18ನೇ ಆ್ಯನಿವರ್ಸರಿ ಸಂಭ್ರಮ: ಪತಿಯೊಂದಿಗಿನ ಫೋಟೋ ಹಂಚಿಕೊಂಡ ಐಶ್ವರ್ಯಾ ರೈ

Public TV
1 Min Read

ಬಾಲಿವುಡ್ ನಟಿ ಐಶ್ವರ್ಯಾ ರೈ (Aishwarya Rai) ಹಾಗೂ ಅಭಿಷೇಕ್ ಬಚ್ಚನ್ (Abhishek Bachchan) ಮದುವೆಯಾಗಿ ನಿನ್ನೆ (ಏ.20) 18 ವರ್ಷಗಳು ಕಳೆದಿವೆ. ಈ ಹಿನ್ನೆಲೆ ಪತಿ ಹಾಗೂ ಮಗಳೊಂದಿನ ಕ್ಯೂಟ್ ಆಗಿ ಸೆಲ್ಫಿಯೊಂದನ್ನು ಐಶ್ವರ್ಯಾ ರೈ ಹಂಚಿಕೊಂಡಿದ್ದಾರೆ. ಈ ಮೂಲಕ ದಾಂಪತ್ಯದಲ್ಲಿ ಬಿರುಕು ಎಂದು ಅಪಪ್ರಚಾರ ಮಾಡುವವರಿಗೆ ನಟಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಗಾಯಕಿ ಪೃಥ್ವಿ ಭಟ್ ಪ್ರೇಮವಿವಾಹ: ‘ಸರಿಗಮಪ’ ಜ್ಯೂರಿ ಮೇಲೆ ಆರೋಪ

18ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹೊಸ ಫೋಟೋವನ್ನು ಐಶ್ವರ್ಯಾ ಹಂಚಿಕೊಂಡಿದ್ದಾರೆ. ಪತಿ ಮತ್ತು ಮಗಳು ಆರಾಧ್ಯ ಜೊತೆ ಖುಷಿಯಿಂದ ಕ್ಯಾಮೆರಾಗೆ ನಟಿ ಪೋಸ್ ನೀಡಿದ್ದಾರೆ. ಐಶ್ವರ್ಯಾ ಮತ್ತು ಅಭಿಷೇಕ್ ಬಾಂಧವ್ಯ ಚೆನ್ನಾಗಿದೆ ಎಂಬುದಕ್ಕೆ ಈ ಪೋಸ್ಟ್‌ನಿಂದ ಟೀಕಿಸುವವರಿಗೆ ಉತ್ತರ ಕೊಟ್ಟಿದ್ದಾರೆ. ಸದ್ಯ ನಟಿಯ ಫ್ಯಾಮಿಲಿ ಫೋಟೋ ನೋಡಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ.

ಇತ್ತೀಚೆಗೆ ಕುಟುಂಬದ ಮದುವೆ ಸಮಾರಂಭವೊಂದರಲ್ಲಿ ಮಗಳು ಆರಾಧ್ಯ ಜೊತೆ ಐಶ್ವರ್ಯಾ ರೈ ದಂಪತಿ ಮಸ್ತ್ ಆಗಿ ಹೆಜ್ಜೆ ಹಾಕಿದ್ದರು. ಈ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು. ಇದನ್ನೂ ಓದಿ:ಮಧ್ಯಪ್ರದೇಶ ಸಿಎಂ ಭೇಟಿಯಾದ ರಾಕಿಂಗ್ ಸ್ಟಾರ್ ಯಶ್

ಗುರು, ಕುಚ್ ನಾ ಕಹೋ, ಧೂಮ್ 2, ರಾವಣ್, ಸರ್ಕಾರ್ ರಾಜ್, ಹೀಗೆ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ನಟಿಸಿದ್ದಾರೆ. ಚಿತ್ರೀಕರಣದಲ್ಲಿ ಆದ ಪರಿಚಯ ಪ್ರೀತಿಗೆ ತಿರುಗಿ ಮದುವೆಯ ಮುದ್ರೆ ಒತ್ತಿದ್ದರು. 2007ರಲ್ಲಿ ಹೊಸ ಬಾಳಿಗೆ ಕಾಲಿಟ್ಟರು. ಇವರ ದಾಂಪತ್ಯಕ್ಕೆ ಆರಾಧ್ಯ ಬಚ್ಚನ್ ಸಾಕ್ಷಿಯಾಗಿದ್ದಾಳೆ.

Share This Article