ಅಥಿಯಾ ಶೆಟ್ಟಿ ಪ್ರೆಗ್ನೆನ್ಸಿ ಬಗ್ಗೆ ಸುಳಿವು ಕೊಟ್ಟ ಸುನೀಲ್ ಶೆಟ್ಟಿ

Public TV
1 Min Read

ಬಾಲಿವುಡ್ ಬ್ಯೂಟಿ ಅಥಿಯಾ ಶೆಟ್ಟಿ, ಕೆ.ಎಲ್ ರಾಹುಲ್ (K.L Rahul) ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಡ್ಯಾನ್ಸ್ ಶೋವೊಂದರಲ್ಲಿ ಪುತ್ರಿ ಅಥಿಯಾ ಪ್ರೆಗ್ನೆನ್ಸಿ ಬಗ್ಗೆ ಸುನೀಲ್ ಶೆಟ್ಟಿ ಸುಳಿವು ನೀಡಿದ್ದಾರೆ. ಮಗಳ ಬಗ್ಗೆ ಸುನೀಲ್‌ ಆಡಿರುವ ಮಾತು ಸಖತ್‌ ಸದ್ದು ಮಾಡುತ್ತಿದೆ.

‘ಡ್ಯಾನ್ಸ್ ದೀವಾನೆ’ ಶೋನಲ್ಲಿ ನಿರೂಪಕಿ, ಅಜ್ಜನಾಗುವ ಕುರಿತು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಸುನೀಲ್ ಶೆಟ್ಟಿ (Suniel Shetty) ಪ್ರತಿಕ್ರಿಯಿಸಿ, ಹೌದು ಮುಂದಿನ ಸೀಸನ್‌ಗೆ ಬಂದಾಗ ನಾನು ವೇದಿಕೆಯ ಮೇಲೆ ಅಜ್ಜನಂತೆಯೇ ಓಡಾಡುತ್ತೇನೆ ಎಂದು ಸುನೀಲ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಸಾರಾ ಟೆಂಪಲ್‌ ರನ್‌- ಬಡವರಿಗೆ ಸಿಹಿ ಹಂಚಿದ ನಟಿ

ಸುನೀಲ್ ಶೆಟ್ಟಿ ಈ ಹೇಳಿಕೆ ನೀಡಿದ ನಂತರ ಅಥಿಯಾ ಶೆಟ್ಟಿ (Athiya Shetty) ಪ್ರೆಗ್ನೆಂಟ್ (Pregnant) ಆಗಿದ್ದಾರಾ? ಹಾಗಾಗಿ ಈ ರೀತಿಯ ಹೇಳಿಕೆ ನೀಡಿದ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಅದಕ್ಕೆ ಸರಿಯಾಗಿ ಮದುವೆ ನಂತರ ಸಿನಿಮಾಗಳಿಂದ ನಟಿ ದೂರವಿದ್ದಾರೆ. ಇತ್ತೀಚೆಗೆ ಯಾವುದೇ ಬಾಲಿವುಡ್‌ಗೆ ಸಂಬಂಧಿಸಿದ ಪಾರ್ಟಿಗಳಲ್ಲಿ ಅಥಿಯಾ ಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ ಪ್ರೆಗ್ನೆನ್ಸಿ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ.

ಅಥಿಯಾ ಶೆಟ್ಟಿ- ಕೆ.ಎಲ್‌ ರಾಹುಲ್‌ ಮದುವೆಯಾಗಿ ಒಂದು ವರ್ಷ ಕಳೆದಿದೆ. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು. ಈಗ ಈ ಜೋಡಿ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.

Share This Article