‘ಪುಷ್ಪ 2’ ಹಾಡಿಗೆ ಸೊಂಟ ಬಳುಕಿಸಿದ ಆಶಿಕಾ ರಂಗನಾಥ್

Public TV
1 Min Read

ಹುನಿರೀಕ್ಷಿತ ‘ಪುಷ್ಪ 2’ (Pushap 2) ಸಿನಿಮಾದ ಹಾಡುಗಳು ಸಖತ್ ಸದ್ದು ಮಾಡುತ್ತಿವೆ. ಅದರಲ್ಲೂ ಇತ್ತೀಚೆಗೆ ರಿಲೀಸ್ ಆದ ಸೂಸೇನೆ ಎಂಬ ಹಾಡಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಹಾಡಿಗೆ ನಟಿ ಆಶಿಕಾ ರಂಗನಾಥ್ (Ashika Ranganath) ಕೂಡ ಹೆಜ್ಜೆ ಹಾಕಿದ್ದಾರೆ.

 

View this post on Instagram

 

A post shared by Ashika Ranganath (@ashika_rangnath)

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಪುಷ್ಪ 2 ಸಿನಿಮಾ ಸೂಸೇನೆ ಸಾಂಗ್‌ಗೆ ಈಗಾಗಲೇ ಸಾಕಷ್ಟು ಜನ ರೀಲ್ಸ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಇದರ ನಡುವೆ ಆಶಿಕಾ ಕೂಡ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಸೊಂಟ ಬಳುಕಿಸಿದ ಆಶಿಕಾಗೆ ಬಗೆ ಬಗೆಯ ಕಾಮೆಂಟ್ಸ್ ಹರಿದು ಬರುತ್ತಿವೆ. ಇದನ್ನೂ ಓದಿ:ಕಾನೂನಿಗಿಂತ ಯಾರು ಮೇಲಲ್ಲ, ಈ ಕೃತ್ಯ ಮಾಡುವ ವ್ಯಕ್ತಿತ್ವ ದರ್ಶನ್‌ದಲ್ಲ- ಮೌನ ಮುರಿದ ಸುಮಲತಾ

ಅಂದಹಾಗೆ, ನಟಿ ಆಶಿಕಾ ಕೂಡ ಕನ್ನಡದ ಜೊತೆ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರಿಗೂ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ.

Share This Article