ಸದ್ದಿಲ್ಲದೇ ಹಸೆಮಣೆ ಏರಿದ ‘ಬಿಗ್ ಬಾಸ್’ ಖ್ಯಾತಿಯ ದೀಪಿಕಾ ದಾಸ್

Public TV
1 Min Read

ಕಿರುತೆರೆಯ ಬ್ಯೂಟಿ ದೀಪಿಕಾ ದಾಸ್ (Deepika Das) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ದಿಲ್ಲದೇ ಬಿಗ್ ಬಾಸ್ ಕನ್ನಡ 7ರ ಸ್ಪರ್ಧಿ (Bigg Boss Kannada 7) ಬೆಡಗಿ ಹಸೆಮಣೆ ಏರಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

ಕೃಷ್ಣ ರುಕ್ಮಿಣಿ, ನಾಗಿಣಿ ಸೀರಿಯಲ್ ಮೂಲಕ ಮೋಡಿ ಮಾಡಿರುವ ನಟಿ ದೀಪಿಕಾ ದಾಸ್ ಅವರು ಗೋವಾದಲ್ಲಿ (Goa) ಡೆಸ್ಟಿನೇಷನ್ ವೆಡ್ಡಿಂಗ್ (Wedding) ಆಗಿದ್ದಾರೆ. ಗೋವಾದ ಕಡಲ ತೀರದಲ್ಲಿ ಕರ್ನಾಟಕ ಮೂಲದ ದುಬೈ ಉದ್ಯಮಿಯನ್ನು ನಟಿ ಮದುವೆ ಆಗಿದ್ದಾರೆ.

ದೀಪಿಕಾ ಮದುವೆಯಲ್ಲಿ ಎರಡು ಕುಟುಂಬದ ಸದಸ್ಯರು, ಆಪ್ತರಷ್ಟೇ ಭಾಗಿದ್ದರು. ಮದುವೆಯ ಸುಂದರ ಫೋಟೋಗಳನ್ನು ಶೇರ್ ಮಾಡಿ ಕಾಮೆಂಟ್ ಬಾಕ್ಸ್ ಅನ್ನು ಆಫ್ ಮಾಡಿದ್ದಾರೆ. ಇದನ್ನೂ ಓದಿ:ಹಳ್ಳಿ ಸೊಗಡಿನ ಹಿಮ್ಮೇಳದಲ್ಲಿ ‘ಕೆರೆಬೇಟೆ’ ಟೈಟಲ್ ಸಾಂಗ್ ಬಿಡುಗಡೆ

ಮೂರು ಫೋಟೋಗಳನ್ನು ಹಂಚಿಕೊಂಡಿರುವ ದೀಪಿಕಾ ದಾಸ್ ‘ಮಿಸ್ಟರ್ & ಮಿಸೆಸ್ ಡಿ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಡಿ-ದೀಪಿಕಾ ಎಂಬುದು ಎಲ್ಲರಿಗೂ ಗೊತ್ತು. ಹುಡುಗನ ಹೆಸರು ಕೂಡ ‘ಡಿ’ ಅಕ್ಷರಿದಿಂದಲೇ ಶುರುವಾಗಲಿದೆಯಾ? ಗೊತ್ತಿಲ್ಲ.

 

View this post on Instagram

 

A post shared by Deepika Das (@deepika__das)

ದೀಪಿಕಾ ದಾಸ್ ಅವರ ಜೊತೆಗೆ ಫೋಟೋದಲ್ಲಿ ಇರುವ ವ್ಯಕ್ತಿ ಯಾರು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ದೀಪಿಕಾ ಕೂಡ ಆ ಬಗ್ಗೆ ಮಾಹಿತಿ ನೀಡಿಲ್ಲ. ಇದನ್ನೂ ಓದಿ:‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಎನ್ನುತ್ತಾ ಬಂತು ಮೋಷನ್ ಪೋಸ್ಟರ್

ದೀಪಿಕಾ ಹೊಸ ಬಾಳಿಗೆ ಶುಭವಾಗಲಿ ಎಂದು ಬಿಗ್ ಬಾಸ್ ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ (Shine Shetty) ಸೇರಿದಂತೆ ಹಲವರು ಶುಭಕೋರಿದ್ದಾರೆ.

Share This Article