ಮತ್ತೊಂದು ಬಿಗ್ ಪ್ರಾಜೆಕ್ಟ್‌ಗೆ ದೀಪಿಕಾ ಪಡುಕೋಣೆ ನಾಯಕಿ

By
1 Min Read

ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಶಾರುಖ್‌ ಖಾನ್‌ (Shah Rukh Khan) ಜೊತೆಗಿನ ಸಿನಿಮಾ ಬೆನ್ನಲ್ಲೇ ನಟಿ ಮತ್ತೊಂದು ಬಂಪರ್‌ ಆಫರ್‌ ತಮ್ಮದಾಗಿಸಿಕೊಂಡಿದ್ದಾರೆ. ಪ್ರಭಾಸ್‌ ಸಿನಿಮಾದಲ್ಲಿ ನಟಿಸುವ ಚಾನ್ಸ್‌ ದಕ್ಕಿಸಿಕೊಂಡಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ಮತ್ತೆ ಚರ್ಚೆಗೆ ಗ್ರಾಸವಾಯ್ತು ಕಾರ್ತಿಕ್‌ ಆರ್ಯನ್‌, ಶ್ರೀಲೀಲಾ ಡೇಟಿಂಗ್ ವಿಚಾರ- ವಿಡಿಯೋ ವೈರಲ್

ಹೆರಿಗೆ ಬಳಿಕ ದೀಪಿಕಾ ಪಡುಕೋಣೆ ಮಗಳು ದುವಾ ಪಾಲನೆಯಲ್ಲಿ ಬ್ಯುಸಿಯಾಗಿದ್ದರು. ಇದೀಗ ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ನಟಿ ರೆಡಿಯಾಗಿದ್ದಾರೆ. ಶಾರುಖ್‌ ಜೊತೆಗಿನ ‘ಕಿಂಗ್‌’ ಚಿತ್ರದ ನಂತರ  ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಚಿತ್ರದಲ್ಲಿ ನಟಿಸಲು ದೀಪಿಕಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಭಾಸ್ (Prabhas) ಚಿತ್ರದಲ್ಲಿನ ಪಾತ್ರ ಇಷ್ಟವಾಗಿ ನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಎಲ್ಲದ್ದಕ್ಕೂ ಚಿತ್ರತಂಡದಿಂದ ಅಧಿಕೃತ ಘೋಷಣೆಯಾಗಬೇಕಿದೆ. ಇದನ್ನೂ ಓದಿ:ಕನ್ನಡ.. ಕನ್ನಡ ಇದಕ್ಕೇನೇ ಭಯೋತ್ಪಾದಕ ದಾಳಿ ನಡೆದಿದ್ದು – ವಿವಾದ ಮೈಮೇಲೆಳೆದುಕೊಂಡ ಸೋನು ನಿಗಮ್

‘ಸ್ಪಿರಿಟ್’ ಚಿತ್ರದಲ್ಲಿ ಪ್ರಭಾಸ್ ಅವರು ಎಂದೂ ನಟಿಸಿರದ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಮಾಸ್ ಆಗಿ ಅಬ್ಬರಿಸಲಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ.

ದೀಪಿಕಾ ಪಡುಕೋಣೆ ಕಳೆದ ವರ್ಷ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್‌ಗೆ ಜೊತೆಯಾಗಿ ನಟಿಸಿದ್ದರು. ಇದೀಗ ಮತ್ತೆ ಪ್ರಭಾಸ್ ಜೊತೆ ನಟಿಸುವ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

Share This Article