ನೆಗೆಟಿವ್ ರೋಲ್ ಮಾಡಿದ್ದಕ್ಕೆ ಮದುವೆ ಸಂಬಂಧ ಕ್ಯಾನ್ಸಲ್- ನಟಿ ಅನಿಕಾ ಸಿಂಧ್ಯ

Public TV
2 Min Read

ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಲಕ್ಷ್ಮಿ ಬಾರಮ್ಮ’ (Lakshmi Baramma) ಖ್ಯಾತಿ ಕುಮುದಾ ಅಲಿಯಾಸ್ ಅನಿಕಾ ಸಿಂಧ್ಯ (Anikha Sindhya) ಇದೀಗ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಾಗಿದ್ದಾರೆ. ಅದೆಷ್ಟೋ ಕಲಾವಿದರು ತೆರೆಯ ಮೇಲೆ ತಮ್ಮ ವಿರುದ್ಧ ಪಾತ್ರಗಳನ್ನ ಮಾಡುತ್ತಾರೆ. ಇದೀಗ ನೆಗೆಟಿವ್ ರೋಲ್ ಮಾಡಿದ್ದಕ್ಕೆ ಮದುವೆ ಸಂಬಂಧ ಕ್ಯಾನ್ಸಲ್ ಆಗಿದ್ದನ್ನ ಸಂದರ್ಶನವೊಂದರಲ್ಲಿ ನಟಿ ಹಂಚಿಕೊಂಡಿದ್ದಾರೆ.

ನಟಿ ಅನಿಕಾ ಸಿಂಧ್ಯ ಅವರು ‘ಲಕ್ಷ್ಮಿ ಬಾರಮ್ಮ’ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ತಾವು ಹೀರೋಯಿನ್ ಆಗಬೇಕು ಅಂತ ಈ ಚಿತ್ರರಂಗಕ್ಕೆ ಬಂದೆ. ಆದರೆ ಆರಂಭದಲ್ಲಿಯೇ ‘ಕಾದಂಬರಿ’ (Kadambari) ಧಾರಾವಾಹಿಯಲ್ಲಿಯೇ ನೆಗೆಟಿವ್ ಶೇಡ್ ಮಾಡಿದೆ. ಪದೇ ಪದೇ ನೆಗೆಟಿವ್ ಪಾತ್ರ ಬಂದರೂ ಕೂಡ ನನ್ನ ಯಾರೂ ಸ್ಟಾಪ್ ಮಾಡುವವರೂ ಇರಲಿಲ್ಲ. ನನಗೆ ಯಾರೂ ಸಲಹೆ ನೀಡುವವರೂ ಇರಲಿಲ್ಲ. ನಾನು ಯಾವ ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟೆ. ನೆಗೆಟಿವ್ ಶೇಡ್ ಮಾಡೋದು ನನ್ನ ಬದುಕನ್ನು ಹೇಗೆ ರೂಪಿಸುತ್ತದೆ ಎಂಬುದೇ ಗೊತ್ತಿರಲಿಲ್ಲ ಎಂದು ಅನಿಕಾ ಹೇಳಿದ್ದಾರೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

ಆನ್‌ಸ್ಕ್ರೀನ್ ಮೇಲೆ ನನ್ನ ವಿಲನ್ ಶೇಡ್‌ನಲ್ಲಿ ನೋಡಿದವರು ರಿಯಲ್ ಲೈಫ್‌ನಲ್ಲಿ ಕೂಡ ನಾನು ಹೀಗೆ ಅಂತಾ ಅಂದುಕೊಡರು. ಧಾರಾವಾಹಿಗಳಲ್ಲಿ ನಾನು ಮಾಡಿರುವ ಪಾತ್ರ ನೋಡಿ ಅನೇಕ ಹಿರಿಯರು ಶಾಪ ಹಾಕಿದ್ದಾರೆ ಎಂದು ಅನಿಕಾ ಸಿಂಧ್ಯ ರಿವೀಲ್ ಮಾಡಿದ್ದಾರೆ.

ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡ್ತೀನಿ,ಕುಟುಂಬಕ್ಕೆ ಹೊಂದಿಕೊಳ್ಳೋದಿಲ್ಲ ಅಂತಾ ಎಷ್ಟೋ ಮನೆಯವರು ನನ್ನ ಮದುವೆ ಸಂಬಂಧವನ್ನು ತಿರಸ್ಕರಿಸಿದ್ದಾರೆ. ಮದುವೆ ಬೇಡ ಎನ್ನೋದಿಕ್ಕೆ ಅವರೆಲ್ಲರೂ ನನ್ನ ಪಾತ್ರಗಳೇ ಕಾರಣ ಅಂತ ಹೇಳಿದ್ದಾರೆ. ನೆಗೆಟಿವ್ ಶೇಡ್ ಮಾಡಿ ನಾನು ಎಷ್ಟೋ ಮದುವೆ ಪ್ರಪೋಸಲ್‌ಗಳನ್ನು ಕಳೆದುಕೊಂಡಿದ್ದೇನೆ ಎಂದು ನಟಿ ಅನಿಕಾ ಮೌನ ಮುರಿದಿದ್ದಾರೆ. ಆದರೆ ನಾನು ಇದುವರೆಗೂ ನಟಿಸಿದ ಪಾತ್ರಗಳು ನನಗೆ ಖುಷಿ ಕೊಟ್ಟಿದೆ. ನಾನು ನೆಗೆಟಿವ್ ರೋಲ್ ಮಾಡಿರೋದ್ದಕ್ಕೆ ಪಶ್ಚತ್ತಾಪವಿಲ್ಲ ಎಂದು ನಟಿ ಮಾತನಾಡಿದ್ದಾರೆ.

Share This Article