ಬೆಂಗಳೂರು: ನಟಿಗೆ ಲೈಂಗಿಕ ಕಿರುಕುಳ (Sexual Harassment) ನೀಡಿದ ಆರೋಪದಡಿ ರಾಜಾಜಿನಗರ ಪೊಲೀಸರು ನಿರ್ಮಾಪಕ ಹೇಮಂತ್ ಕುಮಾರ್ (Hemanth Kumar) ಅವರನ್ನು ಬಂಧಿಸಿದ್ದಾರೆ.
ರಿಚ್ಚಿ (Richie)ಸಿನಿಮಾದ ಶೂಟಿಂಗ್ ವೇಳೆ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಟಿಯೊಬ್ಬರು ದೂರು ನೀಡಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೇಮಂತ್ ಕುಮಾರ್ ಅವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 700 ವರ್ಷಗಳ ಹಿಂದಿನ ಕಥೆಗೆ ಶ್ರೀಮುರಳಿ ನಾಯಕ: ಹೊಸ ಚಿತ್ರಕ್ಕೆ ಮುಹೂರ್ತ
ನಟಿಯ ಆರೋಪ ಏನು?
2022 ರಲ್ಲಿ ರಿಚ್ಚಿ ಹೆಸರಿನಲ್ಲಿ ಸಿನಿಮಾ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡಿದ್ದರು. ನಂತರ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿ ಎರಡು ಲಕ್ಷ ರೂ. ಹಣಕ್ಕೆ ಒಪ್ಪಂದವಾಗಿತ್ತು. ಮುಂಗಡ ಹಣವಾಗಿ ಹೇಮಂತ್ ಕುಮಾರ್ 60 ಸಾವಿರ ರೂ. ನೀಡಿದ್ದರು. ಇದನ್ನೂ ಓದಿ: ಕಾಂತಾರದ ಸಕ್ಸಸ್ ಜರ್ನಿ.. ದುನಿಯಾ ವಿಜಯ್ ವಿಭಿನ್ನವಾಗಿ ಅಭಿನಂದನೆ
ಸಿನಿಮಾ ಶೂಟಿಂಗ್ ವೇಳೆ ಅರೆಬರೆ ಬಟ್ಟೆ ಧರಿಸುವಂತೆ ಒತ್ತಾಯ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಚಿತ್ರ ಶೂಟಿಂಗ್ ಮುಗಿದ ಮೇಲೆ ಪ್ರಚಾರದ ನೆಪದಲ್ಲಿ ಖಾಸಗಿ ಹೋಟೆಲಿಗೆ ಒಬ್ಬಳೇ ಬರುವಂತೆ ಕಿರುಕುಳ ನೀಡಿದ್ದರು.
ಈ ಬೇಡಿಕೆಗೆ ಒಪ್ಪದೇ ಇದ್ದಾಗ ಚಿತ್ರದಲ್ಲಿ ಸೆನ್ಸಾರ್ ಆಗದ ಪೋಟೋಗಳನ್ನು ಸೋಷಿಯಲ್ ಮೀಡಿಯದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದರು. ಅಷ್ಟೇ ಅಲ್ಲದೇ ನನ್ನ ತಾಯಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನಟಿ ದೂರು ನೀಡಿದ್ದರು.