ಹೊಸ ಫೋಟೋಶೂಟ್‌ ಹಂಚಿಕೊಂಡ ದೀಪಿಕಾ ದಾಸ್‌

Public TV
1 Min Read

ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್ (Deepika Das) ಅವರು ಇತ್ತೀಚಿಗೆ ದುಬೈಗೆ (Dubai) ಹೋಗಿದ್ದರು. ಸುಂದರ ತಾಣಗಳಿಗೆ ನಟಿ ಭೇಟಿ ನೀಡಿದ್ದರು. ಸದ್ಯ ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಕಿರುತೆರೆಯಲ್ಲಿ ದೀಪಿಕಾ ದಾಸ್ ಸಖತ್ ಬೇಡಿಕೆಯಿದೆ. ಟಿವಿ ಪ್ರಿಯರಿಗೆ ದೀಪಿಕಾ ಎಂದರೆ ಅಚ್ಚು ಮೆಚ್ಚು. `ನಾಗಿಣಿ’ (Nagini) ಸೀರಿಯಲ್ ಮೂಲಕ ನಾಗಿಣಿಯಾಗಿ ತೆರೆಯ ಮೇಲೆ ರಂಜಿಸಿದ್ದ ನಟಿ ದೀಪಿಕಾ ಬಿಗ್ ಬಾಸ್ ರಿಯಾಲಿಟಿ ಶೋಗೆ (Bigg Boss Kannada) ಕಾಲಿಟ್ಟ ಮೇಲೆ ಮತ್ತಷ್ಟು ಜನಪ್ರಿಯತೆ ಗಳಿಸಿದ್ದರು.

ಇತ್ತೀಚಿನ ಬಿಗ್ ಬಾಸ್ 9ರಲ್ಲಿ ಟಾಪ್ 5 ಫೈನಲಿಸ್ಟ್‌ನಲ್ಲಿ ಒಬ್ಬರಾಗಿದ್ದರು. ಪ್ರವೀಣರ ಪೈಕಿ ನಟಿ ಭರ್ಜರಿ ಪೈಪೋಟಿ ನೀಡಿದ್ದರು. ಇತ್ತೀಚಿಗೆ ದುಬೈಗೆ ಹೋಗಿದ್ದ ಫೋಟೋಗಳನ್ನ ಇದೀಗ ಶೇರ್‌ ಮಾಡಿದ್ದಾರೆ. ಹಡಗಿನಲ್ಲಿ ನಿಂತು ನೈಟ್ ವೀವ್‌ನ ನಟಿ ಕಣ್ತುಂಬಿಕೊಂಡಿದ್ದಾರೆ. ಲೈಟ್ ಬಣ್ಣದ ಧಿರಿಸಿನಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:  ‘ಟ್ವಿಂಕಲ್’ ಹಾಡು ಹೇಳುತ್ತಾ ಬಂದ ಶಿವಾಜಿ ಸುರತ್ಕಲ್ 2

 

View this post on Instagram

 

A post shared by Deepika Das (@deepika__das)

ದೀಪಿಕಾ ದಾಸ್ ಅವರು ಮಹಿಳಾ ಪ್ರಧಾನ ಚಿತ್ರದ ಮೂಲಕ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ನಟಿಯನ್ನ ಬಿಗ್ ಸ್ಕ್ರಿನ್‌ನಲ್ಲಿ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *