ಶೋಲ್ಡರ್ ಲೆಸ್ ಟಾಪ್, ತುಂಡು ಜೀನ್ಸ್‌ನಲ್ಲಿ ‘ಬೃಂದಾವನ’ ನಟಿ- ದಂಗಾದ ಫ್ಯಾನ್ಸ್

Public TV
1 Min Read

ಕಿರುತೆರೆಯಲ್ಲಿ ಸಂಪ್ರದಾಯ ಪಾತ್ರಗಳಲ್ಲಿ ನಟಿಸಿದ್ದ ಬೃಂದಾವನ ನಟಿ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಶಾಕ್‌ ಕೊಟ್ಟಿದ್ದಾರೆ. ಪುಷ್ಪ ಪಾತ್ರಧಾರಿ ಅವರೇನಾ ಇವರು ಎಂದು ದಂಗಾಗಿ ನೋಡ್ತಿದ್ದಾರೆ ಅಭಿಮಾನಿಗಳು. ‘ಬೃಂದಾವನ’ (Brundhavan Serial) ಸೀರಿಯಲ್ ಪುಷ್ಪ ನಟಿ ಹಾಟ್‌ ಆಗಿ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ. ಇದನ್ನೂ ಓದಿ:ತಲೆಗೆ ಸೆರಗು ಸುತ್ತಿಕೊಂಡು ಘಾಟಿಗೆ ಹೊರಟ ಅನುಷ್ಕಾ ಶೆಟ್ಟಿ

ಅಮೂಲ್ಯ ಭಾರಧ್ವಜ್ ಅವರು ಸದ್ಯ ಸೀರಿಯಲ್‌ನಲ್ಲಿ ಮೋಡಿ ಮಾಡುತ್ತಿರುವ ಚೆಲುವೆ. ಸೀರೆಯುಟ್ಟು ಮುಗ್ಧೆಯಾಗಿ ಅಪಾರ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ವರುಣ್ ಆರಾಧ್ಯಗೆ (Varun Aradhya) ಜೋಡಿಯಾಗಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ.

ಸದಾ ಸೀರೆಯುಟ್ಟು ಕ್ಯಾಮೆರಾ ಮುಂದೆ ಬರುವ ಹುಡುಗಿ ‘ಪುಷ್ಪ’ (Pushpa) ಈಗ ಶೋಲ್ಡರ್ ಲೆಸ್ ಟಾಪ್ ಮತ್ತು ತುಂಡು ಜೀನ್ಸ್ ಧರಿಸಿ ಸಖತ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ಅವತಾರ ನೋಡಿ ಇದು ಬೃಂದಾವನ ಸೀರಿಯಲ್ ನಟಿ ಪುಷ್ಪನೇನಾ? ಅಂತ ಶಾಕ್ ಆಗಿ ಫೋಟೋ ನೋಡ್ತಿದ್ದಾರೆ. ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ.

ರೀಲ್ ಬೇರೆ ರಿಯಲ್ ಬೇರೆ ಅಲ್ಲವೇ? ನಿಜ ಜೀವನದಲ್ಲಿ ನಟಿ ಅಮೂಲ್ಯ (Amulya Bharadwaj) ಸಿಕ್ಕಾಪಟ್ಟೆ ಸ್ಟೈಲೀಶ್ ಆಗಿದ್ದಾರೆ. ರೀಲ್ ಪುಷ್ಪ ಜೊತೆ ಅಮೂಲ್ಯರನ್ನು ಹೋಲಿಕೆ ಮಾಡೋಕೆ ಆಗಲ್ಲ. ಸದ್ಯ ಶೂಟಿಂಗ್‌ಗೆ ಬ್ರೇಕ್ ಹಾಕಿ ಟ್ರಾವೆಲ್ ಮೂಡ್‌ಗೆ ನಟಿ ಜಾರಿದ್ದಾರೆ.

ಕಡಲ ತೀರದಲ್ಲಿ ಸ್ಟೈಲೀಶ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಸುಂದರ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ಅಮೂಲ್ಯ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.‌ ಇದನ್ನೂ ಓದಿ:ಜಾಹೀರಾತಿನಲ್ಲಿ ನಟಿಸಲು 50 ಸೆಕೆಂಡಿಗೆ 5 ಕೋಟಿ ಸಂಭಾವನೆ ಪಡೆದ ನಯನತಾರಾ

ಈ ಹಿಂದೆ ‘ದಾಸಪುರಂದರ’ ಎಂಬ ಸೀರಿಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ಅಮೂಲ್ಯ ನಟಿಸಿದ್ದರು. ಈಗ ಬೃಂದಾವನ ಸೀರಿಯಲ್‌ನಲ್ಲಿ ವರುಣ್ ಆರಾಧ್ಯ ಪತ್ನಿಯ ಪಾತ್ರದಲ್ಲಿ ಅಮೂಲ್ಯ ನಟಿಸುತ್ತಿದ್ದಾರೆ.

Share This Article