ರಾಮ್ ಪೋತಿನೇನಿ ಜೊತೆ ಅನುಪಮಾ ಪರಮೇಶ್ವರನ್ ಮದುವೆ

Public TV
1 Min Read

‘ಪ್ರೇಮಂ’ (Premam) ಚಿತ್ರದ ಮೂಲಕ ಗಮನ ಸೆಳೆದ ನಟಿ ಅನುಪಮಾ ಪರಮೇಶ್ವರನ್ (Anupama Parameshwaran) ಈಗ ಮತ್ತೊಮ್ಮೆ ಮದುವೆ ವಿಚಾರವಾಗಿ ಸುದ್ದಿಯಾಗಿದ್ದಾರೆ. ತೆಲುಗಿನ ನಟ ರಾಮ್ ಪೋತಿನೇನಿ (Ram Pothineni) ಜೊತೆ ಅನುಪಮಾ ಮದುವೆ (Wedding) ಆಗಲಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಗುಸು ಗುಸು ಶುರುವಾಗಿದೆ.

ಕಳೆದ ಬಾರಿ ಕ್ರಿಕೆಟರ್ ಜಸ್ಟ್ರಿತ್ ಬುಮ್ರಾ ಜೊತೆ ಅನುಪಮಾ ಮದುವೆ ಎಂದು ಸುದ್ದಿಯಾಗಿತ್ತು. ಬಳಿಕ ಈ ಸುದ್ದಿ ಸುಳ್ಳು ಎಂದು ನಟಿ ಸ್ಪಷ್ಟನೆ ನೀಡಿದ್ದರು. ಈಗ ತೆಲುಗು ಹೀರೋ ರಾಮ್ ಪೋತಿನೇನಿ ಜೊತೆ ನಟಿ ಮದುವೆಗೆ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಕುತೂಹಲ ಮೂಡಿಸುವ ‘ವೇಷ’ ಸಿನಿಮಾದ ಟ್ರೈಲರ್ ರಿಲೀಸ್

2018ರಲ್ಲಿ ‘ಹಲೋ ಗುರು ಪ್ರೇಮ ಕೋಸಮೆ’ ಎಂಬ ಸಿನಿಮಾದಲ್ಲಿ ಇಬ್ಬರು ಜೊತೆಯಾಗಿ ನಟಿಸಿದ್ದರು. ಶೂಟಿಂಗ್‌ ಸಂದರ್ಭದಲ್ಲಿ ಅನುಪಮಾ- ರಾಮ್‌ಗೆ ಪ್ರೇಮಾಂಕುರವಾಗಿದ್ದು, ಸಾಕಷ್ಟು ವರ್ಷಗಳಿಂದ ಡೇಟಿಂಗ್ (Dating) ಮಾಡ್ತಿದ್ದಾರೆ ಎನ್ನಲಾಗುತ್ತಿದೆ.

ಎರಡು ಕುಟುಂಬದ ಗುರುಹಿರಿಯರು ಕೂಡ ಮದುವೆಗೆ ಸಮ್ಮತಿ ಸೂಚಿಸಿದ್ದು, ಮದುವೆಗೆ (Wedding) ಸಕಲ ತಯಾರಿ ನಡೆಯುತ್ತಿದೆ ಎಂಬುದು ಲೇಟೆಸ್ಟ್ ನ್ಯೂಸ್. ಒಂದು ಈ ಸುದ್ದಿ ನಿಜವೇ ಆಗಿದ್ದಲ್ಲಿ, ರಾಮ್- ಅನುಪಮಾ ಫ್ಯಾನ್ಸ್‌ಗೆ ಖುಷಿ ಪಡುವ ಸುದ್ದಿಯಾಗಲಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್