ಅವಳಿ ಮಕ್ಕಳ ತಾಯಿ ಆಗುತ್ತಿದ್ದಾರೆ ನಟಿ ಅಮಲಾ ಪೌಲ್

Public TV
2 Min Read

ನ್ನಡವೂ ಸೇರಿದಂತೆ ಹಲವಾರು ಭಾಷೆಗಳ ಸಿನಿಮಾದಲ್ಲಿ ನಟಿಸಿರುವ ಅಮಲಾ ಪೌಲ್ (Amala Paul), ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ತಾವು ಅವಳಿ ಮಕ್ಕಳ (Twins) ತಾಯಿ ಆಗುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಈ ಸುದ್ದಿಯನ್ನು ಕೇಳಿದ ಅವರ ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ.

ಒಂದು ಕಡೆ ಅವಳಿ ಮಕ್ಕಳ ತಾಯಿ ಆಗುತ್ತಿರುವುದು ಖುಷಿ ಇದ್ದರೆ, ಮತ್ತೊಂದು ಕಡೆ ಅಮಲಾ ನಟನೆಯ ‘ಆಡುಜೀವಿತಂ’ (Aadujeevitham) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರ್‌ಗೆ ಅಮಲಾ ನಾಯಕಿಯಾಗಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಬೋಲ್ಡ್ ಬಟ್ಟೆಯಲ್ಲಿ ಕಾಣಿಸಿಕೊಂಡ ಅಮಲಾಗೆ ನೆಟ್ಟಿಗರು ಕಾಲೆಳೆದಿದ್ದಾರೆ. ಬಟ್ಟೆ ಮ್ಯಾಟರ್‌ಗೆ ನಟಿಯ ಹಿಗ್ಗಾಮುಗ್ಗಾ ಟ್ರೋಲ್‌ ಮಾಡಿದ್ದಾರೆ.

ಇತ್ತೀಚೆಗೆ ನಟಿ ಅಮಲಾ ಅವರು ಉದ್ಯಮಿ ಜಗತ್ ದೇಸಾಯಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ ಒಂದು ತಿಂಗಳ ನಂತರ ತಾಯಿಯಾಗಿರುವ ಗುಡ್ ನ್ಯೂಸ್ ತಿಳಿಸಿದ್ದರು. ಚೊಚ್ಚಲ ಮಗುವಿನ ಆಗಮನಕ್ಕೆ ಎದುರು ನೋಡ್ತಿರುವಾಗ ತಾವು ನಟಿಸಿರುವ ಸಿನಿಮಾಗೂ ಪ್ರಚಾರಕ್ಕೆ ನಟಿ ಸಾಥ್ ನೀಡುತ್ತಿದ್ದಾರೆ.

ಇದೀಗ ಸಂದರ್ಶನಕ್ಕೆ ಬರುವಾಗ ಕಡುನೀಲಿ ಬಣ್ಣದ ಸ್ಲೀವ್‌ಲೆಸ್ ಡ್ರೆಸ್ ಧರಿಸಿ ಬಂದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನೆಗೆಟಿವ್ ಕಾಮೆಂಟ್ ಹಾಕಿದ್ದಾರೆ. ಇದೆಂಥಾ ಡ್ರೆಸ್ ಬೆಡ್‌ನಿಂದ ಎದ್ದ ಕೂಡಲೇ ಬಾತ್‌ರೂಮ್‌ಗೆ ಹಾಕಿಕೊಂಡು ಹೋಗುವ ಡ್ರೆಸ್ ಎಂದು ನೆಟ್ಟಿಗರೊಬ್ಬರು ಕುಟುಕಿದ್ದಾರೆ. ನಾನು ಅಮಲಾ ಪೌಲ್ ದೊಡ್ಡ ಅಭಿಮಾನಿಯಾಗಿದ್ದೆ. ಈಗ ಅಭಿಮಾನಿಯಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ನಟಿಯ ವಿಡಿಯೋ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಆದರೆ ನೆಗೆಟಿವ್ ಕಾಮೆಂಟ್‌ಗೆ ನಟಿ ಕ್ಯಾರೆ ಎನ್ನದೇ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ನಿರ್ದೇಶನದ ಈ ‘ಆಡುಜೀವಿತಂ’ ಚಿತ್ರದ ಕಥೆ ಇಮಿಗ್ರಟ್ಸ್ ಸುತ್ತವೇ ಸಾಗುತ್ತದೆ. ತನ್ನ ಹೊಟ್ಟೆ ಪಾಡಿಗಾಗಿ ಕೆಲಸ ಅರಸಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಅನುಭವಿಸುವ ಕಷ್ಟ, ಎದುರಿಸುವ ಸಮಸ್ಯೆ ಹೈಲೆಟ್. ಇನ್ನು ಆತನ ಪಾಸ್ಪೋರ್ಟ್ ಕಸಿದು ಆತನಿಗೆ ಕೊಡುವ ಹಿಂಸೆಗಳು ಆ ಬಿಸಿಲಿನ ಮರುಭೂಮಿಯಲ್ಲಿ ಆತ ಪಡುವ ಯಾತನೆ ಕುರಿತು ಸಾಗುವ ಕಥೆ ಇಲ್ಲಿದೆ.

 

ನಿರ್ದೇಶಕ ಬ್ಲೆಸ್ಸಿ ಅವರ 15 ವರ್ಷದ ಕನಸಿನ ಕಥೆ ಇದು. ಅವರ ಕಲ್ಪನೆಯ ಪಾತ್ರದಲ್ಲಿ ವಲಸಿಗ ವ್ಯಕ್ತಿಯಾಗಿ ಹೊಸ ಲುಕ್ ಮೂಲಕ ಕಾಣಿಸಿಕೊಂಡಿರುವ ಪೃಥ್ವಿರಾಜ್ ಸುಕುಮಾರನ್, ಹಲವಾರು ವರ್ಷಗಳಿಂದ ಈ ಚಿತ್ರಕ್ಕಾಗಿ ದುಡಿದಿದ್ದಾರೆ. ಇಡೀ ಚಿತ್ರತಂಡ ಹಗಲು ರಾತ್ರಿ ಎನ್ನದೆ ಚಿತ್ರದ ಔಟ್ಪುಟ್ ಗಾಗಿ ದುಡಿದಿದೆ. ಪೃಥ್ವಿರಾಜ್ ನಿರೀಕ್ಷೆಯ ಚಿತ್ರ ಇದಾಗಿದ್ದು, ಬ್ಲೆಸ್ಸಿ ನಿರ್ದೇಶನದ ;ಆಡುಜೀವಿತಂ’ 2008ರಲ್ಲಿ ಬೆನ್ಯಾಮಿನ್ ಬರೆದ ಅದೇ ಹೆಸರಿನ ಮಲಯಾಳಂ ಕಾದಂಬರಿ ಸಿನಿಮಾ ಇದು.

Share This Article