ಪೈಪೋಟಿಗಿಳಿದು ಜಾಕೆಟ್ ಬಿಚ್ಚಿದ ‘ಪುಷ್ಪ 2’ ನಟಿ

Public TV
1 Min Read

ತೆಲುಗಿನ ಬೋಲ್ಡ್ ನಟಿ ಅನಸೂಯಾ ಭಾರದ್ವಾಜ್ (Anasuya Bharadwaj) ಪ್ರಸ್ತುತ ‘ಪುಷ್ಪ 2’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಶೋವೊಂದಕ್ಕೆ ಎಂಟ್ರಿ ಕೊಟ್ಟಿದ್ದು, ಪೈಪೋಟಿ ಗೆಲ್ಲಲು ಅನಸೂಯಾ ವೇದಿಕೆ ಮೇಲೆ ಜಾಕೆಟ್ ಬಿಚ್ಚಿದ್ದಾರೆ.

ಇದೀಗ ‘ಕಿರ‍್ರಕ್ ಬಾಯ್ಸ್ ಕಿಲಾಡಿ ಗರ್ಲ್ಸ್’ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದೆ. ಅದರಲ್ಲಿ, ನಟಿ ಜಾಕೆಟ್ ಬಿಚ್ಚಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಇದನ್ನೂ ಓದಿ:ದರ್ಶನ್ ಪ್ರಕರಣ: ತಪ್ಪಿಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದ ನಿರ್ದೇಶಕ ಓಂ ಪ್ರಕಾಶ್ ರಾವ್

ನೃತ್ಯ ನಿರ್ದೇಶಕ ಶೇಖರ್ ಮಾಸ್ಟರ್ ಜೊತೆ ಅನಸೂಯಾಗೆ ಪೈಪೋಟಿಗಿಳಿದಿದ್ದಾರೆ. ವೇದಿಕೆಯಲ್ಲಿ ಶೇಖರ್ ಮಾಸ್ಟರ್ ಶರ್ಟ್ ಬಿಚ್ಚಿದ್ದಾರೆ. ಸೋಲು ಒಪ್ಪದ ಅನಸೂಯ, ತಾವು ಧರಿಸಿದ ಜಾಕೆಟ್ ಕಳಚಿ ನಾನೂ ಯಾವುದಕ್ಕೂ ಹಿಂದೆ ಸರಿಯಲ್ಲ ಅಂತ ಫ್ರೂವ್ ಮಾಡಿದ್ದಾರೆ.

ಅನಸೂಯಗೆ ತೆಲುಗಿನಲ್ಲಿ ಹೇಳಿಕೊಳ್ಳುವಂತಹ ಅವಕಾಶವೇನು ಸಿಕ್ತಿಲ್ಲ. `ಪುಷ್ಪ 2′ ಸಿನಿಮಾ ಬಿಟ್ಟರೇ ಬೇರೆ ಚಿತ್ರಗಳು ಅವರ ಕೈಯಲಿಲ್ಲ.

Share This Article