ವಿದೇಶದಿಂದ ಮಗನ ಜೊತೆ ಭಾರತಕ್ಕೆ ಮರಳಿದ ಅನುಷ್ಕಾ ಶರ್ಮಾ

Public TV
1 Min Read

ಬಾಲಿವುಡ್ ನಟಿ ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ ದಂಪತಿ ಫೆ.15ರಂದು 2ನೇ ಮಗುವನ್ನು ಬರಮಾಡಿಕೊಂಡರು. ಲಂಡನ್‌ನ ಖಾಸಗಿ ಆಸ್ಪತ್ರೆಯಲ್ಲಿಯೊಂದರಲ್ಲಿ ನಟಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ವಿದೇಶದಿಂದ ಮಗನ ಜೊತೆ ಭಾರತಕ್ಕೆ ಮರಳಿದ್ದಾರೆ. ಇದನ್ನೂ ಓದಿ:‘ಕಲ್ಜಿಗ’ ಟೈಟಲ್ ಅನಾವರಣ ಮಾಡಿದ ಸಂಗೀತ ನಿರ್ದೇಶಕ ಹಂಸಲೇಖ

ಮುಂಬೈನ ವಿಮಾನ ನಿಲ್ದಾಣದಲ್ಲಿ ಅನುಷ್ಕಾ ಶರ್ಮಾ (Anushka Sharma) ಮಗುವಿನ ಜೊತೆ ಕಾಣಿಸಿಕೊಂಡಿದ್ದಾರೆ. ನಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಆದರೆ ಮಗನ ಮುಖ ಎಲ್ಲೂ ಕಾಣಿಸದಂತೆ ನಟಿ ಕವರ್ ಮಾಡಿದ್ದಾರೆ.

ಅನುಷ್ಕಾ ದಂಪತಿಯ ಮೊದಲ ಮಗುವಿಗೆ ವಮಿಕಾ ಎಂದು ಹೆಸರಿಟ್ಟಿದ್ರೆ, 2ನೇ ಮಗುವಿಗೆ ಅಕಾಯ್ ಎಂದು ನಾಮಕರಣ ಮಾಡಿದ್ದನ್ನು ಇತ್ತೀಚೆಗೆ ರಿವೀಲ್ ಮಾಡಿದ್ದರು.

ಹಲವು ವರ್ಷಗಳ ಡೇಟಿಂಗ್ ನಂತರ ವಿರಾಟ್ (Virat Kohli) ಮತ್ತು ಅನುಷ್ಕಾ ಶರ್ಮಾ 2017ರಲ್ಲಿ ಹಸೆಮಣೆ ಏರಿದ್ದರು. ಮದುವೆಯ ಬಳಿಕ ಕೂಡ ನಟಿ ಸಿನಿಮಾರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

Share This Article