲನಗರದಲ್ಲಿ ವಾಸವಾಗಿದ್ದೆ. ಆದರ ನಂತರ ಪ್ರಶಾಂತ್ ಅಲ್ಲಿಗೂ ಬಂದು ನಮ್ಮ ಮನೆ ಬಾಗಿಲು, ಗ್ಲಾಸ್ ಒಡೆದಿದ್ದಾನೆ. ನನ್ನ ಮೇಲೆ ಹಾಗೂ ನನ್ನ ತಂದೆ-ತಾಯಿ ಮೇಲೆ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಮಾನಸಿಕ-ದೈಹಿಕವಾಗಿಯೂ ಹಲ್ಲೆ ಮಾಡಿದ್ದಾನೆ. ನೀನು ನನ್ನನ್ನೇ ಮದುವೆಯಾಗಬೇಕು ಎಂದು ಒತ್ತಾಯ ಮಾಡುತ್ತಿದ್ದನು.

ಪ್ರಶಾಂತ್ ಅನೇಕ ಹುಡುಗಿಯರ ಜೊತೆ ಸುತ್ತಾಡಿರುವ ಫೋಟೋಗಳು ನನ್ನ ಬಳಿ ಇವೆ. ಈ ರೀತಿಯಾಗಿ ಪ್ರತಿದಿನ ಹಿಂಸೆ ಕೊಡುತ್ತಿದ್ದನು. ಕೊನೆಗೆ ಈ ಬಗ್ಗೆ ನಾನು ಕುಶಾಲನಗರದಲ್ಲಿ ಪೊಲೀಸರಿಗೆ ದೂರು ಕೂಡ ನೀಡಿದ್ದೆ. ನಾನು ದೂರು ನೀಡಿದ ಬಳಿಕ ನಮ್ಮ ಮನೆಗೆ ಬಂದು ಒತ್ತಾಯ ಪೂರ್ವಕವಾಗಿ ಅತ್ಯಾಚಾರ ಮಾಡಿದ್ದಾನೆ. ಎಫ್‍ಐಆರ್ ಕೂಡ ದಾಖಲಾಗಿತ್ತು. ನಂತರ ಪೊಲೀಸರು ಈ ಬಗ್ಗೆ ವಿಚಾರಣೆ ಮಾಡಿದ್ದರು. ಆಗ ಮತ್ತೆ ನನ್ನ ಸಹವಾಸಕ್ಕೆ ಬರಲ್ಲ ಎಂದು ಲಿಖಿತ ರೂಪದಲ್ಲಿ ಬರೆದು ಕೊಟ್ಟಿದ್ದಾನೆ. ಆದರೂ ಮನೆಗೆ ಬಂದು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನು. ಅಲ್ಲದೇ ನನ್ನ ತಂದೆಗೂ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದನು.

ನಾನು ಮೊದಲು ಸಂಜಯ್ ನಗರದಲ್ಲಿದ್ದೆ. ಆಗ ಪ್ರಶಾಂತ್ ನಾನು ಮನೆ ಮಾಡಿಕೊಡುತ್ತೇನೆ, ನನ್ನ ಒಟ್ಟಿಗೆ ಇರಬೇಕು ಎಂದು ಬ್ರಿಗೇಡ್ ಬಳಿ ಮನೆ ಮಾಡಿಕೊಟ್ಟಿದ್ದನು. ನಾನು ಅಲ್ಲೇ ಇದ್ದೆ, ಮನೆಗೆ ಪ್ರಶಾಂತ್ ಆಗಾಗ ಬಂದು ಹೋಗುತ್ತಿದ್ದನು. ಒಂದುವರೆ ತಿಂಗಳು ಮಾತ್ರ ನಾವಿಬ್ಬರು ಲಿವಿಂಗ್ ಟುಗೆಟರ್ ನಲ್ಲಿದ್ವಿ. ಈತನ ಬಗ್ಗೆ ತಿಳಿದ ಮೇಲೆ ನಾನು ಬೇರೆ ಮನೆಗೆ ಶಿಫ್ಟ್ ಆಗಿದ್ದೇನೆ. ನಾನು ದೂರು ದಾಖಲಿಸಿದ್ದರ ಪ್ರತಿಕಾರಕ್ಕಾಗಿ ನನ್ನ ವಿರುದ್ಧ ಈ ರೀತಿ ಸೇಡು ತೀರಿಸಿಕೊಳ್ಳುತ್ತಿದ್ದಾನೆ. ನಾನು ಅವನಿಗೆ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಈ ರೀತಿ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ದೃಶ್ಯ ಹೇಳಿದ್ದಾರೆ.

ಆತನಿಂದ ನನಗೆ ಜೀವ ಬೆದರಿಕೆ ಇತ್ತು. ಹೀಗಾಗಿ ನಾನು ದೂರು ಕೊಡಲು ಮುಂದಾಗಿಲ್ಲ. ನನ್ನನ್ನು ಯಾರು ಏನು ಮಾಡಲು ಸಾಧ್ಯವಿಲ್ಲ. ನಾನು ಈ ಹಿಂದೆ ಕೊಲೆ ಯತ್ನ ಮಾಡಿದ 20 ದಿನಗಳ ನಂತರ ಪೊಲೀಸರು ದೂರು ದಾಖಲಿಸಿದ್ದರು. ಈಗ ನೀನು ದೂರು ಕೊಟ್ಟರು ಏನು ಪ್ರಯೋಜನವಿಲ್ಲ ಎಂದು ಆತ ಈ ಹಿಂದೆ ಹೇಳಿದ್ದ. ಸದ್ಯಕ್ಕೆ ನಾನು ಪೊಲೀಸ್ ಠಾಣೆಗೆ ಹೋಗಿ ಮಾತನಾಡಿದ್ದೇನೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರಬೇಕು ಎಂದು ಘಟನೆಯ ಸಂಪೂರ್ಣ ಮಾಹಿತಿಯನ್ನು ದೃಶ್ಯ ವಿವರಿಸಿದ್ದಾರೆ.

https://www.youtube.com/watch?v=ExY9XZCYzZE

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv\

Share This Article
Leave a Comment

Leave a Reply

Your email address will not be published. Required fields are marked *