ಬೇಬಿ ಬಂಪ್ ಫೋಟೋ ಹಂಚಿಕೊಂಡ ‘ಹೆಬ್ಬುಲಿ’ ನಟಿ

Public TV
1 Min Read

‘ಹೆಬ್ಬುಲಿ’ (Hebbuli) ಸಿನಿಮಾದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತರಾದ ಸೌತ್ ನಟಿ ಅಮಲಾ ಪೌಲ್ (Amala Paul) ಸದ್ಯ ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿಯಾಗಿರುವ ಅಮಲಾ ಸದ್ಯ ಬೇಬಿ ಬಂಪ್ (Baby Bump) ಫೋಟೋಶೂಟ್ ಮಾಡಿಸಿದ್ದಾರೆ. ತೆರೆಹಿಂದಿನ ಫೋಟೋಶೂಟ್‌ನ ವಿಡಿಯೋವೊಂದನ್ನು ನಟಿ ಶೇರ್ ಮಾಡಿದ್ದಾರೆ.

ಇತ್ತೀಚೆಗೆ ನಟಿಯ ಸೀಮಂತ ಶಾಸ್ತ್ರ ಅದ್ಧೂರಿಯಾಗಿ ನಡೆದಿತ್ತು. ಈಗ ಕೆಂಪು ಬಣ್ಣದ ಗೌನ್ ಧರಿಸಿ ಫೋಟೋಶೂಟ್ ಮಾಡಿದ್ದಾರೆ. ಕ್ಯಾಮೆರಾಗೆ ಬೇಬಿ ಬಂಪ್ ಲುಕ್ ತೋರಿಸಿದ್ದಾರೆ. ವಿಡಿಯೋದಲ್ಲಿ ತಾಯ್ತನದ ಕಳೆ ಎದ್ದು ಕಾಣುತ್ತಿದೆ. ಇದನ್ನೂ ಓದಿ:ಪರಭಾಷೆಯಲ್ಲಿ ಕನ್ನಡತಿ ರುಕ್ಮಿಣಿ ವಸಂತ್‌ಗೆ ಭಾರೀ ಬೇಡಿಕೆ

 

View this post on Instagram

 

A post shared by Amala Paul (@amalapaul)

ನವೆಂಬರ್ 5ರಂದು ಜಗತ್ ದೇಸಾಯಿ ಜೊತೆ ಕೊಚ್ಚಿಯಲ್ಲಿ ಅಮಲಾ ಪೌಲ್ ಬಾಳಿಗೆ ಕಾಲಿಟ್ಟರು. ಹಲವು ವರ್ಷಗಳ ಪ್ರೀತಿಗೆ ಈ ಜೋಡಿ ಮದುವೆಯ ಮುನ್ನುಡಿ ಬರೆದರು. ನಟಿಗೆ 2ನೇ ಮದುವೆಯಾದ ಕಾರಣ ಆಪ್ತರ ಸಮ್ಮುಖದಲ್ಲಿ ಮದುವೆಯಾದರು.

ಇತ್ತೀಚೆಗೆ ತೆರೆಕಂಡ ‘ಆಡುಜೀವಿತಂ’ ಸಿನಿಮಾ ಸಕ್ಸಸ್ ಕಂಡಿದೆ. ಪೃಥ್ವಿರಾಜ್ ಸುಕುಮಾರನ್‌ಗೆ ನಾಯಕಿಯಾಗಿ ಅಮಲಾ ನಟಿಸಿದ್ದರು.

Share This Article