ಟ್ರೋಲ್‌ನಿಂದ ಬೇಸತ್ತ ಆಯೇಶಾ ಟಾಕಿಯಾ- ಇನ್ಸ್ಟಾಗ್ರಾಂ ಅಕೌಂಟ್ ಡಿಲೀಟ್

Public TV
1 Min Read

ಟಿ ಆಯೇಶಾ ಟಾಕಿಯಾ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚಿನ ಆಯೇಶಾ (Ayesha Takia) ಫೋಟೋವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿದೆ. ಈ ಬೆನ್ನಲ್ಲೇ ಇನ್ಸ್ಟಾಗ್ರಾಂ ಅಕೌಂಟ್ ಡಿಲೀಟ್ ಮಾಡಿದ್ದಾರೆ.‌ ಇದನ್ನೂ ಓದಿ:ರಾಧೆಯಾದ ಮಿಲ್ಕಿಬ್ಯೂಟಿ ತಮನ್ನಾ

ಆಯೇಶಾ ಚಿತ್ರರಂಗ ಬರುವ ಸಮಯಕ್ಕೂ ಇದೀಗ ಇರುವ ರೀತಿಗೂ ಕೊಂಚ ಬದಲಾವಣೆ ಆಗಿದೆ. ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಲೇಟೆಸ್ಟ್ ಫೋಟೋವೊಂದನ್ನು ಹಂಚಿಕೊಂಡಿದ್ದರು. ಆ ಫೋಟೋದಲ್ಲಿ ಗುರುತೇ ಸಿಗದಷ್ಟು ಬದಲಾಗಿ ಬಿಟ್ಟಿದ್ದಾರೆ. ಇದನ್ನೂ ನೋಡಿದ ಕೆಲವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಹೀಗಾಗಿ ಬಿಟ್ಟಿದ್ದಾರೆ ಎಂದೆಲ್ಲಾ ನಟಿಗೆ ಟೀಕೆ ಮಾಡಿದ್ದಾರೆ.

ನಟಿಯ ಈಗೀನ ಫೋಟೋವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯ್ತು. ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್ ನೋಡಿ ಬೇಸತ್ತ ಆಯೇಶಾ, ಇನ್ಸ್ಟಾಗ್ರಾಂ ಅಕೌಂಟ್ ಅನ್ನೇ ಡಿಲೀಟ್ ಮಾಡಿದ್ದಾರೆ. ನೆಟ್ಟಿಗರ ಕೊಂಕು ಮಾತಿಗೆ ಅಂತ್ಯ ಹಾಡಿದ್ದಾರೆ.

ಅಂದಹಾಗೆ, ಸನ್‌ಡೇ, ವಾನ್‌ಟೆಡ್, ಶಾದಿ ನಂ 1, ಸೂಪರ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಆಯೇಶಾ ನಟಿಸಿದ್ದಾರೆ.

Share This Article