ತಲೆಗೆ ಸೆರಗು ಸುತ್ತಿಕೊಂಡು ಘಾಟಿಗೆ ಹೊರಟ ಅನುಷ್ಕಾ ಶೆಟ್ಟಿ

Public TV
2 Min Read

ರಾವಳಿ ಅನುಷ್ಕಾ ಶೆಟ್ಟಿ (Anushka Shetty) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇತ್ತೀಚೆಗೆ ನಿರ್ದೇಶಕ ಕ್ರಿಶ್ ಅವರು ಅನುಷ್ಕಾ ಶೆಟ್ಟಿ ಜೊತೆ ಗುಟ್ಟಾಗಿ ಹೊಸ ಸಿನಿಮಾ ಶುರು ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಚಿತ್ರ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಚಿತ್ರದ ಟೈಟಲ್ ಕೂಡ ರಿವೀಲ್ ಆಗಿದೆ. ಇದನ್ನೂ ಓದಿ:ಇಳಯರಾಜ ಬಯೋಪಿಕ್: ಚಿತ್ರಕ್ಕೆ ಚಾಲನೆ ನೀಡಿದ ಕಮಲ್ ಹಾಸನ್

ಅನುಷ್ಕಾ ಶೆಟ್ಟಿ ನಟನೆಯ ಚಿತ್ರಕ್ಕೆ ‘ಘಾಟಿ’ ಎನ್ನುವ ಟೈಟಲ್ ಫೈನಲ್ ಮಾಡಲಾಗಿದೆ. ಇದು ತೆಲುಗು ಸಿನಿಮಾ. ಅಷ್ಟೇ ಅಲ್ಲ ಪೋಸ್ಟ್ ಥ್ರಿಯೇಟ್ರಿಕಲ್ ಒಟಿಟಿ ಪಾರ್ಟ್ನರ್ ಕೂಡ ಫಿಕ್ಸ್ ಆಗಿದ್ದಾರೆ. ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಚಿತ್ರದ ನಂತರ ಈಗ ಮತ್ತೆ ಅನುಷ್ಕಾ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

14 ವರ್ಷಗಳ ಹಿಂದೆ ಬಂದಿದ್ದ ‘ವೇದಂ’ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದರು. ಆ ಚಿತ್ರಕ್ಕೆ ಕ್ರಿಶ್ ಆಕ್ಷನ್ ಕಟ್ ಹೇಳಿದ್ದರು. ಅದೇ ಕಾಂಬಿನೇಷನ್‌ನಲ್ಲಿ ಇದೀಗ ಹೊಸದೊಂದು ಸಿನಿಮಾ ಮೂಡಿ ಬರುತ್ತಿದೆ. ಅನುಷ್ಕಾ ಶತ್ರುಗಳನ್ನು ಸದೆಬಡೆಯುವ ಕ್ರಿಮಿನಲ್‌ ಆಗಿದ್ದು ಹೇಗೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ.

‘ಘಾಟಿ’ ಟೈಟಲ್ ಸಮೇತ ನಾಯಕಿ ತಲೆಗೆ ಸೆರಗು ಸುತ್ತಿಕೊಂಡು ಹೊರಟ ಪೋಸ್ಟರ್ ರಿಲೀಸ್ ಆಗಿದೆ. ಚಿಂತಕಿಂಡಿ ಶ್ರೀನಿವಾಸ್ ರಾವ್, ಕ್ರಿಶ್ ಹಾಗೂ ಸಾಯಿಮಾಧವ ಬುರ್ರಾ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಆಂಧ್ರ ಮತ್ತು ಒಡಿಶಾ ಗಡಿಯಲ್ಲಿ ‘ಘಾಟಿ’ ಚಿತ್ರದ ಬಹುತೇಕ ಚಿತ್ರೀಕರಣ ನಡೆಯುತ್ತಿದೆ. ಇತ್ತೀಚೆಗೆ ರಮ್ಯಾ ಕೃಷ್ಣನ್ ಕೂಡ ಅನುಷ್ಕಾ ಜೊತೆ ಛತ್ತೀಸ್‌ಗಢದ ತಿರತ್‌ಗಢದಲ್ಲಿ ನಡೆದ ಚಿತ್ರೀಕರಣದಲ್ಲಿ ಕೂಡ ಭಾಗಿ ಆಗಿದ್ದರು.

ಬಾಹುಬಲಿ, ಬಾಹುಬಲಿ 2 ಸಿನಿಮಾದಂತಹ ಸಕ್ಸಸ್ ಕೊಟ್ಟಿರುವ ಅನುಷ್ಕಾ ಶೆಟ್ಟಿಗೆ ಮತ್ತೊಂದು ದೊಡ್ಡ ಯಶಸ್ಸಿಗಾಗಿ ಕಾಯುತ್ತಿದ್ದಾರೆ. ತೆಲುಗು ಸಿನಿಮಾಗಳ ಜೊತೆಗೆ ಮಲಯಾಳಂ ಚಿತ್ರರಂಗಕ್ಕೆ ಕೂಡ ನಟಿ ಎಂಟ್ರಿ ಕೊಟ್ಟಿದ್ದಾರೆ.

Share This Article