ನಟಿ ಚೈತ್ರಾ ಹಳ್ಳಿಕೇರಿ 25 ಕೋಟಿ ಬೇಡಿಕೆ ಇಟ್ಟರಾ? ನಟಿಯ ಆರೋಪಕ್ಕೆ ತಿರುಗೇಟು ನೀಡಿದ ಪತಿ ಬಾಲಾಜಿ

Public TV
2 Min Read

ನಿನ್ನೆಯಷ್ಟೇ ಸ್ಯಾಂಡಲ್ ವುಡ್ ನಟಿ ಚೈತ್ರಾ ಹಳ್ಳಿಕೇರಿ  ಸುದ್ದಿಗೋಷ್ಠಿ ನಡೆಸಿ, ಪತಿ ಬಾಲಾಜಿ ವಿರುದ್ಧ ಆರೋಪಗಳ ಮಳೆಯನ್ನೇ ಸುರಿಸಿದ್ದರು. ದೈಹಿಕ ಕಿರುಕುಳ ಮತ್ತು ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದರು. ಪತಿ ಮಾತ್ರವಲ್ಲ, ಮಾವ ಪೋತರಾಜ್ ಕೂಡ ತಮಗೆ ಹಿಂಸೆ ಕೊಡುತ್ತಿದ್ದಾರೆ ಎಂದು ಹೇಳಿದ್ದರು. ಇದನ್ನೂ ಓದಿ : 17 ವರ್ಷ ಲವ್, 2 ಮಕ್ಕಳಾದ ನಂತರ ಮದುವೆಯಾದ ನಿರ್ದೇಶಕ ಹನ್ಸಲ್ ಮೆಹ್ತಾ, ಸಫೀನಾ ಹುಸೇನ್

ಪತ್ನಿ ಚೈತ್ರಾ ಪ್ರೆಸ್ ಮೀಟ್ ಮಾಡಿದ ಬೆನ್ನಲ್ಲೆ ಪತಿ ಬಾಲಾಜಿ ಕೂಡ ಇಂದು ಮಾಧ್ಯಮ ಗೋಷ್ಠಿ ಕರೆದಿದ್ದರು. ಪತಿ ಚೈತ್ರಾ ಮಾಡಿದ ಆರೋಪಗಳೆಲ್ಲವೂ ಸುಳ್ಳು ಎಂದು, ತಾವಷ್ಟು ಆರೋಪಗಳನ್ನು ಪತ್ನಿಯ ಮೇಲೆ ಮಾಡಿದರು. ಚೈತ್ರಾ ಮಾಡಿರುವ ಅಷ್ಟೂ ಆರೋಪಗಳಲ್ಲೂ ಯಾವುದೇ ಹುರುಳಿಲ್ಲ ಎಂದರು. ಅಲ್ಲದೇ, ನಾಲ್ಕು ವರ್ಷಗಳಿಂದ ತಾವಿಬ್ಬರೂ ದೂರ ಇರುವುದಾಗಿಯೂ ಅವರು ಹೇಳಿದರು. ಇದನ್ನೂ ಓದಿ : ಧನುಶ್ ನಟನೆಯ ಹಾಲಿವುಡ್ ಸಿನಿಮಾದ ಟ್ರೇಲರ್ ರಿಲೀಸ್ : ಎಲ್ಲಿದ್ದಾರೆ ಧನುಶ್?

ಈಗಾಗಲೇ ನಾನು ಚೈತ್ರಾಗೆ ಕೋಟ್ಯಾಂತರ ರೂಪಾಯಿ ಕೊಟ್ಟಿರುವೆ. 5 ಕೋಟಿ ಮನೆ, 50 ಲಕ್ಷ ರೂಪಾಯಿ ಬೆಲೆಬಾಳುವ ಕಾರು ಕೊಟ್ಟಿರುವೆ. ಎರಡು ವರ್ಷಗಳ ಹಿಂದೆಯೇ ಅವರು ಡಿವೋರ್ಸ್ ಕೇಳಿದರು. ಹೆಚ್ಚು ಹಣಕ್ಕಾಗಿ ಡಿಮಾಂಡ್ ಕೂಡ ಮಾಡಿದರು. ಅವರು 25 ಕೋಟಿ ರೂಪಾಯಿ ಡಿಮಾಂಡ್ ಮಾಡುತ್ತಿದ್ದಾರೆ. ಅದನ್ನು ಕೊಡದೇ ಇದ್ದಾಗ ಮೀಡಿಯಾಗೆ ಹೋಗುವುದಾಗಿ ಬೆದರಿಸುತ್ತಾರೆ ಎಂದಿದ್ದಾರೆ ಬಾಲಾಜಿ. ಇದನ್ನೂ ಓದಿ : ಕನ್ನಡದ ಖ್ಯಾತ ನಟಿಯೊಬ್ಬಳು ನಿರ್ದೇಶಕನನ್ನೇ ಮಂಚಕ್ಕೆ ಕರೆದ ಕಥೆಗೆ ಮೆಗಾ ಟ್ವಿಸ್ಟ್

ಎರಡು ಮಕ್ಕಳು ಆದ ನಂತರ ಚೈತ್ರಾ ಅವರೇ ಮಿಸಸ್ ಇಂಡಿಯಾ ಸ್ಪರ್ಧೆಗೆ ಹೋಗಬೇಕೆಂದು ಬಾಲಾಜಿ ಅವರಲ್ಲಿ ಕೇಳಿದರಂತೆ. ತಮಗೆ ಫ್ರಿಡಂ ಬೇಕು ಅಂತ ಬೇರೆ ಮನೆಗೆ ಬದಲಾದರಂತೆ. ನಂತರ ಅವರ ಡಿಮಾಂಡ್ ಗಳು ಜಾಸ್ತಿ ಆಗುತ್ತಲೇ ಹೋದವು ಎಂದು ಬಾಲಾಜಿ ಆರೋಪ ಮಾಡಿದರು. ಇಬ್ಬರ ಮಧ್ಯೆ ಸಣ್ಣ ಪುಟ್ಟ ಜಗಳ ಆಗಿದ್ದನ್ನು ಒಪ್ಪಿಕೊಂಡ ಬಾಲಾಜಿ, ಅದರಿಂದಾಗಿ ಚೈತ್ರಾ ಅವರಿಗೆ ತಾವೇನೂ ತೊಂದರೆ ಮಾಡಿಲ್ಲ ಎಂದರು. ಚೈತ್ರಾ ಅವರನ್ನು ಯಾರೋ ದಾರಿ ತಪ್ಪಿಸುತ್ತಿದ್ದಾರೆ ಎಂದೂ ಅವರು ಆರೋಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *