ಬ್ರೈಡಲ್ ಪಾರ್ಟಿ ಸಂಭ್ರಮದಲ್ಲಿ ಆಶಿಕಾ ರಂಗನಾಥ್ ಸಹೋದರಿ ಅನುಷಾ

Public TV
1 Min Read

ಸ್ಯಾಂಡಲ್‌ವುಡ್‌ನ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ (Ashika Ranganath) ಅಕ್ಕ ಅನುಷಾ (Anusha) ಅವರು ಮದುವೆಗೆ ಸಜ್ಜಾಗಿದ್ದಾರೆ. ಇದೇ ಖುಷಿಯಲ್ಲಿ ಸಹೋದರಿ, ತಂಗಿ ಆಶಿಕಾ ಜೊತೆ ಬ್ರೈಡಲ್ ಪಾರ್ಟಿ ಮಾಡಿದ್ದಾರೆ. ಈ ಕುರಿತ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

‘ಗೋಕುಲದಲ್ಲಿ ಸೀತೆ’ ಎಂಬ ಧಾರಾವಾಹಿ ಸೇರಿದಂತೆ ಸಿನಿಮಾದಲ್ಲಿ ನಟಿಸಿರುವ ಅನುಷಾ ರಂಗನಾಥ್ (Anusha Ranganath) ಅವರು ಈಗ ಮದುವೆಗೆ ಸಜ್ಜಾಗಿದ್ದಾರೆ. ಖಾಸಗಿ ರೆಸಾರ್ಟ್‌ವೊಂದರಲ್ಲಿ ಬ್ರೈಡಲ್ ಪಾರ್ಟಿ ಮಾಡುವ ಮೂಲಕ ಅನುಷಾ & ಟೀಮ್‌ ಸಂಭ್ರಮಿಸಿದೆ. ಇದನ್ನೂ ಓದಿ:ನೀವಿಲ್ಲ ಅಂದ್ರೆ ಈ ಸೀಸನ್ ಅಪೂರ್ಣ- ಸಂಗೀತಾ, ವಿನಯ್‌ಗೆ ಕಿಚ್ಚನ ಚಪ್ಪಾಳೆ

ತಂಗಿ ಆಶಿಕಾ ರಂಗನಾಥ್, ಸಿರಿ ಪ್ರಹ್ಲಾದ್, ಸುಶ್ಮಿತಾ ಗೌಡ ಮತ್ತು ಆಪ್ತರ ಜೊತೆ ಸೇರಿ ಬ್ರೈಡ್ ಪಾರ್ಟಿ ಮಾಡಿ ಮದುವೆ ಹುಡುಗಿ ಅನುಷಾ ಸಂಭ್ರಮಿಸಿದ್ದಾರೆ. ಇನ್ನೂ ಖುಷಿಯಿಂದ ತಂಗಿ ಆಶಿಕಾರನ್ನು ಎತ್ತಿಕೊಂಡು ಅನುಷಾ ಖುಷಿಯಿಂದ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಈ ಬ್ರೈಡಲ್ ಪಾರ್ಟಿಯಲ್ಲಿ ಕೇಕ್‌ನಲ್ಲಿ ಬ್ರೈಡ್ ಎಂದು ಬರೆದಿರೋದ್ರಿಂದ ಮದುಮಗಳು ಎಂಬುದು ರಿವೀಲ್ ಆಗಿದೆ. ಆದರೆ ಮದುವೆ ಯಾವಾಗ? ಹುಡುಗ ಯಾರು ಎಂಬುದು ರಿವೀಲ್ ಆಗಿಲ್ಲ. ಈ ಸುದ್ದಿ ತಿಳಿಯುತ್ತಿದ್ದಂತೆ, ಇದೀಗ ಅಭಿಮಾನಿಗಳು ನಟಿಗೆ ಶುಭಕೋರುತ್ತಿದ್ದಾರೆ.

ಕಿರುತೆರೆಯ ‘ಗೋಕುಲದಲ್ಲಿ ಸೀತೆ’ ಸೀರಿಯಲ್, 10, ಕೌರವ ಸಿನಿಮಾ, ‘ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ’ ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ಅನುಷಾ ನಟಿಸಿದ್ದಾರೆ. ಆದರೆ ಆಶಿಕಾಗೆ ಸಿನಿಮಾರಂಗದಲ್ಲಿ ಸಿಕ್ಕಂತಹ ಚಾರ್ಮ್ ಅನುಷಾಗೆ ಕೈಹಿಡಿಯಲಿಲ್ಲ.

Share This Article