ನ್ಯಾಯಾಂಗದ ಬಗ್ಗೆ ಗೌರವವಿದೆ, ಅಪರಾಧ ಸಾಬೀತಾದ್ರೆ ಯಾರೇ ಆಗಿದ್ರೂ ಶಿಕ್ಷೆ ಆಗಲಿ: ಅನು ಪ್ರಭಾಕರ್

Public TV
1 Min Read

ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ (Darshan) ಕುರಿತು ಈಗಾಗಲೇ ಸ್ಯಾಂಡಲ್‌ವುಡ್‌ನ ಹಲವು ನಟ, ನಟಿಯರು ಪ್ರತಿಕ್ರಿಯೆ ನೀಡಿದ್ದಾರೆ. ಈ ಬೆನ್ನಲ್ಲೇ, ಈ ಪ್ರಕರಣದ ಬಗ್ಗೆ ನಟಿ ಅನು ಪ್ರಭಾಕರ್ ನೀಡಿರುವ ಹೇಳಿಕೆ ಈಗ ಸದ್ದು ಮಾಡುತ್ತಿದೆ. ನ್ಯಾಯಾಂಗದ ಬಗ್ಗೆ ಗೌರವವಿದೆ, ಅಪರಾಧ ಸಾಬೀತಾದ್ರೆ ಯಾರೇ ಆಗಿದ್ರೂ ಶಿಕ್ಷೆ ಆಗಲಿ ಎಂದು ‘ಪಬ್ಲಿಕ್‌ ಟಿವಿ’ಗೆ ಅನು ಪ್ರಭಾಕರ್ (Anu Prabhakar) ಮಾತನಾಡಿದ್ದಾರೆ.

ಕೊಲೆ ಕೇಸ್‌ನಲ್ಲಿ ನಟ ದರ್ಶನ್ ವಿಚಾರಣಾಧೀನ ಕೈದಿಯಾಗಿದ್ದಾರೆ. ಈ ಕೇಸ್ ಕೋರ್ಟ್ನಲ್ಲಿದೆ. ತನಿಖೆ ನಡೆಯುತ್ತಿದೆ. ಅವರಿಗೆ ಈ ರೀತಿ ಪರಿಸ್ಥಿತಿ ಆಯ್ತು ಅಲ್ಲ ಅಂತ ಬೇಜಾರಿದೆ. ಈ ಪ್ರಕರಣದಿಂದ ಇಡೀ ಚಿತ್ರರಂಗ ಮಂಕಾಗಿದೆ. ಹಾಗೆಯೇ ನ್ಯಾಯಾಂಗದ ಬಗ್ಗೆ ಗೌರವವಿದೆ, ಅಪರಾಧ ಸಾಬೀತಾದ್ರೆ ಯಾರೇ ಆಗಿದ್ರೂ ಶಿಕ್ಷೆ ಆಗಲಿ ಎಂದು ಅನು ಪ್ರಭಾಕರ್ ಮಾತನಾಡಿದ್ದಾರೆ. ಇದನ್ನೂ ಓದಿ:2023ರ ಸೈಮಾ ನಾಮಿನೇಷನ್-ರೇಸ್‌ನಲ್ಲಿ ಕಾಟೇರ, ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ

ನ್ಯಾಯಾಂಗ ಎಲ್ಲರಿಗೂ ಒಂದೇ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ. ಯಾರಿಗೆ ಅನ್ಯಾಯ ಆಗಿದೆಯೋ ಅವರಿಗೆ ನ್ಯಾಯ ಸಿಗಲಿ ಎಂದು ನಟಿ ಹೇಳಿದ್ದಾರೆ. ಪಬ್ಲಿಕ್ ಫಿಗರ್ ಆಗಿದ್ದಾಗ ಸಾಮಾಜಿಕ ಜವಾಬ್ದಾರಿ ಮುಖ್ಯ, ಆ ಜವಾಬ್ದಾರಿಗೆ ಚ್ಯುತಿ ಬಂದರೆ ಯಾರಿಗೇ ಆಗಿದ್ರೂ ಶಿಕ್ಷೆ ಆಗುತ್ತದೆ. ಇದನ್ನು ಘನ ನ್ಯಾಯಾಲಯ ನೋಡಿಕೊಳ್ಳುತ್ತದೆ. ನಾವು ಮಾತನಾಡುವುದು ಸರಿ ಅಲ್ಲ ಎಂದಿದ್ದಾರೆ ಅನು ಪ್ರಭಾಕರ್.

Share This Article