ಅವಳಿ ಮಕ್ಕಳ ಮುದ್ದಾದ ಫೋಟೋ ಹಂಚಿಕೊಂಡ ಅಮೂಲ್ಯ

Public TV
1 Min Read

ಸ್ಯಾಂಡಲ್‌ವುಡ್ (Sandalwood) ನಟಿ ಅಮೂಲ್ಯ (Amulya) ಮದುವೆ, ಸಂಸಾರ, ಅವಳಿ ಮಕ್ಕಳ ಆರೈಕೆ ಅಂತಾ ಬ್ಯುಸಿಯಾಗಿದ್ದಾರೆ. ಈ ನಡುವೆ ಅವಳಿ ಮಕ್ಕಳ ಮುದ್ದಾದ ಫೋಟೋಶೂಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 2ನೇ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ ಕಿರುತೆರೆ ನಟಿ ಸ್ವಾತಿ

ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, `ಚೆಲುವಿನ ಚಿತ್ತಾರ’ (Cheluvina Chittara) ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ಸ್ಟಾರ್ ನಟರ ಜೊತೆ ನಾಯಕಿಯಾಗಿ ಮಿಂಚಿದರು. ಬೇಡಿಕೆ ಇರುವಾಗಲೇ ಜಗದೀಶ್ ಜೊತೆ ಅಮೂಲ್ಯ ಹಸೆಮಣೆ ಏರಿದ್ದರು.

 

View this post on Instagram

 

A post shared by Atharv & Aadhav (@atharv.aadhav)

ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವ ಅಮೂಲ್ಯ ಜಗದೀಶ್ ಅವರು ಮುದ್ದು ಮಕ್ಕಳ ಬಗೆ ಬಗೆಯ ರೀತಿಯ ಫೋಟೋಶೂಟ್ ಮಾಡಿಸಿದ್ದಾರೆ. ಅಥರ್ವ್- ಆಧವ್ ಈ ಮುದ್ದು ಮಕ್ಕಳ ಹೊಸ ಫೋಟೋಸ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

 

View this post on Instagram

 

A post shared by Atharv & Aadhav (@atharv.aadhav)

ಪ್ರತಿಭಾನ್ವಿತ ನಟಿ ಅಮೂಲ್ಯ ಸಿನಿಮಾಗೆ ಕಂಬ್ಯಾಕ್ ಮಾಡಲಿ ಅಂತಾ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಸಿನಿಮಾ ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ? ಎಂಬುದನ್ನ ಕಾದುನೋಡಬೇಕಿದೆ.

Share This Article