ನಾಲ್ಕೇ ವರ್ಷಕ್ಕೆ ಡಿವೋರ್ಸ್ ಪಡೆದ ಯಶ್ ಚಿತ್ರದ ನಾಯಕಿ ಭಾಮಾ

Public TV
1 Min Read

ಹಜ ನಟನೆಯ ಮೂಲಕ ಗಮನ ಸೆಳೆದಿರುವ ಯಶ್ ನಟನೆಯ ‘ಮೊದಲ ಸಲ’ (Modala Sala) ಚಿತ್ರದ ನಾಯಕಿ ಭಾಮಾ (Bhama) ದಾಂಪತ್ಯ ಬದುಕಿನಲ್ಲಿ ಡಿವೋರ್ಸ್ (Divorce) ಬಿರುಗಾಳಿ ಬಿಸಿದೆ. ಉದ್ಯಮಿ ಅರುಣ್ ಜೊತೆಗಿನ ದಾಂಪತ್ಯಕ್ಕೆ ನಟಿ ಅಂತ್ಯ ಹಾಡಿದ್ದಾರೆ. ಸದ್ಯ ನಟಿಯ ಸೋಷಿಯಲ್ ಮೀಡಿಯಾದ ಪೋಸ್ಟ್ ಹಲವು ಚರ್ಚೆಗೆ ಗ್ರಾಸವಾಗಿದೆ.

2020ರ ಜನವರಿಯಲ್ಲಿ ಉದ್ಯಮಿ ಅರುಣ್ ಜಗದೀಶ್ (Arun Jagadish) ಎಂಬುವವರನ್ನು ಭಾಮಾ ವರಿಸಿದ್ದರು. ಮನೆಯವರೇ ಹುಡುಕಿ ಮಾಡಿದ ಅರೇಂಜ್ಡ್ ಮದುವೆ ಅದಾಗಿತ್ತು. ಅರುಣ್ ಮತ್ತು ಭಾಮಾ ಜೋಡಿಗೆ ಒಬ್ಬಳು ಮಗಳು ಇದ್ದಾಳೆ. ಈಗ ಇದೇ ಜೋಡಿ ದೂರ ದೂರವಾಗಿದ್ದಾರೆ. ಅರುಣ್ ಜೊತೆಗಿನ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ದರು. ತಮ್ಮ ಹೆಸರಿನ ಪಕ್ಕ ಇರುವ ಅರುಣ್ ಹೆಸರನ್ನು ಕೂಡ ತೆಗೆದಿದ್ದರು. ಇದನ್ನೂ ಓದಿ:ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಮದುವೆ ಡೇಟ್ ಫಿಕ್ಸ್

 

View this post on Instagram

 

A post shared by Bhamaa (@bhamaa)

ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಭಾಮಾ, ಪರೋಕ್ಷವಾಗಿ ನಾನೀಗ ಒಂಟಿ ಎಂದು ಬರೆದುಕೊಂಡಿದ್ದಾರೆ. ಮಗಳು ಗೌರಿ ಜೊತೆಗಿನ ಫೋಟೋವನ್ನು ಹಂಚಿಕೊಂಡ ಭಾಮಾ, ನಾನು ‘ಸಿಂಗಲ್ ಮದರ್’ ಆಗಿದ್ದು ಮತ್ತಷ್ಟು ಬಲ ನೀಡಿತು ಎಂದು ಬರೆದುಕೊಂಡಿದ್ದಾರೆ.

2010ರಲ್ಲಿ ನಟ ಯಶ್ ಜೊತೆಗೆ ಮೊದಲ ಸಲ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೂ ಪದಾರ್ಪಣೆ ಮಾಡಿದರು. ಅದಾದ ಮೇಲೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಶೈಲೂ, ಒಂದು ಕ್ಷಣದಲ್ಲಿ, ಆಟೋ ರಾಜ, ಬರ್ಫಿ, ಅಪ್ಪಯ್ಯ, ಅಂಬರ, ಅರ್ಜುನ, ರಾಗ ಸಿನಿಮಾಗಳ ಮೂಲಕ ಕನ್ನಡದಲ್ಲೂ ಗಮನ ಸೆಳೆದ ನಟಿ. ಈಗ ಇದೇ ನಟಿಯ ದಾಂಪತ್ಯ ಜೀವನಕ್ಕೆ ಬ್ರೇಕ್ ಬಿದ್ದಿದೆ.

Share This Article