ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಆಲಿಯಾ- ರಣ್‌ಬೀರ್ ಜೋಡಿ

Public TV
1 Min Read

ಬಾಲಿವುಡ್ ರಾಧೆ ಆಲಿಯಾ ಭಟ್ – ರಣ್‌ಬೀರ್ ಕಪೂರ್ (Ranbir Kapoor) ದಾಂಪತ್ಯ ಜೀವನಕ್ಕೆ ಕಾಲಿಟ್ಟು ಏಪ್ರಿಲ್ 14ಕ್ಕೆ ಒಂದು ವರ್ಷವಾಗಿದೆ. ಒಂದು ವರ್ಷ ಪೂರೈಸಿದ ಖುಷಿಯಲ್ಲಿ ನಟಿ ಆಲಿಯಾ, ಪತಿ ರಣ್‌ಬೀರ್ ಜೊತೆಗಿನ ಫೋಟೋವನ್ನ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

ಆಲಿಯಾ- ರಣ್‌ಬೀರ್ ಪ್ರೀತಿಗೆ ಬ್ರಹ್ಮಾಸ್ತ್ರ (Bhrahmastra) ಸಿನಿಮಾ ಸೆಟ್ ಕಾರಣವಾಯಿತು. ಈ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಪ್ರೇಮಾಂಕುರವಾಯಿತು. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾದರು. ಏ.14ಕ್ಕೆ ಮದುವೆ (Wedding) ಎಂಬ ಮುದ್ರೆ ಒತ್ತುವ ಮೂಲಕ ಫ್ಯಾನ್ಸ್ ಗುಡ್ ನ್ಯೂಸ್ ನೀಡಿದ್ದರು.

ನವೆಂಬರ್‌ನಲ್ಲಿ ಆಲಿಯಾ-ರಣ್‌ಬೀರ್ ಪುತ್ರಿ ಎಂಟ್ರಿಯಾಯಿತು. ರಾಹಾ ಎಂದು ಮಗುವಿಗೆ ಹೆಸರನ್ನೀಟ್ಟಿದ್ದಾರೆ. ಮಗಳ ಆರೈಕೆಯ ಜೊತೆ ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಟ್ವೀಟ್ ಗೆ ‘ಥ್ಯಾಂಕ್ಯೂ ಮೈ ಹೀರೋ’ ಎಂದ ಸಮಂತಾ

 

View this post on Instagram

 

A post shared by Alia Bhatt ???? (@aliaabhatt)

ಆಲಿಯಾ ಮದುವೆ ವಾರ್ಷಿಕೋತ್ಸವ ಸಂಭ್ರಮದ ಫೋಟೋ ಶೇರ್ ಮಾಡಿ, ಹ್ಯಾಪಿ ಡೇ ಎಂದು ಅಡಿಬರಹ ನೀಡಿದ್ದಾರೆ. 1ನೇ ಫೋಟೋ ಹಳದಿ ಶಾಸ್ತ್ರದಾಗಿದೆ. 2ನೇಯದ್ದು ರಣ್‌ಬೀರ್, ಆಲಿಯಾಗೆ ಪ್ರಪೋಸ್ ಮಾಡ್ತಿರುವ ಫೋಟೋ, 3ನೇ ಕುಟುಂಬದ ಫಂಕ್ಷನ್‌ವೊಂದರಲ್ಲಿ ತೆಗೆದ ಸುಂದರ ಫೋಟೋಗಳಾಗಿದೆ. ‘ಬ್ರಹ್ಮಾಸ್ತ್ರ’ ಜೋಡಿಯ ಮದುವೆ ಆ್ಯನಿವರ್ಸರಿಗೆ ಕುಟುಂಬದವರು, ಆಪ್ತರು, ಅಭಿಮಾನಿಗಳು ಶುಭಹಾರೈಸಿದ್ದಾರೆ.

Share This Article