‘ನೀನಾದೆ ನಾ’ ಸೀರಿಯಲ್‌ನಿಂದ ಹೊರನಡೆದ ಭವ್ಯಶ್ರೀ ಪೂಜಾರಿ

By
1 Min Read

ಕಿರುತೆರೆಯ ಜನಪ್ರಿಯ ರಮೇಶ್ ಅರವಿಂದ್ (Ramesh Aravind) ನಿರ್ಮಾಣದ ‘ನೀನಾದೆ ನಾ’ (Neenade Na Serial) ಸೀರಿಯಲ್‌ನಿಂದ ಭವ್ಯಶ್ರೀ ಪೂಜಾರಿ (Bhavya Poojari) ಹೊರನಡೆದಿದ್ದಾರೆ. ಖುಷಿ ಮತ್ತು ದಿಲೀಪ್ ಶೆಟ್ಟಿ (Dileep Shetty) ಜೊತೆ ಭವ್ಯ ಕೂಡ ನಟನೆಗೆ ಸ್ಕೋಪ್ ಇರುವ ಶೈಲೂ ಎಂಬ ರೋಲ್‌ನಿಂದ ಗಮನ ಸೆಳೆದಿದ್ದರು. ಇದೀಗ ಈ ಸೀರಿಯಲ್‌ಗೆ ನಟಿ ಗುಡ್ ಬೈ ಹೇಳಿದ್ದಾರೆ.

ನಮಸ್ಕಾರ. ಕಳೆದ ಒಂದು ವರ್ಷದಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನೀನಾದೆ ನಾ ಧಾರಾವಾಹಿಯಲ್ಲಿ ನನ್ನ ಶೈಲೂ ಪಾತ್ರಕ್ಕೆ ಜೀವ ತುಂಬಿ, ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇದೀಗ ನನ್ನ ವೈಯುಕ್ತಿಕ ಕಾರಣಗಳಿಂದ, ಆ ಪಾತ್ರದಿಂದ ಹೊರ ಬಂದಿದ್ದೇನೆ. ಈ ಸಂದರ್ಭದಲ್ಲಿ ಇಂತಹ ಅದ್ಭುತವಾದ ಅವಕಾಶವನ್ನು ನೀಡಿದ ರಮೇಶ್ ಅರವಿಂದ್ ಅವರಿಗೆ ಹಾಗೂ ಸ್ಟಾರ್ ಸುವರ್ಣ ವಾಹಿನಿಗೆ ನನ್ನ ಹೃದಯಂತರಾಳದ ಧನ್ಯವಾದಗಳು ಎಂದು ನಟಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘ಹಯಗ್ರೀವ’ ತಂಡ ಸೇರಿಕೊಂಡ ನಟ ಸುನೀಲ್ ರಾವ್

ಇಷ್ಟು ದಿನ ನೀವೆಲ್ಲರೂ ನನ್ನ ಶೈಲೂ ಪಾತ್ರವನ್ನು ಮನಸಾರೆ ಮೆಚ್ಚಿ, ಹರಸಿದಿರಿ. ನಿಮ್ಮ ಪ್ರೀತಿಗೆ ನಾನು ಋಣಿ. ನಿಮಗೆಲ್ಲ ನನ್ನ ಕೋಟಿ ನಮನ. ಭೂಮಿ ದುಂಡಗಿದೆ. ಮತ್ತೊಂದು ಪಾತ್ರದೊಂದಿಗೆ, ಮತ್ತೆ ನಿಮ್ಮ ಮುಂದೆ ಬರುತ್ತೇನೆ. ಆಗ ಮತ್ತೆ ಭೇಟಿಯಾಗೋಣ. ಸದಾ ನಿಮ್ಮ ಆಶೀರ್ವಾದ, ಪ್ರೀತಿ ಇರಲಿ. ಧನ್ಯವಾದಗಳು ಎಂದಿದ್ದಾರೆ.

ಈ ಹಿಂದೆ ಕಮಲಿ, ನಾಗಿಣಿ 2, ಮಂಗಳಗೌರಿ ಮದುವೆ, ಅರಮನೆ ಗಿಳಿ, ಸುಂದರಿ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಭವ್ಯಶ್ರೀ ನಟಿಸಿದ್ದಾರೆ.

Share This Article