… your content …

`ನಮ್ಮ ಹತ್ರ ಬರೋ ಅವಶ್ಯಕತೆ ಇಲ್ಲ’ – ಪುಷ್ಪಮ್ಮನಿಗೆ ಮತ್ತೆ ಟಾಂಗ್ ಕೊಟ್ಟ ದೀಪಿಕಾ ದಾಸ್

Public TV
1 Min Read

`ಕೊತ್ತಲವಾಡಿ’ ಚಿತ್ರದ ಮೂಲಕ ಸಿನಿಮಾ ನಿರ್ಮಾಪಕಿಯಾಗಿ ಎಂಟ್ರಿಯಾದ ಯಶ್ (Actor Yash) ತಾಯಿ ಪುಷ್ಪ ಅರುಣ್‌ಕುಮಾರ್ (Pushpa) ಸಂದರ್ಶನವೊಂದರಲ್ಲಿ ತಂಗಿ ಮಗಳು ನಟಿ ದೀಪಿಕಾ ದಾಸ್ ಕುರಿತು ಲಘುವಾಗಿ ಮಾತನಾಡಿದ್ದರು. ಈ ವಿಚಾರಕ್ಕೆ ದೀಪಿಕಾ ದಾಸ್ (Deepika Das) ಕೆರಳಿ ಕೆಂಡವಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ದೀಪಿಕಾ ದಾಸ್ `ಕೆಲವರಿಗೆ ಬೆಲೆ ಕೊಟ್ಟ ಮಾತ್ರಕ್ಕೆ ಅವರನ್ನ ಕಂಡರೆ ಭಯ ಇಲ್ಲಿ ಯಾರಿಗೂ ಇಲ್ಲ. ನನ್ನ ಬಗ್ಗೆ ಹೀನಾಯವಾಗಿ ಮಾತನಾಡೋ ಯೋಗ್ಯತೆ ಯಾರಿಗೂ ಇಲ್ಲ’ ಎಂದಿದ್ದರು.

ಇದೀಗ ಮತ್ತೆ ಸೋಶಿಯಲ್ ಮೀಡಿಯಾ ಮೂಲಕವೇ ಪುಷ್ಟ ಅವರ ಹೆಸರು ಹೇಳದೇ ಟಾಂಗ್ ಕೊಟ್ಟಿದ್ದಾರೆ. ದೀಪಿಕಾ ದಾಸ್‌ರನ್ನು ಮೀಟ್ ಮಾಡಿ ಮಾತನಾಡುತ್ತೀನಿ ಎಂದಿರುವ ಪುಷ್ಪ ಅವರು ಮಾತನಾಡಿರೋ ಆಡಿಯೋ ವೈರಲ್ ಆದ ಬೆನ್ನಲ್ಲೇ ದೀಪಿಕಾ ದಾಸ್ ಮತ್ತೆ ಒಂದಷ್ಟು ವಿಚಾರವನ್ನ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ವಿಷ್ಣು ಸಮಾಧಿ ನೆಲಸಮ, ಅಭಿಮಾನ್‌ ಸ್ಟುಡಿಯೋದ ಅವ್ಯವಹಾರ: ವಿಷ್ಣು ಫ್ಯಾನ್ಸ್ ಗರಂ

ಸೋಶಿಯಲ್ ಮೀಡಿಯಾ ಮೂಲಕ ದೀಪಿಕಾ ದಾಸ್, ದೊಡ್ಡಮ್ಮ ಪುಷ್ಪ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಮೇಲೆ ಪುಷ್ಪ ಅವರು ಮಾಧ್ಯಮಗಳಿಗೆ ಮಾತನಾಡಿರುವ ಆಡಿಯೋದಲ್ಲಿ `ಸತ್ಯ ಮಾತನಾಡಿದ್ದಕ್ಕೆ ಅವರಿಗೆ ಕೋಪ ಬಂದಿದೆ. ಅವರನ್ನ ಮೀಟ್ ಮಾಡಿ ಮಾತನಾಡ್ತೀನಿ’ ಎಂದಿದ್ದರು. ಈ ವಿಚಾರಕ್ಕೆ ಮತ್ತೆ ದೀಪಿಕಾ ದಾಸ್ ಸೋಶಿಯಲ್ ಮೀಡಿಯಾ ಮೂಲಕವೇ ಉತ್ತರ ಕೊಟ್ಟಿದ್ದಾರೆ. “ನಮ್ಮ ಹತ್ರ ಯಾರೂ ಬರೋ ಅವಶ್ಯಕತೆ ಇಲ್ಲ. ದೊಡ್ಡವರ ಅತಿರೇಕದ ಸಣ್ಣತನ ಇನ್ನಾದರೂ ಬಿಡಿ” ಎಂದಿದ್ದಾರೆ.

ದೀಪಿಕಾ ದಾಸ್ ಹೇಳಿದ್ದೇನು..?
ಸತ್ಯವನ್ನು ತಲೆ ಮೇಲೆ ಹೊಡೆದ ಹಾಗೆ ಹೇಳುವಂಥಹ ಬುದ್ಧಿ? ಯಾರೂ ಎಲ್ಲೂ ಹೋಗಿಲ್ಲ, ಯಾರೂ ನಮ್ಮ ಹತ್ರ ಬರುವ ಅವಶ್ಯಕತೆನೂ ಇಲ್ಲ. ಅನಾವಶ್ಯಕವಾಗಿ ಇಲ್ಲದ್ದನ್ನು ಮಾತನಾಡಿ ನನ್ನ ಹಾಗೂ ನನ್ನ ಕುಟುಂಬವನ್ನು ತರಬೇಡಿ. ದೊಡ್ಡವರ ಅತಿರೇಕದ ಸಣ್ಣತನ ಇನ್ನಾದರೂ ಬೇಡ. ಇನ್ನು ಇದರ ಮೇಲೆ ನಾನು ಮಾತಾಡೋಕೆ ಇಷ್ಟಪಡಲ್ಲ ಎಂದಿದ್ದಾರೆ.ಇದನ್ನೂ ಓದಿ: ಬಾಘಿ-4 ಟ್ರೈಲರ್‌ಗೆ ಮುಹೂರ್ತ ಫಿಕ್ಸ್

 

Share This Article