ಅಮ್ಮನ ಜೊತೆ ಪೆದ್ದಮ್ಮನ ಆಶೀರ್ವಾದ ಪಡೆದ ನಟಿ ಆರಾಧನಾ

Public TV
1 Min Read

ಕನಸಿನ ರಾಣಿ ಮಾಲಾಶ್ರೀ (Malashri) ಮಗಳ ಜೊತೆ ಪೆದ್ದಮ್ಮನ ದರ್ಶನ ಮಾಡಿದ್ದಾರೆ. ಹೈದ್ರಾಬಾದ್‍ನ ಜುಬಲಿ ಹಿಲ್ಸ್‍ನಲ್ಲಿರುವ ಪೆದ್ದಮ್ಮ ದೇವಸ್ಥಾನ ಅಲ್ಲಿನ ಸುಪ್ರಸಿದ್ಧ ದೇವಸ್ಥಾನದಲ್ಲೊಂದು. ಕರ್ನಾಟಕದಲ್ಲಿ ಮೆಜೆಸ್ಟಿಕ್‍ನಲ್ಲಿರುವ ಅಣ್ಣಮ್ಮ ದೇವಿಯ ಮೇಲಿನ ನಂಬಿಕೆಯಂತೆ ಹೈದ್ರಾಬಾದ್‍ನಲ್ಲಿ ಪೆದ್ದಮ್ಮ ದೇವಿಯ ಮೇಲೆ ಭಕ್ತರ ಅಪಾರ ನಂಬಿಕೆ ಇದೆ. ಹೀಗಾಗಿ ಗೌರಿ ಹಬ್ಬದ ದಿನ ಅಲ್ಲಿನ ಪೆದ್ದಮ್ಮನ ದರ್ಶನ ಮಾಡಿದ್ದಾರೆ ಮಾಲಾಶ್ರೀ ಹಾಗೂ ಪುತ್ರಿ ಆರಾಧನಾ (Aradhana Ram).

ಬಾಲಯ್ಯರ 50ನೇ ವರ್ಷದ ಸಿನಿಮಾ ಜರ್ನಿ ವಿಶೇಷವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮಕ್ಕೆ ಮಾಲಾಶ್ರೀ ಮಗಳ ಸಮೇತ ಅತಿಥಿಯಾಗಿ ತೆರಳಿದ್ದರು. ಹಲವು ದಿನ ಅಲ್ಲೇ ಉಳಿದಿದ್ದಾರೆ. ಅಷ್ಟಕ್ಕೂ ಆಂಧ್ರನಾಡು ಮಾಲಾಶ್ರೀಯ ತವರುಮನೆ ಕೂಡ. ಹೀಗಾಗಿ ಆಂಧ್ರಕ್ಕೆ ತೆರಳಿದ್ದ ಮಾಲಾಶ್ರೀ ಅಲ್ಲಿನ ಸಹೋದ್ಯೋಗಿ ಆಪ್ತರನ್ನೆಲ್ಲಾ ಭೇಟಿಯಾಗಿದ್ದಾರೆ. ಈ ವೇಳೆ ಅಲ್ಲಿಯೇ ಇರುವ ಪೆದ್ದಮ್ಮ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ. ಇದನ್ನೂ ಓದಿ: `ಡಿ’ಗ್ಯಾಂಗ್ ವಿರುದ್ಧ ಪ್ರಮುಖ ಸಾಕ್ಷ್ಯವಾದ ಮಣ್ಣು – ದೇಶದಲ್ಲೇ ಮೊದಲ ಪ್ರಕರಣ!

`ಕಾಟೇರ’ ಚಿತ್ರದ ಮೂಲಕ ಮಾಲಾಶ್ರೀ ಮಗಳು ಆರಾಧನಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಬಳಿಕ ಆರಾಧನಾ ಒಳ್ಳೆಯ ಅವಕಾಶಕ್ಕಾಗಿ ಕಾದಿದ್ದಾರೆ. ಈ ನಡುವೆ ಟಾಲಿವುಡ್‍ನಿಂದಲೂ ಆರಾಧನಾಗೆ ಸಿನಿಮಾ ಆಫರ್ ಬರ್ತಿರೋ ಸುದ್ದಿಯಿತ್ತು. ಬಹುಶಃ ಹೈದ್ರಾಬಾದ್‍ಗೆ ತೆರಳಿರುವ ಮಾಲಾಶ್ರೀ ಮಗಳ ಸಿನಿಮಾ ಕರಿಯರ್ ವಿಚಾರವಾಗಿಯೂ ಚರ್ಚಿಸಿರುವ ಸಾಧ್ಯತೆ ಇದೆ. ಹಲವು ಸ್ಕ್ರಿಪ್ಟ್‍ಗಳನ್ನ ಕೇಳಿರುವ ಸುದ್ದಿಯೂ ಬಂದಿದೆ. ಶ್ರೀಘ್ರದಲ್ಲೇ ಆರಾಧನಾ ಟಾಲಿವುಡ್‍ಗೆ ಎಂಟ್ರಿ ಕೊಟ್ರೂ ಆಶ್ಚರ್ಯವೇನಿಲ್ಲ. ಇದನ್ನೂ ಓದಿ: ‘ಹನುಮಾನ್’ ನಿರ್ದೇಶಕನ ಹೊಸ ಸಿನಿಮಾ: ಚಿತ್ರರಂಗಕ್ಕೆ ಬಾಲಯ್ಯ ಪುತ್ರನ ಗ್ರ್ಯಾಂಡ್ ಎಂಟ್ರಿ

Share This Article