ನಾಲ್ವರು ಸ್ಟಾರ್ ನಟರನ್ನು ಹಿಂದಿಕ್ಕಿದ ಅಪೇಕ್ಷಾ ಪುರೋಹಿತ್

Public TV
1 Min Read

ಬೆಂಗಳೂರು: ಇತ್ತೀಚೆಗೆ ನಡೆದ ದಕ್ಷಿಣ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ(ಸೈಮಾ) ಕಾರ್ಯಕ್ರಮದಲ್ಲಿ ನಾಲ್ವರು ಖ್ಯಾತ ನಟರನ್ನು ಹಿಂದಿಕ್ಕಿ ನಟಿ ಅಪೇಕ್ಷಾ ಪೊರೋಹಿತ್ ಅವರು ಟಿ.ಎನ್. ಸೀತಾರಾಮ್ ನಿರ್ದೇಶನದ `ಕಾಫಿತೋಟ’ದಲ್ಲಿ ಅಭಿನಯಕ್ಕಾಗಿ ಅತ್ಯುತ್ತಮ ಖಳನಟಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಸೆಪ್ಟೆಂಬರ್ 14 ಮತ್ತು 15 ಎರಡು ದಿನ ದುಬೈನಲ್ಲಿ ಸೈಮಾ 2018 ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸಿನಿಮಾಗಳು, ನಟ, ನಟಿ, ಖಳನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ ಸೇರಿದಂತೆ ಸಾಕಷ್ಟು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ.

ಇದೇ ವೇಳೆ ಸ್ಯಾಂಡಲ್‍ವುಡ್ ಅತ್ಯುತ್ತಮ ಖಳನಟಿ ಪಾತ್ರಕ್ಕೆ ಅಪೇಕ್ಷಾ ಅವರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸೈಮಾದಲ್ಲಿ ಸ್ಯಾಂಡಲ್‍ವುಡ್ ಸಿನಿಮಾದಲ್ಲಿ ಅಭಿನಯಿಸಿದ್ದ ಅತ್ಯುತ್ತಮ ಖಳನಾಯನ ಪಾತ್ರ ಪ್ರಶಸ್ತಿಗೆ ಐದು ಮಂದಿ ಆಯ್ಕೆಯಾಗಿದ್ದರು. ‘ರಾಜಕುಮಾರ್’ ಸಿನಿಮಾದಿಂದ ನಟ ಪ್ರಕಾಶ್ ರಾಜ್, ‘ಪಟಾಕಿ’ ಚಿತ್ರದಿಂದ ಆಶೀಶ್ ವಿದ್ಯಾರ್ಥಿ, ‘ಕಾಫಿತೋಟ’ ಸಿನಿಮಾದಿಂದ ಅಪೇಕ್ಷಾ ಪುರೋಹಿತ್, ‘ಹೆಬ್ಬುಲಿ’ ಸಿನಿಮಾದಿಂದ ಪಿ. ರವಿಶಂಕರ್ ಮತ್ತು ‘ಚಕ್ರವರ್ತಿ’ ಚಿತ್ರದಿಂದ ಶಹವಾರ್ ಅಲಿ ಪ್ರಶಸ್ತಿ ಸುತ್ತಿಗೆ ಆಯ್ಕೆ ಆಗಿದ್ದರು.

ಅಂತಿಮವಾಗಿ ‘ಕಾಫಿತೋಟ’ ಸಿನಿಮಾದಲ್ಲಿ ಖಳನಾಯಕಿಯಾಗಿ ಅಭಿನಯಿಸಿದ್ದ ಅಪೇಕ್ಷಾ ತಮ್ಮ ಅತ್ಯುತ್ತಮ ನಟನೆಯಿಂದ ಸೈಮಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಪ್ರಶಸ್ತಿ ಪಡೆದ ಖುಷಿಯಲ್ಲಿ ಅಪೇಕ್ಷಾ ಅವರು ತನ್ನ ಸಂತಸವನ್ನು ಟ್ಟಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಮೇಲೆ ಭರವಸೆ ಇಟ್ಟು ಈ ಪಾತ್ರವನ್ನು ಮಾಡಿಸಿದ ಸೀತಾರಾಮ್ ಸರ್ ಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ನನ್ನ ಎಲ್ಲ ಸ್ನೇಹಿತರಿಗೆ, ನನಗೆ ಬೆಂಬಲ ನೀಡಿದವರಿಗೆ ಮತ್ತು ಕಾಫಿತೋಟ ಚಿತ್ರತಂಡದವರಿಗೂ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *