ಸ್ಯಾಂಡಲ್‌ವುಡ್‌ಗೆ ಕನ್ನಡತಿ ಅನುಷ್ಕಾ ಶೆಟ್ಟಿ ಪಾದಾರ್ಪಣೆ

Public TV
1 Min Read

ರಾವಳಿ ಚೆಲುವೆ (Karavali Beauty) ಅನುಷ್ಕಾ ಶೆಟ್ಟಿ ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಇದೀಗ 3 ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ಅಬ್ಬರಿಸಲು ಸ್ವೀಟಿ ಅನುಷ್ಕಾ ರೆಡಿಯಾಗಿದ್ದಾರೆ. ಹೊಸ ಚಿತ್ರದ ಟೈಟಲ್ ಜೊತೆ ಫಸ್ಟ್ ಲುಕ್ ರಿವೀಲ್ ಮಾಡುವ ಮೂಲಕ ನಟಿ ಸುದ್ದಿಯಲ್ಲಿದ್ದಾರೆ.

`ಬಾಹುಬಲಿ’ (Bahubali) ನಟಿ ಅನುಷ್ಕಾ ಶೆಟ್ಟಿ ಅವರು ಕಡೆಯದಾಗಿ 2020ರಲ್ಲಿ `ನಿಶಬ್ಧಂ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಸಿನಿಮಾಗೆ ಕಮ್‌ಬ್ಯಾಕ್ ಆಗಿರುವ ನಟಿ ಕನ್ನಡಿಗರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅನುಷ್ಕಾ ಶೆಟ್ಟಿ(Anushka Shetty) ಅವರು ಮೂಲತಃ ಕರ್ನಾಟಕದವರು ಹಾಗಾಗಿ ನಮ್ಮ ಕನ್ನಡದ ಹುಡುಗಿ ಕನ್ನಡ ಸಿನಿಮಾದಲ್ಲಿ ನಟಿಸಬೇಕು ಎಂಬುದು ಅಪಾರ ಅಭಿಮಾನಿಗಳ ಆಸೆಯಾಗಿತ್ತು. ಇದೀಗ ಆ ಆಸೆ ಈಡೇರಿದೆ. ನವೀನ್ ಪೋಲಿಶೆಟ್ಟಿ (Naveen Polishetty) ಜೊತೆಗಿನ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅನುಷ್ಕಾ ಶೆಟ್ಟಿ ಪಾದಾರ್ಪಣೆ ಮಾಡ್ತಿದ್ದಾರೆ.  ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮೌನ ಮುರಿದ ಕನ್ನಡದ `ಗಿಲ್ಲಿ’ ನಟಿ ರಾಕುಲ್

ಹ್ಯಾಪಿ ಸಿಂಗಲ್ ಎನ್ನುತ್ತ ನವೀನ್ ಪೋಲಿಶೆಟ್ಟಿಗೆ ಜೋಡಿಯಾಗಿ ಅನುಷ್ಕಾ ಶೆಟ್ಟಿ ಬರುತ್ತಿದ್ದಾರೆ. ಅನ್ವಿತಾ ರಾವಾಲಿ ಶೆಟ್ಟಿಯಾಗಿ ಸ್ವೀಟಿ ಶೆಫ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಯುವಿ ಕ್ರಿಯೇಷನ್ ನಿರ್ಮಾಣದಲ್ಲಿ `Miss Shetty Mrs Polishetty’ ಟೈಟಲ್‌ ಮೂಲಕ ಅನುಷ್ಕಾ ಹೊಸ ಚಿತ್ರ ಮೂಡಿ ಬಂದಿದ್ದು, ಈ ವರ್ಷವೇ ಸಿನಿಮಾ ತೆರೆಗೆ ಬರುತ್ತಿದೆ.

ಹ್ಯಾಪಿ ಸಿಂಗಲ್ (Happy Single) ಮತ್ತು ರೆಡಿ ಟು ಮಿಂಗಲ್ (Ready To Mingle) ಎನ್ನುವ ಅನುಷ್ಕಾ ಮತ್ತು ನವೀನ್ ಅವರ ಚಿತ್ರದ ಫಸ್ಟ್ ಲುಕ್ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆ ಕಾಣಲಿದೆ. ಈ ಮೂಲಕ ಕನ್ನಡತಿ ಅನುಷ್ಕಾ ಶೆಟ್ಟಿ ಸ್ಯಾಂಡಲ್‌ವುಡ್‌ಗೆ (Sandalwood) ಪಾದಾರ್ಪಣೆ ಮಾಡ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *