ಕರಿಮಣಿ ಮಾಲೀಕನನ್ನು ಪರಿಚಯಿಸಿದ ದೀಪಿಕಾ ದಾಸ್

Public TV
1 Min Read

ಕಿರುತೆರೆಯ ಬ್ಯೂಟಿ ದೀಪಿಕಾ ದಾಸ್ (Deepika Das) ತಮ್ಮ ಅಭಿಮಾನಿಗಳಿಗೆ ಮಾರ್ಚ್ 1ರಂದು ಮದುವೆಯ ಸುದ್ದಿ ಹೇಳುವ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದರು. ‘ಬಿಗ್ ಬಾಸ್ ಕನ್ನಡ 7ರ’ ಸ್ಪರ್ಧಿ ದೀಪಿಕಾ ಮದುವೆಯ (Wedding) ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದರು. ಇದೀಗ ತನ್ನ ಕರಿಮಣಿ ಮಾಲೀಕನನ್ನು ನಟಿ ಪರಿಚಯಿಸಿದ್ದಾರೆ. ಇದನ್ನೂ ಓದಿ:ಅಂಬಾನಿ ಮಗನ ಅದ್ಧೂರಿ ಪ್ರೀ-ವೆಡ್ಡಿಂಗ್‌ನಲ್ಲಿ ಮಿಂಚಿದ ಸೆಲೆಬ್ರಿಟಿಗಳು

ಪತಿಯ ಹೆಸರು ದೀಪಕ್ (Deepak) ಎಂದು ರಿವೀಲ್ ಮಾಡಿ ತಮ್ಮ ಮದುವೆಯ ಬಗ್ಗೆ ನಟಿ ಸಂತಸ ವ್ಯಕ್ತಪಡಿಸಿದ್ದಾರೆ. ಪದ್ಧತಿಯ ಬದ್ಧವಾಗಿ, ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ನನ್ನ ಕನಸಾಗಿತ್ತು. ಇದೀಗ ಅದು ಈಡೇರಿದೆ ಎಂದು ನಟಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ದಿಢೀರ್ ಅಂತ ಆಗಿದ ಮದುವೆ ಅಲ್ಲ. ಈ ಮದುವೆಗೆ ಹಲವು ದಿನಗಳಿಂದ ಪ್ಲ್ಯಾನ್ ಮಾಡಲಾಗಿತ್ತು ಎಂದಿದ್ದಾರೆ.

‘ನಮ್ಮ ಆಸೆ ಮತ್ತು ಕನಸಿನಂತೆಯೇ ನಡೆದ ಮದುವೆ ಇದು ಎಂದು ಖುಷಿಯಿಂದ ಬರೆದುಕೊಂಡಿದ್ದಾರೆ. ಸರ್ಪ್ರೈಸ್‌ ಕೂಡ ಸ್ವೀಟ್ ಆಗಿದೆ. ನನಗೆ ನನ್ನ ಬಾಳ ಸಂಗಾತಿ ಸಿಕ್ಕಿದ್ದು, ಪಕ್ಕಾ ದೇಸಿ ಎಂದು ಬರೆದುಕೊಂಡಿದ್ದಾರೆ. ದಯವಿಟ್ಟು ನಮ್ಮ ಗೌಪ್ಯತೆಯನ್ನು ಗೌರವಿಸಿ’ ಎಂದು ದೀಪಿಕಾ ದಾಸ್ ಮನವಿ ಮಾಡಿದ್ದಾರೆ. ನಟಿಯ ಪೋಸ್ಟ್‌ಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

 

View this post on Instagram

 

A post shared by Deepika Das (@deepika__das)

ʻನಾಗಿಣಿ’ ಸೀರಿಯಲ್ ಬಿಗ್ ಬಾಸ್ ಸೀಸನ್ 7ರ ಮೂಲಕ ಮೋಡಿ ಮಾಡಿರುವ ನಟಿ ದೀಪಿಕಾ ದಾಸ್ ಅವರು ಗೋವಾದಲ್ಲಿ (Goa) ಡೆಸ್ಟಿನೇಷನ್ ವೆಡ್ಡಿಂಗ್ ಆಗಿದ್ದಾರೆ. ಗೋವಾದ ಕಡಲ ತೀರದಲ್ಲಿ ಕರ್ನಾಟಕ ಮೂಲದ ದುಬೈ ಉದ್ಯಮಿ ದೀಪಕ್‌ರನ್ನು ನಟಿ ಮದುವೆ ಆಗಿದ್ದಾರೆ.

ಮಾರ್ಚ್ 1ರಂದು ನಡೆದ ದೀಪಿಕಾ ಮದುವೆಯಲ್ಲಿ ಎರಡು ಕುಟುಂಬದ ಸದಸ್ಯರು, ಆಪ್ತರಷ್ಟೇ ಭಾಗಿದ್ದರು. ಮದುವೆಯ ಸುಂದರ ಫೋಟೋಗಳನ್ನು ಶೇರ್ ಮಾಡಿ ಕಾಮೆಂಟ್ ಬಾಕ್ಸ್ ಅನ್ನು ಆಫ್ ಮಾಡಿದ್ದರು.

Share This Article