ಮುದ್ದಾದ ಹುಡುಗಿ ಅನುಶ್ರೀಗೆ ಸೈತಾನ್ ಅಂದೋರು ಯಾರು?

By
2 Min Read

ಕನ್ನಡದ ಹೆಸರಾಂತ ನಿರೂಪಕಿ ಅನುಶ್ರೀ ‘ಸೈತಾನ್’ ರೂಪ ಪಡೆದಿದ್ದಾರೆ. ಅರರೇ.. ಈ ಮುದ್ದಾದ ಹುಡುಗಿಗೆ ಸೈತಾನ್ ಅನ್ನೋಕೆ ಹೇಗಾದರೂ ಮನಸ್ಸು ಬರತ್ತೆ ಅಂದುಕೊಳ್ಳಬಹುದು. ನಿಜ, ಅವರು ಇದೀಗ ಸೈತಾನ್ ಹೆಸರಿನ ಚಿತ್ರ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಅಂಥದ್ದೇ ಹೆಸರಿನ ವಿಚಿತ್ರ ಪಾತ್ರ ಎನ್ನುವುದು ಕುತೂಹಲ. ಇದನ್ನೂ ಓದಿ : ಉಪೇಂದ್ರ ಅಣ್ಣನ ಮಗನ ಬೆನ್ನುಬಿದ್ದ ಸ್ಯಾಂಡಲ್ ವುಡ್


ಉಪ್ಪು ಹುಳಿ ಖಾರ ಸಿನಿಮಾದ ನಂತರ ಅನುಶ್ರೀ ಕಿರುತೆರೆಯಲ್ಲೇ ಬ್ಯುಸಿಯಾಗಿದ್ದರು. ಇದೀಗ ಸೈತಾನ್ ಮೂಲಕ ಮತ್ತೆ ಹಿರಿತೆರೆಗೆ ಆಗಮಿಸಿದ್ದಾರೆ. ಈ ಸಿನಿಮಾದ ಕುರಿತು ಮಾತನಾಡಿದ ಅವರು, “ನಾನು ಈ ಚಿತ್ರದಲ್ಲಿ ಅಭಿನಯಿಸಲು ಕಾರಣ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ. ಅವರೆ ನನಗೆ ನಿರ್ಮಾಪಕ ಕಂ ನಿರ್ದೇಶಕ ಲೋಹಿತ್ ಅವರ ಪರಿಚಯ‌ ಮಾಡಿಸಿದ್ದು. ಈ ಬಗ್ಗೆ ಇಮ್ರಾನ್ ನನಗೆ ಹೇಳಿದಾಗ ನಾನು ಬೇಡ ಅಂದೆ. ಕಿರುತೆರೆಯಲ್ಲಿ ಆರಾಮವಾಗಿದ್ದೀನಿ ಅಂತಲೂ ಹೇಳಿದ್ದೆ. ನಂತರ ಅವರು ಕಥೆ ಕೇಳಿ ಅಂದರು. ಲೋಹಿತ್ ಹೇಳಿದ ಕಥೆ ಕೇಳಿ ಅಭಿನಯಿಸಲು ಒಪ್ಪಿಕೊಂಡೆ. ಉಪ್ಪು ಹುಳಿ ಖಾರ ಚಿತ್ರದ ನಂತರ ಮತ್ತೊಮ್ಮೆ ನನ್ನ ರೀ ಎಂಟ್ರಿ ಅನ್ನಬಹುದು. ಇದರಲ್ಲಿ ಹೀರೋ, ಹೀರೋ ಇನ್ ಅಂತ ಏನು ಇಲ್ಲ. ಕಥೆಯೇ ನಿಜವಾದ ಹೀರೋ ಎನ್ನುತ್ತಾರೆ” ಎಂದರು. ಇದನ್ನೂ ಓದಿ : ರೋಡ್ ಶೋ ವೇಳೆ ಕಾರಿನ ಮೇಲಿಂದ ಕೆಳಗೆ ಬಿದ್ದ ಪವನ್ ಕಲ್ಯಾಣ್!


ಈಗಾಗಲೇ ಮಮ್ಮಿ ಚಿತ್ರದ ಮೂಲಕ ಭರವಸೆ ಮೂಡಿಸಿರುವ ನಿರ್ದೇಶಕ ಲೋಹಿತ್.ಹೆಚ್, ಈ ಸಿನಿಮಾಗೆ ನಿರ್ಮಾಪಕ. ತಮ್ಮದೇ ತಂಡದಲ್ಲಿ ಕೆಲಸ ಮಾಡುತ್ತಿದ್ದ ಪ್ರಭಾಕರ್ ಎನ್ನುವ ಹೊಸ ಹುಡುಗನಿಗೆ ನಿರ್ದೇಶಕನ ಪಟ್ಟ ಕಟ್ಟಿದ್ದಾರೆ. ಸದ್ದಿಲ್ಲದೇ ಮೊದಲ ಹಂತದ ಶೂಟಿಂಗ್ ಕೂಡ ಮುಗಿಸಿದ್ದಾರೆ ನಿರ್ದೇಶಕರು. ಮಾಸಾಂತ್ಯಕ್ಕೆ ದ್ವಿತೀಯ ಹಂತದ ಚಿತ್ರೀಕರಣ ಗೋವಾದಲ್ಲಿ ನಡೆಯಲಿದೆಯಂತೆ.ಇದನ್ನೂ ಓದಿ : ಅಪ್ಪುವಿನಂತೆ ಸಾವಿನಲ್ಲೂ ಸಾರ್ಥಕತೆ ಮೆರೆದ ಮಾವ ರೇವನಾಥ್


ಗೌತಮ್ ಬಿ.ಎನ್, ಕೃತಿ, ಐಶ್ವರ್ಯ ಶಿಂಧೋಗಿ, ಸಾರಿಕಾ ರಾವ್, ಭಾರ್ಗವ ವೆಂಕಟೇಶ್, ಗ್ರೀಷ್ಮ ಶ್ರೀಧರ್, ಹರ್ಷ್, ಸಾರಿಕಾ ರಾವ್ ಸೇರಿದಂತೆ ಅನೇಕ ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *