ಮಮ್ಮಿಯಾದ್ಮೇಲೂ ಕಮ್ಮಿಯಾಗಲಿಲ್ಲ ಆಲಿಯಾ ಭಟ್‌ಗೆ ಡಿಮ್ಯಾಂಡ್

By
1 Min Read

ಬಾಲಿವುಡ್ ಬೆಡಗಿ ಆಲಿಯಾ ಭಟ್ (Alia Bhatt) ಮದುವೆಯಾಗಿ ರಾಹಾ (Raha) ಆರೈಕೆಯ ಬ್ಯುಸಿಯ ನಡುವೆ ಸಿನಿಮಾ ಮಾಡುತ್ತಿದ್ದಾರೆ. ಮದುವೆಯಾದ್ಮೇಲೆಯೂ ಕೂಡ ಅವರಿಗಿರುವ ಬೇಡಿಕೆ ಕಮ್ಮಿಯಾಗಿಲ್ಲ. ಬದಲಿಗೆ ಜಾಸ್ತಿ ಆಗಿದೆ. ಸಾಲು ಸಾಲು ಸಿನಿಮಾಗಳು ಅವರ ಕೈಯಲ್ಲಿದೆ. ಇದನ್ನೂ ಓದಿ:ಮಗಳ ಹೆಸರು ಬದಲಿಸಿದ ದುನಿಯಾ ವಿಜಯ್

ನಾಯಕಿಯಾಗಿ ಮೆರೆದವರು ಮದುವೆಯಾದ್ರೆ ಡಿಮ್ಯಾಂಡ್ ಕಮ್ಮಿಯಾಗುತ್ತೆ ಎಂಬ ಮಾತಿದೆ. ಆದರೆ ಅದನ್ನು ಆಲಿಯಾ ಭಟ್ ಹುಸಿ ಮಾಡಿದ್ದಾರೆ. ಮದುವೆಯಾದ್ಮೇಲೆ ಮತ್ತಷ್ಟು ನಟಿ ಬ್ಯುಸಿಯಾಗಿದ್ದಾರೆ. ರಣ್‌ಬೀರ್‌ಗಿಂತ (Ranbir) ಆಲಿಯಾಗೆ ಭಾರೀ ಬೇಡಿಕೆ ಇದೆ. ಹಾಗಾದ್ರೆ ಆಲಿಯಾ ಲಿಸ್ಟ್‌ನಲ್ಲಿ ಯಾವೆಲ್ಲಾ ಸಿನಿಮಾಗಳಿವೆ. ಇಲ್ಲಿದೆ ಮಾಹಿತಿ.

‘ರಾಕಿ ಔರ್ ರಾಣಿ ಕಾ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಆಲಿಯಾ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ್ದರು. ಇದೀಗ ರಣ್‌ಬೀರ್ ಕಪೂರ್ ಜೊತೆಯೇ ಬ್ರಹ್ಮಾಸ್ತ್ರ ಪಾರ್ಟ್ 2 ಮತ್ತು 3 ಸಿನಿಮಾವಿದೆ. ‘ಲವ್ & ವಾರ್’, ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಚಿತ್ರದಲ್ಲಿ ರಾ ಏಜೆಂಟ್ ಪಾತ್ರದಲ್ಲಿ ನಟಿಸಲಿದ್ದಾರೆ. ಜಿಗ್ರಾ ಎಂಬ ಚಿತ್ರವಿದೆ.

ಹಿಂದಿ ಸಿನಿಮಾಗಳ ಜೊತೆಗೆ ಹಾಲಿವುಡ್ ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ಎಲ್ಲಾ ಅಂತಿಮ ಆಗಲಿದೆ.

2022ರಲ್ಲಿ ರಣ್‌ಬೀರ್ ಕಪೂರ್ ಜೊತೆ ಆಲಿಯಾ ಭಟ್ ಮದುವೆ ಜರುಗಿತು. ಹಲವು ವರ್ಷಗಳ ಡೇಟಿಂಗ್ ನಂತರ ರಣ್‌ಬೀರ್ ಜೊತೆ ಆಲಿಯಾ ಹಸೆಮಣೆ ಏರಿದ್ದರು. ಅವರ ಮದುವೆಗೆ ಆಪ್ತರು, ಕುಟುಂಬಸ್ಥರಷ್ಟೇ ಭಾಗಿಯಾಗಿದ್ದರು.

Share This Article