ನನ್ನ ಮ್ಯಾನೇಜರ್ ಮಾಡಿದ ಮೋಸದಿಂದ ಸಿನಿಮಾ ಆಫರ್ ಕಳೆದುಕೊಂಡೆ- ಅಮೀಷಾ ಪಟೇಲ್

Public TV
1 Min Read

ನ್ನಿ ಡಿಯೋಲ್ (Sunny Deol) ಜೊತೆಗಿನ ‘ಗದರ್ 2’ (Gadar 2) ಸಿನಿಮಾದ ಸಕ್ಸಸ್‌ನಿಂದ ಅಮೀಷಾ ಪಟೇಲ್‌ಗೆ (Ameesha Patel) ಬಿಗ್ ಓಪನಿಂಗ್ ಸಿಕ್ಕಿದೆ. ಈ ಗೆಲುವಿಗಾಗಿ ಸಾಕಷ್ಟು ವರ್ಷಗಳಿಂದ ನಟಿ ಕಾಯುತ್ತಿದ್ದರು. ಹೀಗಿರುವಾಗ ಸಂದರ್ಶನವೊಂದರಲ್ಲಿ ನಟಿ, ಸಿಗಬೇಕಿದ್ದ ದೊಡ್ಡ ಪ್ರಾಜೆಕ್ಟ್ ಆಫರ್‌ಗಳು ತಮ್ಮ ಮ್ಯಾನೇಜರ್‌ನಿಂದ ತಪ್ಪಿ ಹೋಗಿದ್ದರ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಮ್ಯಾನೇಜರ್‌ನಿಂದ ಆಗಿರುವ ನಂಬಿಕೆ ದ್ರೋಹದ ಬಗ್ಗೆ ನಟಿ ಬಿಚ್ಚಿಟ್ಟಿದ್ದಾರೆ.

ಸಾಕಷ್ಟು ಸಿನಿಮಾಗಳಿಗಾಗಿ ಮಾತುಕತೆ ನಡೆದಿತ್ತು. ಆದರೆ ಈಗ ಅದರ ಹೆಸರು ಹೇಳುವುದು ಬೇಡ. ಯಾಕೆಂದರೆ ಆ ಸಿನಿಮಾಗಳು ಈಗಾಗಲೇ ಬಂದುಹೋಗಿವೆ. ಆ ಸಮಯದಲ್ಲಿ ನನ್ನ ಮ್ಯಾನೇಜರ್- ಸಂಜಯ್ ಲೀಲಾ ಬನ್ಸಾಲಿ ನಡುವೆ ಮನಸ್ತಾಪ ಆಗಿತ್ತು. ಆ ಮ್ಯಾನೇಜರ್‌ನಿಂದ ನಾನು ದೂರ ಆದ ಬಳಿಕವೇ ಈ ಎಲ್ಲ ಸಂಗತಿಗಳು ನನಗೆ ಗೊತ್ತಾದವು ಎಂದು ಅಮಿಷಾ ಪಟೇಲ್ ಹೇಳಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಮಾತ್ರವಲ್ಲದೇ ಯಶ್ ರಾಜ್ ಫಿಲ್ಮ್, ಶಾರುಖ್ ಮುಂತಾದವರ ಜೊತೆಗೂ ಕೆಲಸ ಮಾಡುವ ಅವಕಾಶವನ್ನು ಮಿಸ್ ಮಾಡಿಕೊಂಡ ಬಗ್ಗೆ ಅಮೀಷಾ ಪಟೇಲ್ ಮಾತನಾಡಿದ್ದಾರೆ. ಇದೆಲ್ಲವೂ ಹಣೆಬರಹದಿಂದಲೇ ಆಗಿದೆ ಎಂದು ಅವರೀಗ ನಂಬಿದ್ದಾರೆ. ಇದನ್ನೂ ಓದಿ:ರಶ್ಮಿಕಾ, ಶ್ರೀಲೀಲಾ ಬಳಿಕ ತೆಲುಗಿನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ಆಶಿಕಾ ರಂಗನಾಥ್

‘ಗದರ್ 2’ ಸಿನಿಮಾದಲ್ಲಿ ಸನ್ನಿ ಡಿಯೋಲ್‌ಗೆ ಜೋಡಿಯಾಗಿ ಅಮೀಷಾ ನಟಿಸಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರಕ್ಕೆ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. ಸಕ್ಸಸ್ ಬಳಿಕ ಅಮೀಷಾ ಪಟೇಲ್ ನಟಿಸಲಿರುವ ಮುಂಬರುವ ಸಿನಿಮಾಗಳ ಬಗ್ಗೆ ಕೌತುಕ ಹೆಚ್ಚಾಗಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್