ಬಿಪಾಶಾ ಬಸು ಮಗಳ ಹಾರ್ಟ್‌ನಲ್ಲಿ ಹೋಲ್- ಕಣ್ಣೀರಿಟ್ಟ ನಟಿ

Public TV
2 Min Read

ಬಾಲಿವುಡ್ (Bollywood) ನಟಿ ಬಿಪಾಶಾ ಬಸು(Bipasha Basu) ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗಳ ಆರೋಗ್ಯದ ಬಗ್ಗೆ ಬಿಪಾಶಾ ಭಾವುಕರಾಗಿದ್ದಾರೆ. ಮಗಳು ಹುಟ್ಟಿದ ಮೂರೇ ದಿನಕ್ಕೆ ಮಗಳಿಗೆ ಹಾರ್ಟ್‌ನಲ್ಲಿ ರಂಧ್ರವಿರುವ ವಿಚಾರದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಆಕೆಯ ಹೃದಯದಲ್ಲಿ ಎರಡು ರಂಧ್ರಗಳಿವೆ ಎಂದು ನಟಿ ಲೈವ್‌ನಲ್ಲಿ ಕಣ್ಣೀರಿಟ್ಟಿದ್ದಾರೆ.

ಹಿಂದಿ ಸಿನಿಮಾಗಳ ಮೂಲ ಸಂಚಲನ ಮೂಡಿಸಿದ ನಟಿ ಬಿಪಾಶಾ ಅವರು ಮದುವೆಯ ಬಳಿಕ ಮಗಳ ಆರೈಕೆ, ದಾಂಪತ್ಯ ಅಂತಾ ಬ್ಯುಸಿಯಾಗಿದ್ದಾರೆ. ಇದೀಗ ನಟಿ ನೇಹಾ ಧೂಫಿಯಾ (Neha Dhuphia) ನಡೆಸಿರುವ ಸೋಷಿಯಲ್ ಮೀಡಿಯಾ ಲೈವ್‌ನಲ್ಲಿ ಮಗಳ ಬಗ್ಗೆ ಆಘಾತಕಾರಿ ಸುದ್ದಿಯೊಂದನ್ನ ಬಿಪಾಶಾ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಶ್ರೀಲೀಲಾಗೆ ಒಲಿದು ಬಂದ ಅದೃಷ್ಟ- ಮೆಗಾಸ್ಟಾರ್ ಸಿನಿಮಾದಲ್ಲಿ ಕನ್ನಡತಿ

ಮಗು ಜನಿಸಿದ ಮೂರನೇ ದಿನಕ್ಕೆ ಈ ಶಾಕಿಂಗ್ ವಿಚಾರ ವೈದ್ಯರಿಗೆ ತಿಳಿಯಿತು. ಇದನ್ನು ವೈದ್ಯರು ಬಿಪಾಶಾಗೆ ಹೇಳಿದರು. ಆದರೆ, ಈ ವಿಚಾರವನ್ನು ಅವರು ಎಲ್ಲೂ ಹಂಚಿಕೊಳ್ಳಲಿಲ್ಲ. ಮಗುವಿನ ಹೃದಯದಲ್ಲಿ ರಂಧ್ರಗಳಿರುವ ವಿಚಾರ ಮೂರು ದಿನಗಳ ನಂತರ ನಮಗೆ ತಿಳಿಯಿತು. ಸರಿ ಆಗಬಹುದು ಎಂದು ಕಾದೆವು. ಆದರೆ, ಆಗಲಿಲ್ಲ. ಮೂರು ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ ತುಂಬಾ ಕಷ್ಟ. ಕೊನೆಗೂ ನಾವು ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡೆವು. ಬಳಿಕ ವೈದ್ಯರು ಓಪನ್ ಹಾರ್ಟ್ ಸರ್ಜರಿ ಮಾಡಿದರು ಎಂದು ನಟಿ ಬಿಪಾಶಾ ತಿಳಿಸಿದರು.

ಮಗಳು ಆಪರೇಷನ್ ಥಿಯೇಟರ್‌ನಲ್ಲಿದ್ದ ಆ 6 ಗಂಟೆ ನನ್ನ ಪ್ರಾಣವೇ ನಿಂತು ಹೋದಂತೆ ಅಂದು ಭಾಸವಾಗಿತ್ತು. ದೇವಿ (Devi) ಈಗ ಆರಾಮಾಗಿದ್ದಾಳೆ. ಮಗು ಗುಣಮುಖವಾಗಿದ್ದಾಳೆ ಎಂದು ತಿಳಿಯಲು ಪ್ರತಿ ತಿಂಗಳು ಮಗುವಿಗೆ ಹೃದಯದ ಸ್ಕ್ಯಾನ್ ಮಾಡಬೇಕಾಗುತ್ತದೆ. ಅದನ್ನು ನಾವು ಮಾಡಿಸುತ್ತಿದ್ದೇವೆ ಎಂದು ನಟಿ ಕಣ್ಣೀರು ಹಾಕಿದ್ದಾರೆ.

2016ರಲ್ಲಿ ಕರಣ್ ಗ್ರೋವರ್ (Karan Grover) ಜೊತೆ ಬಿಪಾಶಾ ಬಸು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಮುದ್ದಾದ ಮಗಳು ದೇವಿ ಪಾಲನೆಯಲ್ಲಿ ನಟಿ ಬ್ಯುಸಿಯಿದ್ದಾರೆ. ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್