‘ಗಜನಿ’ ನಟಿ ಆಸಿನ್ ದಾಂಪತ್ಯದಲ್ಲಿ ಬಿರುಕು?

Public TV
2 Min Read

ಜನಿ, ಲಂಡನ್ ಡ್ರೀಮ್ಸ್, ರೆಡಿ, ಹೌಸ್‌ಫುಲ್ 2 (Housefull 2) ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಸಿನ್ ಇದೀಗ ತಮ್ಮ ವೈವಾಹಿಕ ಬದುಕಿನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಪತಿ ರಾಹುಲ್ ಶರ್ಮಾಗೆ(Rahul Sharma) ಆಸಿನ್ (Asin) ಡಿವೋರ್ಸ್ (Divorce) ನೀಡಲಿದ್ದಾರೆ ಎಂಬ ಸುದ್ದಿ ಇದೀಗ ಚಿತ್ರರಂಗದಲ್ಲಿ ಸುದ್ದಿಯಲ್ಲಿದ್ದಾರೆ. ಇದು ಗಾಸಿಪ್ ಪ್ರಿಯರ ಬಾಯಿಗೆ ಆಹಾರವಾಗಿದೆ.

ಬಹುಭಾಷಾ ನಟಿ ಆಸಿನ್ ಅವರು ಕೆಲ ವರ್ಷಗಳಿಂದ ಸಿನಿಮಾ ರಂಗದಿಂದ ದೂರವಿದ್ದಾರೆ. ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. 2015ರಲ್ಲಿ ‘ಆಲ್ ಈಸ್ ವೆಲ್’ ಎಂಬ ಚಿತ್ರದಲ್ಲಿ ಆಸಿನ್ ನಟಿಸಿದ್ದರು. ಇದಾದ ಬಳಿಕ ಯಾವುದೇ ಸಿನಿಮಾದಲ್ಲೂ ಆಸಿನ್ ನಟಿಸಿಲ್ಲ.

ಈಗ ವೈವಾಹಿಕ ಬದುಕಿನ ವಿಚಾರವಾಗಿ ನಟಿ ಆಸಿನ್ ಸದ್ದು ಮಾಡ್ತಿದ್ದಾರೆ. ಆಸಿನ್ ಅವರು ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ ಎನ್ನುವ ಸುದ್ದಿ ವೈರಲ್ ಆಗಿದ್ದು ಸದ್ಯದಲ್ಲೇ ಪತಿ ರಾಹುಲ್ ಶರ್ಮಾ ಅವರಿಂದ ವಿಚ್ಛೇದನ ಪಡೆದು ದೂರ ಆಗಲಿದ್ದಾರಂತೆ. ಮಲಯಾಳಿ ಮೂಲದ ಈ ನಟಿ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ್ದರು. ತನ್ನ ಸಿನಿ ಜೀವನ ಉತ್ತುಂಗದಲ್ಲಿರುವಾಗಲೇ ಆಸಿನ್, ಮೈಕ್ರೋಮ್ಯಾಕ್ಸ್‌ ಸಿಇಓ ರಾಹುಲ್ ಶರ್ಮಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದನ್ನೂ ಓದಿ:ಕಿಚ್ಚನ ಮುಂದಿನ ಚಿತ್ರಕ್ಕೆ ಹೊಸ ನಿರ್ದೇಶಕ: ಅವರನ್ನ ಬಿಟ್ಟು ಇವರಾರು?

ಆಸಿನ್ ಎನ್ನುವುದಕ್ಕಿಂತ ಗಜನಿ(Ghajini)  ನಟಿ ಎಂದರೆ ಎಲ್ಲರಿಗೂ ನೆನಪಾಗುತ್ತೆ. 2015ರಲ್ಲಿ ರಿಲೀಸ್ ಆಗಿದ್ದ ‘ಗಜನಿ’ ಚಿತ್ರದ ಆಮೀರ್ ಖಾನ್‌ಗೆ ಅಸಿನ್ ನಾಯಕಿಯಾಗಿದ್ದರು. ನಟ ಸೂರ್ಯ ಜೊತೆ ಕಾಣಿಸಿಕೊಂಡಿದ್ದ ಆಸಿನ್ ಅಭಿಮಾನಿಗಳ ಹೃದಯ ಗೆದ್ದರು. ಈ ಸಿನಿಮಾ ಬಳಿಕ ಆಸಿನ್ ಸೌತ್‌ನಿಂದ ಬಾಲಿವುಡ್‌ಗೆ ಜಿಗಿದರು. ಹಿಂದಿಯಲ್ಲಿ ಒಂದಿಷ್ಟು ಸಿನಿಮಾ ಮಾಡುವಾಗಲೇ ಆಸಿನ್ ಮದುವೆಯಾದರು. ಇದೀಗ ಆಸಿನ್-‌ ರಾಹುಲ್‌ ಇಬ್ಬರ ದಾಂಪತ್ಯ ಬದುಕು ಡಿವೋರ್ಸ್ ಹಂತಕ್ಕೆ ಬಂದಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆಸಿನ್- ರಾಹುಲ್ ನಡುವೆ ಯಾವುದು ಸರಿ ಇಲ್ಲ ಇಬ್ಬರೂ ದೂರ ಆಗಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಅಷ್ಟಕ್ಕೂ ಈ ವಿಚಾರ ನಿಜಾನಾ.? ಎಂಬುದನ್ನ ಮುಂದಿನ ದಿನಗಳಲ್ಲಿ ಸ್ಪಷ್ಟಪಡಿಸಬೇಕಿದೆ.

Share This Article
ಹೊಸ ಲುಕ್‌ನಲ್ಲಿ ಹಾಟ್ ಆಗಿ ಮಿಂಚಿದ ಮಿಲ್ಕಿ ಬ್ಯೂಟಿ ಹೊಸ ಫೋಟೋಶೂಟ್‌ನಲ್ಲಿ ಹರ್ಷಿಕಾ ಹಾಟ್ ಪೋಸ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡ ಕೆಜಿಎಫ್ ನಟಿ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಶಿಕಾ ರಂಗನಾಥ್‌ ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ ಹಾಟ್‌ ಲುಕ್‌ ಬೆಡಗಿ ಸಾನ್ಯಾ ಹಾಟ್ ಬ್ಯೂಟಿ ಲಕ್ಷ್ಮಿ ರೈ: ಬೆಳಗಾವಿ ಸುಂದರಿಯ ಫೋಟೋ ವೈರಲ್ ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ ಹಾಟ್ ಆಗಿ ಕಾಣಿಸಿಕೊಂಡ ಸ್ಯಾಮ್..! ಹಾಟ್ ಅವತಾರದಲ್ಲಿ ಮಾನ್ವಿತಾ