ಗರುಡ ಪಕ್ಷಿಗೆ ಮುತ್ತಿಟ್ಟ ನಟಿ- ಮರಳುಗಾಡಿನಲ್ಲಿ ದೀಪಿಕಾ ದಾಸ್

Public TV
1 Min Read

ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್ (Deepika Das) ಅವರು ದುಬೈಗೆ ಹಾರಿದ್ದಾರೆ. ಇತ್ತೀಚಿಗೆ ‘ಅಂತರಪಟ’ (Antarapata)  ಸೀರಿಯಲ್‌ನಲ್ಲಿ ಗೆಸ್ಟ್ ರೋಲ್‌ನಲ್ಲಿ ದೀಪಿಕಾ ಮಿಂಚಿದ್ದರು. ಸದ್ಯ ಶೂಟಿಂಗ್‌ನಿಂದ ಬ್ರೇಕ್‌ನಲ್ಲಿರೋ ದೀಪಿಕಾ ದಾಸ್ ದುಬೈನಲ್ಲಿ ಮಸ್ತಿ ಮಾಡ್ತಿದ್ದಾರೆ. ಮರಳುಗಾಡಿನಲ್ಲಿ ಗರುಡ ಪಕ್ಷಿಗೆ ನಾಗಿಣಿ ನಾಯಕಿ ಮುದ್ದಾಡಿದ್ದಾರೆ. ನಟಿಯ ನಯಾ ಲುಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಕೃಷ್ಣ ರುಕ್ಮಿಣಿ, ನಾಗಿಣಿ (Nagini) ಸೀರಿಯಲ್‌ನಲ್ಲಿ ಮಿಂಚಿದ ದೀಪಿಕಾ ದಾಸ್ ಅವರು ಇತ್ತೀಚಿಗೆ ದೊಡ್ಮನೆಗೆ ಲಗ್ಗೆಯಿಡುವ ಮೂಲಕ ಗಮನ ಸೆಳೆದರು. ಲೇಡಿ ಬಾಸ್ ಆಗಿ ಗಮನ ಸೆಳೆದರು. ಈಗ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗಿ ಮಿಂಚಲು ದೀಪಿಕಾ ದಾಸ್ ರೆಡಿಯಾಗಿದ್ದಾರೆ. ಇದನ್ನೂ ಓದಿ:ಸೌತ್‌ನ ಇಬ್ಬರು ಸ್ಟಾರ್ ನಟರ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಹೀರೋಯಿನ್

ದುಬೈಗೆ ಹಾರಿರೋ ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್ ಅವರು ಅಲ್ಲಿನ ಸುಂದರ ತಾಣಗಳಿಗೆ ಭೇಟಿ ನೀಡುತ್ತಾ ಇದ್ದಾರೆ. ಡಿಫರೆಂಟ್ ಆಗಿರೋ ಕಲರ್‌ಫುಲ್ ಡ್ರೆಸ್‌ನಲ್ಲಿ ಮಿಂಚಿದ್ದರು. ನಟಿಯ ಫೋಟೋ ನೋಡ್ತಿದ್ದಂತೆ, ಇದೇನಿದು? ಪುಂಗಿ ದಾಸಯ್ಯನ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದೀರಾ ಅಂತಾ ಕಾಮೆಂಟ್ ಮಾಡ್ತಿದ್ದರು. ಈಗ ದುಬೈನ ಮರುಭೂಮಿಯಲ್ಲಿ ನಟಿ ಸಫಾರಿ ಮಾಡಿದ್ದಾರೆ. ಗರುಡ ಪಕ್ಷಿ ಜೊತೆ ನಟಿ ಮುತ್ತಿಟ್ಟಿದ್ದಾರೆ. ಈ ಕುರಿತ ದೀಪಿಕಾ, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

2016ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದ ‘ನಾಗಿಣಿ’ ಸೀರಿಯಲ್ ಮೂಲಕ ಕಿರುತೆರೆ ಪಯಣ ಆರಂಭಿಸಿದರು. ಈ ಧಾರಾವಾಹಿ ಸುಮಾರು 800ಕ್ಕೂ ಹೆಚ್ಚು ಸಂಚಿಕೆ ಮುಗಿಸಿ ದೀಪಿಕಾರವರಿಗೆ ಒಳ್ಳೆ ಖ್ಯಾತಿ ತಂದು ಕೊಟ್ಟಿತು. ಆ ಧಾರಾವಾಹಿಯಲ್ಲಿ ಅಮೃತಾ ಮತ್ತು ನಾಗಿಣಿ ಪಾತ್ರದಲ್ಲಿ ನಟಿಸಿದ್ದರು. ಇನ್ನು ‘ಪಾಯಲ್’ ಎನ್ನುವ ಚಿತ್ರದಲ್ಲಿ ನಟಿಸಿರುವ ಆಕೆ ‘ಅಂತರಪಟ’ (Antarapata) ಧಾರಾವಾಹಿಯಲ್ಲಿ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್