ಮದುವೆಯಾಗಿ 2 ವರ್ಷಕ್ಕೆ ಡಿವೋರ್ಸ್ ಘೋಷಿಸಿದ ನಟಿ ಅಪರ್ಣಾ ವಿನೋದ್

Public TV
1 Min Read

ಲಯಾಳಂ (Mollywood) ಮತ್ತು ತಮಿಳು ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಅಪರ್ಣಾ ವಿನೋದ್ (Aparna Vinod) ಅವರು ಮದುವೆಯಾಗಿ ಎರಡೇ ವರ್ಷಕ್ಕೆ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಪತಿಯಿಂದ ದೂರವಾಗಿರೋದಾಗಿ ಘೋಷಿಸಿದ್ದಾರೆ. ಡಿವೋರ್ಸ್ (Divorce) ನೀಡಿರೋದಾಗಿ ನಟಿ ತಿಳಿಸಿದ್ದಾರೆ.

ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ನನ್ನ ಜೀವನದಲ್ಲಿ ಮಹತ್ವದ ಬದಲಾವಣೆ ಆಗಿದೆ. ಸಾಕಷ್ಟು ಯೋಚಿಸಿಕೊಂಡು ನಾನು ನನ್ನ ಪತಿಯಿಂದ ದೂರವಾಗುವ ನಿರ್ಧಾರಕ್ಕೆ ಬಂದಿದ್ದೇನೆ. ಇದು ಸುಲಭವಾದ ಆಯ್ಕೆಯಾಗಿರಲಿಲ್ಲ. ಆದರೆ ಇದು ನನಗೆ ಸರಿಯಾದ ಆಯ್ಕೆಯಾಗಿತ್ತು. ನನ್ನ ವೈಯಕ್ತಿಕ ಬೆಳವಣಿಗೆಗೆ ಅಗತ್ಯವಾಗಿತ್ತು. ನನ್ನ ಮದುವೆಯು ಭಾವನಾತ್ಮಕವಾಗಿ ಕಷ್ಟಕರ ಹಂತವಾಗಿತ್ತು. ಜೀವನದಲ್ಲಿ ಈ ಅಧ್ಯಾಯವನ್ನು ಮುಚ್ಚಿ ಮುಂದೆ ಹೋಗಲು ನಿರ್ಧರಿಸಿದ್ದೇನೆ. ಈ ಸಮಯದಲ್ಲಿ ನಾನು ಪಡೆದ ಪ್ರೀತಿ ಮತ್ತು ಬೆಂಬಲಕ್ಕಾಗಿ ಕೃತಜ್ಙಳಾಗಿದ್ದೇನೆ. ಮುಂದೆ ಒಳ್ಳೆಯದಾಗುತ್ತದೆ ಎನ್ನುವ ವಿಶ್ವಾಸ ಹಾಗೂ ನಂಬಿಕೆ ಇದೆ ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನೂ ರಿನಿಲ್ ರಾಜ್ (Rinil Raj) ಅವರನ್ನು 2022ರಲ್ಲಿ ನಟಿ ಮದುವೆಯಾದರು. ಕೆಲ ಮನಸ್ತಾಪಗಳಿಂದ ವೈವಾಹಿಕ ಜೀವನಕ್ಕೆ ಅಪರ್ಣಾ ಅಂತ್ಯ ಹಾಡಿದ್ದಾರೆ. ಇದನ್ನೂ ಓದಿ:ಹಸಿರು ಡ್ರೆಸ್ ಧರಿಸಿ ಪೋಸ್ ಕೊಟ್ಟ ದರ್ಶನ್ ಪತ್ನಿ

2015ರಲ್ಲಿ ತೆರೆಕಂಡ ‘ನನ್ನ ನಿನ್ನೊಡು ಕೂಡೆಯುಂಡು’ ಮೂಲಕ ನಟಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆ ನಂತರ ದಳಪತಿ ವಿಜಯ್ ಮತ್ತು ಕೀರ್ತಿ ಸುರೇಶ್ ಜೊತೆ ಭೈರವ ಸಿನಿಮಾದಲ್ಲಿ ಅಪರ್ಣಾ ನಟಿಸಿದ್ದರು.

Share This Article