ಪತ್ತೆದಾರಿ ಸಿನಿಮಾದಲ್ಲಿ ಆಲಿಯಾ ಭಟ್- ಜು.15ರಿಂದ ಶೂಟಿಂಗ್ ಸ್ಟಾರ್ಟ್

Public TV
1 Min Read

ಬಾಲಿವುಡ್ ಬೆಡಗಿ ಆಲಿಯಾ ಭಟ್ (Alia Bhatt) ಮಗಳು ರಾಹಾ ಆರೈಕೆಯ ನಡುವೆ ಹೊಸ ಚಿತ್ರಕ್ಕಾಗಿ ತಯಾರಿ ಶುರು ಮಾಡಿಕೊಂಡಿದ್ದಾರೆ. ಇದೇ ಜುಲೈ 15ರಿಂದ ಹೊಸ ಚಿತ್ರದ ಶೂಟಿಂಗ್ ನಿಗದಿಯಾಗಿದೆ. ಈ ಮೂಲಕ ಅಭಿಮಾನಿಗಳಿಗೆ ನಟಿ ಸಿಹಿಸುದ್ದಿ ನೀಡಿದ್ದಾರೆ.

ಕೆಲತಿಂಗಳುಗಳ ಹಿಂದೆಯೇ ಯಶ್ ರಾಜ್ ಫಿಲ್ಮ್ಸ್‌ (Yash Raj Films) ನಿರ್ಮಾಣದ ಪತ್ತೆದಾರಿ ಸಿನಿಮಾದಲ್ಲಿ ಆಲಿಯಾ ಭಟ್ ನಟಿಸುತ್ತಾರೆ ಎಂದು ಘೋಷಣೆ ಆಗಿತ್ತು. ಆ ನಂತರ ಚಿತ್ರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಈಗ ಅಪ್‌ಡೇಟ್ ಸಿಕ್ಕಿದೆ. ಜುಲೈ 15ರಿಂದ ಮುಂಬೈ ನಗರದ ಹಲವೆಡೆ ಚಿತ್ರೀಕರಣ ಮಾಡಲು ತಂಡ ಯೋಚಿಸಿದೆ.

ಫೀಮೇಲ್ ಓರಿಯೇಟೆಂಡ್ ಸಿನಿಮಾದಲ್ಲಿ ಶಾರ್ವರಿ ವಾಘ್ ಜೊತೆ ಆಲಿಯಾ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಪತ್ತೆದಾರಿ ಪಾತ್ರಕ್ಕೆ ಆಲಿಯಾ ಜೀವತುಂಬಲಿದ್ದಾರೆ. ಇದನ್ನೂ ಓದಿ:ಜೈಲಿಗೆ ದರ್ಶನ್ ಕುಟುಂಬ ಭೇಟಿ- ತಾಯಿಯನ್ನು ನೋಡ್ತಿದಂತೆ ನಟ ಕಣ್ಣೀರು

ಅಂದಹಾಗೆ, ಆಲಿಯಾ ಕಡೆಯದಾಗಿ 2023ರಲ್ಲಿ ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ರಣ್‌ವೀರ್ ಸಿಂಗ್ (Ranveer Singh) ನಾಯಕಿಯಾಗಿ ನಟಿಸಿದರು.

Share This Article