ಡಿವೋರ್ಸ್ ವದಂತಿ ನಡುವೆ ಮಗಳ ಜೊತೆ ನ್ಯೂಯಾರ್ಕ್ ವೆಕೇಷನ್ ಮುಗಿಸಿ ಬಂದ ಐಶ್ವರ್ಯಾ ರೈ

Public TV
1 Min Read

ಬಾಲಿವುಡ್ ನಟಿ ಐಶ್ವರ್ಯಾ ರೈ(Aishwarya Rai) ಆಗಾಗ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಡಿವೋರ್ಸ್ (Divorce) ವದಂತಿ ನಡುವೆ ಮಗಳ ಜೊತೆ ನಟಿ ನ್ಯೂಯಾರ್ಕ್ ವೆಕೇಷನ್ ಮುಗಿಸಿ ಬಂದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪುತ್ರಿ ಆರಾಧ್ಯಾ ಜೊತೆ ನಟಿ ಎಂಟ್ರಿ ಕೊಟ್ಟಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ನ್ಯೂಯಾರ್ಕ್ ವೆಕೇಷನ್‌ಗೆ ಮಗಳ ಜೊತೆ ಐಶ್ವರ್ಯಾ ರೈ ತೆರಳಿದ್ದರು. ಇಂದು (ಆ.1) ಪುತ್ರಿಯೊಂದಿಗೆ ಭಾರತಕ್ಕೆ ಮರಳಿದ್ದಾರೆ. ನಟಿ ಬ್ಲ್ಯಾಕ್ ಕಲರ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಆರಾಧ್ಯಾ ನೇರಳೆ ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದಾರೆ. ಇಬ್ಬರೂ ನಗು ನಗುತ್ತಲೇ ಕ್ಯಾಮೆರಾಗೆ ಸ್ಮೈಲ್ ಮಾಡಿದ್ದಾರೆ. ಈ ವೇಳೆ, ಇವರ ಜೊತೆ ಅಭಿಷೇಕ್ ಬಚ್ಚನ್ (Abhishek Bachchan) ಇಲ್ಲದೇ ಇರೋದು ಡಿವೋರ್ಸ್ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ.

ಇತ್ತೀಚೆಗೆ ಅಂಬಾನಿ ಮನೆ ಮಗನ ಮದುವೆಯಲ್ಲಿ ಅಭಿಷೇಕ್ ಬಚ್ಚನ್ ಕುಟುಂಬದ ಜೊತೆ ನಟಿ ಕಾಣಿಸಿಕೊಳ್ಳದೆ ಮಗಳ ಜೊತೆ ಬಂದು ಕ್ಯಾಮೆರಾ ಪೋಸ್ ನೀಡಿದ್ದರು. ಅಂದಿನಿಂದಲೇ ಇಬ್ಬರ ಡಿವೋರ್ಸ್ ಬಗ್ಗೆ ಗುಸು ಗುಸು ಶುರುವಾಗಿತ್ತು. ಇದುವರೆಗೂ ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಇದನ್ನೂ ಓದಿ:ಬೆಡ್‌ರೂಮ್ ಫೋಟೋ ಹಂಚಿಕೊಂಡ ನಮ್ರತಾ ಗೌಡ

ಅಂದಹಾಗೆ, ಕಡೆಯದಾಗಿ ನಟಿ, ಪೊನ್ನಿಯನ್ ಸೆಲ್ವನ್ 1, ಪೊನ್ನಿಯನ್ ಸೆಲ್ವನ್ 2 ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಈ ಎರಡು ಪಾರ್ಟ್ ಸೂಪರ್ ಹಿಟ್ ಆಗಿತ್ತು. ಈಗ ಮತ್ತೆ ಹೊಸ ಕಥೆಗಳನ್ನು ನಟಿ ಕೇಳ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಐಶ್ವರ್ಯಾ ಅಪ್‌ಡೇಟ್ ಕೊಡ್ತಾರಾ ಕಾದುನೋಡಬೇಕಿದೆ.

Share This Article