`ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು’…ಅಮ್ಮನಾಗುತ್ತಿರುವ ನಟಿ ಭಾವನಾ ಮೊದಲ ಮಾತು

Public TV
2 Min Read

ನಟಿ/ರಾಜಕಾರಣಿ ಭಾವನಾ ತಾಯಿಯಾಗುತ್ತಿರುವ ಸುದ್ದಿ ಈಗ ವ್ಯಾಪಕವಾಗಿ ಹಬ್ಬಿದೆ. ಅವರೀಗ ಆರು ತಿಂಗಳ ಗರ್ಭಿಣಿಯಾಗಿದ್ದು ಅವಳಿ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. IVF (ಐವಿಎಫ್) ಮೂಲಕ ಭಾವನಾ (Bhavana Ramanna) ಗರ್ಭ ಧರಿಸಿದ್ದು ಸೋಶಿಯಲ್ ಮೀಡಿಯಾಡಲ್ಲಿ (Social Media) ಪರ ವಿರೋಧದ ಟೀಕೆ ಹೆಚ್ಚಾಗುತ್ತಿದೆ.

ಈ ಕುರಿತು ಆಫಿಷಿಯಲ್ ಆಗಿ ಮೊದಲ ಮಾತನ್ನ ಇನ್‌ಸ್ಟಾ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ. 40ರ ಆಸುಪಾಸಿನಲ್ಲಿ ತಾವು ಗರ್ಭಿಣಿಯಾಗಲು (Bhavana Ramanna Pregnant) ನಿರ್ಧರಿಸಿದ್ದು ಯಾಕೆ..? ಆ ದಾರಿ ಹೇಗಿತ್ತು..? ತಂದೆ ಇಲ್ಲದೆ ಮಕ್ಕಳು ಹೇಗೆ ಬೆಳೆಯಬಹುದು..? ಯಾಕೆ ಸೂಕ್ತ ವಯಸ್ಸಿದ್ದಾಗಲೇ ತಾಯ್ತನದ ಬಗ್ಗೆ ಆಸಕ್ತಿ ಇರಲಿಲ್ಲ, ಅನ್ನೋ ವಿಷಯಗಳ ಕುರಿತು ಅವರು ಬಹಿರಂಗವಾಗಿ ಮನದ ಮಾತನ್ನ ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಇದನ್ನೂ ಓದಿ: ಮದುವೆಯಾಗದೆ ಅಮ್ಮನಾಗಲಿರುವ ಭಾವನಾ ರಾಮಣ್ಣ

ತಾಯಿ ಆಗುತ್ತಿರುವ ಕುರಿತು ಭಾವನಾ ಹೇಳಿದ್ದೇನು..?
ಇದು ನನ್ನ ಹೊಸ ಅಧ್ಯಾಯ, ಹೊಸ ಲಯ, ನಾನು ಇದನ್ನು ಹೇಳುತ್ತೇನೆಂದು ಎಂದಿಗೂ ಊಹಿಸಿರಲಿಲ್ಲ, ಆದರೆ ಇಲ್ಲಿ ನಾನು ಅವಳಿ ಮಕ್ಕಳೊಂದಿಗೆ ಆರು ತಿಂಗಳ ಗರ್ಭಿಣಿಯಾಗಿದ್ದೇನೆ. ನನಗೆ 20-30 ವರ್ಷ ಇದ್ದಾಗ ತಾಯ್ತನದ ಆಸೆ ನನ್ನ ಮನಸ್ಸಿನಲ್ಲಿ ಇರಲಿಲ್ಲ. 40 ವರ್ಷ ತುಂಬಿದಾಗ, ಆ ಆಸೆಯನ್ನು ನಿರಾಕರಿಸಲಾಗಲಿಲ್ಲ. ಒಂಟಿ ಮಹಿಳೆಯಾಗಿ, ದಾರಿ ಸುಲಭವಾಗಿರಲಿಲ್ಲ. ಅನೇಕ ಐವಿಎಫ್ ಸೆಂಟರ್‌ಗಳು ನನ್ನನ್ನು ತಿರಸ್ಕಾರ ಮಾಡಿದ್ದವು. ಬಳಿಕ ನಾನು ಡಾ. ಸುಷ್ಮಾರನ್ನು ಭೇಟಿಯಾದೆ. ಅವರು ನನ್ನ ಮೇಲೆ ಯಾವುದೇ ಯಾವುದೇ ಕೀಳು ಭಾವನೆ ಪಡದೇ ಸ್ವಾಗತಿಸಿದ್ರು. ಅವರ ಬೆಂಬಲದೊಂದಿಗೆ, ನಾನು ನನ್ನ ಮೊದಲ ಪ್ರಯತ್ನದಲ್ಲೇ ಗರ್ಭಿಣಿಯಾಗಿದ್ದೇನೆ. ಇದನ್ನೂ ಓದಿ: ಪ್ರಜ್ವಲ್ ಹುಟ್ಟುಹಬ್ಬಕ್ಕೆ `ಮಾಫಿಯಾ’ ಟೀಮ್ ಗಿಫ್ಟ್

ನನ್ನ ತಂದೆ, ಒಡಹುಟ್ಟಿದವರು ಮತ್ತು ಪ್ರೀತಿಪಾತ್ರರು ಹೆಮ್ಮೆ ಮತ್ತು ಪ್ರೀತಿಯಿಂದ ನನ್ನ ಪಕ್ಕದಲ್ಲಿ ನಿಂತರು. ಕೆಲವರು ನನ್ನ ಆಯ್ಕೆಯನ್ನು ಪ್ರಶ್ನಿಸಿದರು, ಆದರೆ ನನ್ನ ಮನಸ್ಸಿನಲ್ಲಿ ನಾನು ಎಲ್ಲದಕ್ಕೂ ಸಿದ್ಧಳಾಗಿದ್ದೆ. ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು, ಆದರೆ ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಬೇಷರತ್ತಾದ ಪ್ರೀತಿಯಿಂದ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ. ದಯೆ, ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ಬೆಳಯುತ್ತಾರೆ. ನಾನು ರೆಬೆಲ್ ಆಗಲು ಈ ಮಾರ್ಗವನ್ನು ಆರಿಸಿಕೊಂಡಿಲ್ಲ, ನನ್ನ ಸತ್ಯವನ್ನು ಗೌರವಿಸಲು ನಾನು ಈ ಮಾರ್ಗವನ್ನ ಆಯ್ಕೆ ಮಾಡಿಕೊಂಡೆ. ನನ್ನ ಕಥೆ, ಒಬ್ಬಳೇ ಒಬ್ಬಳು ಮಹಿಳೆಯಾದರೂ ತನ್ನನ್ನು ತಾನು ನಂಬುವಂತೆ ಪ್ರೇರೇಪಿಸಿದರೆ ಸಾಕು. ಶೀಘ್ರದಲ್ಲೇ, ಎರಡು ಪುಟ್ಟ ಆತ್ಮಗಳು ನನ್ನನ್ನು ಅಮ್ಮ ಎಂದು ಕರೆಯುತ್ತವೆ ಹಾಗೂ ಅದೇ ಎಲ್ಲವೂ ಆಗಿರುತ್ತದೆ. ಇದನ್ನೂ ಓದಿ: ಜಾನಿ ಮಾಸ್ಟರ್ ಜೊತೆಗಿನ ಫೋಟೋ: ಟೀಕೆಗೆ ಒಳಗಾದ ನಯನತಾರಾ-ವಿಘ್ನೇಶ್

Share This Article