ಪ್ರೀತಿಯಾದ ಬಗ್ಗೆ ಐಂದ್ರಿತಾ ಮನದ ಮಾತು – ಎಷ್ಟು ದಿನ, ಯಾವ ರೀತಿ ಮದ್ವೆ?

Public TV
3 Min Read

-ದೂದ್ ಪೇಡಾ ಮೇಲೆ ಬೆಂಗಾಲಿ ಚೆಲುವೆಗೆ ಲವ್ ಆಗಿದ್ದು ಹೇಗೆ?

ಬೆಂಗಳೂರು: ಸ್ಯಾಂಡಲ್‍ವುಡ್ ನಲ್ಲಿ ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್ ಸುಮಾರು 8 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಈ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದ್ರೆ ಇದೀಗ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಧಿಕೃತವಾಗಿ ತಮ್ಮ ಮದುವೆಯ ಬಗ್ಗೆ ಬಿಚ್ಚಿಟ್ಟಿದ್ದಾರೆ.

ಐಂದ್ರಿತಾ ರೇ ಮತ್ತು ದಿಗಂತ್ ಮುಂದಿನ ತಿಂಗಳು ಡಿಸೆಂಬರ್ 12 ರಂದು ರಿಂಗ್ ಬದಲಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸ್ವತಃ ಐಂದ್ರಿಯಾ ಅವರೇ, “ನನ್ನ ಬೆಸ್ಟ್ ಫ್ರೇಂಡ್ ನನ್ನು ಮದುವೆಯಾಗುತ್ತಿರುವುದಕ್ಕೆ ತುಂಬಾ ಉತ್ಸುಕಳಾಗಿದ್ದೇನೆ” ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.

ಮದ್ವೆ ನಿಶ್ಚಯ:
ಈಗ ಗೋವಾದಲ್ಲಿ ‘ಗರುಡ’ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಅನೇಕ ವರ್ಷಗಳಿಂದ ನಮ್ಮಿಬ್ಬರ ನಡುವೆ ಪ್ರೀತಿ ಇದೆ ಎಂದು ಗಾಸಿಪ್ ಹರಿದಾಡುತ್ತಿತ್ತು. ಆದರೆ ನಾವು ಈ ಬಗ್ಗೆ ಎಲ್ಲೂ ಬಹಿರಂಗಪಡಿಸಿರಲಿಲ್ಲ. ಯಾಕೆಂದರೆ ನಾವು ಮದುವೆಯಾಗಲು ನಿಶ್ಚಯಿಸಿದ ಮೇಲೆ ಹೇಳಬೇಕು ಎಂದು ನಿರ್ಧರಿಸಿದ್ದೇವು. ಹಾಗಾಗಿ ನಾವಿಬ್ಬರು ಎಲ್ಲೂ ನಮ್ಮ ಪ್ರೀತಿಯ ಬಗ್ಗೆ ಮಾತನಾಡುತ್ತಿರಲಿಲ್ಲ. ಈಗ ಮದುವೆ ನಿಶ್ಚಯವಾಗಿದೆ, ಹಾಗಾಗಿ ಎಲ್ಲರಿಗೂ ಕೂಗಿ ಹೇಳಬೇಕು ಅನ್ನಿಸುತ್ತದೆ. ಆದರೆ ಕೊನೆಗೂ ನಾನು ನನ್ನ ಒಳ್ಳೆಯ ಗೆಳೆಯನನ್ನು ಮದುವೆಯಾಗುತ್ತಿರುವುದಕ್ಕೆ ತುಂಬಾ ಉತ್ಸುಕಳಾಗಿದ್ದೇನೆ ಎಂದು ಐಂದ್ರಿತಾ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಪ್ರೀತಿ ಹೇಗಾಯ್ತು?:
2009ರಲ್ಲಿ ‘ಮನಾಸಾರೆ’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು, ಅಲ್ಲಿ ನಮ್ಮಿಬ್ಬರ ಪರಿಚಯವಾಯಿತು. ಬಳಿಕ ಜನವರಿ 2010ರಲ್ಲಿ ನಾವಿಬ್ಬರು ಪ್ರೀತಿ ಮಾಡಲು ಶುರು ಮಾಡಿದೆವು. ಅಂದಿನಿಂದ ಇಂದಿನವರೆಗೂ ಒಬ್ಬೊಬ್ಬರನ್ನು ಅರ್ಥ ಮಾಡಿಕೊಂಡಿದ್ದೇವೆ. ಇಬ್ಬರು ಒಂದೇ ಆಸಕ್ತಿ-ಆಲೋಚನೆಗಳನ್ನು ಹೊಂದಿದ್ದೇವೆ. ನಮ್ಮಿಬ್ಬರ ಪ್ರೀತಿಯ ಪ್ರಯಾಣ ತುಂಬಾ ಚೆನ್ನಾಗಿತ್ತು ಎಂದು ಪ್ರೀತಿ ಮೂಡಿದ ಬಗ್ಗೆ ಐಂದ್ರಿತಾ ಹೇಳಿಕೊಂಡಿದ್ದಾರೆ.

ದಿಗಂತ್ ಅಂತಹ ಹುಡುಗ ನನಗೆ ಪಾರ್ಟ್‍ನರ್ ಆಗಿ ಸಿಗುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ನಮ್ಮಿಬ್ಬರ ಆಲೋಚನೆ ಅಭಿರುಚಿ ಎಲ್ಲವೂ ಒಂದೇ ರೀತಿ ಇದೆ. ಅದರಲ್ಲೂ ವಿವಾಹದ ಬಗ್ಗೆ ಒಂದೇ ಅಭಿಪ್ರಾಯವನ್ನು ಇಟ್ಟುಕೊಂಡಿದ್ದೇವೆ. ಇಬ್ಬರಿಗೂ ಅದ್ಧೂರಿಯಾಗಿ, ಹಣ ಖರ್ಚು ಮಾಡಿ ಮದುವೆಯಾಗಬೇಕು ಎಂದು ಇಷ್ಟವಿಲ್ಲ ಎಂದು ಐಂದ್ರಿಯಾ ಹೇಳಿದ್ದಾರೆ.

ಅದ್ಧೂರಿ ಮದುವೆ ಇಷ್ಟವಿಲ್ಲ:
ದಿಗಂತ್ ಕೂಡ ಅದ್ಧೂರಿ ಮದುವೆಯನ್ನು ಇಷ್ಟ ಪಡುವುದಿಲ್ಲ. ಆದರೆ ಮದುವೆಗೆ ಖರ್ಚು ಮಾಡುವ ಹಣವನ್ನು ದತ್ತಿ ಸಂಸ್ಥೆಗಳಿಗೆ ದಾನ ಮಾಡಲು ಇಷ್ಟಪಡುತ್ತಾರೆ. ನಾನು ಯಾವಾಗಲೂ ಸುಂದರ ಮದುವೆಯ ಬಗ್ಗೆ ಕನಸು ಕಂಡಿದ್ದೇನೆ. ಅದೇ ರೀತಿ ದಿಗಂತ್ ಕುಟುಂಬವು ಕೂಡ ಬೆಂಗಾಲಿ ಶೈಲಿಯಲ್ಲಿ ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದಾರೆ. ಮದುವೆ ದಿನ ದಿಗಂತ್ ನನ್ನು ಬಿಳಿ ಟೋಪಿಯಲ್ಲಿ ನೋಡಲು ನಾನು ಕಾಯುತ್ತಿದ್ದೇನೆ. ಡಿಸೆಂಬರ್ 11 ರಂದು ಅರಿಶಿಣ ಶಾಸ್ತ್ರದ ಸಮಾರಂಭವನ್ನು ಏರ್ಪಡಿಸಿದ್ದೇವೆ. ಡಿಸೆಂಬರ್ 12 ರಂದು ಮದುವೆ ನಡೆಯಲಿದೆ ಮತ್ತು ಸಿನಿಮಾರಂಗದ ಸ್ನೇಹಿತರಿಗೆ ಪಾರ್ಟಿ ಆಯೋಜನೆ ಮಾಡಿದ್ದೇವೆ ಎಂದು ಐಂದ್ರಿತಾ ಹೇಳಿದ್ದಾರೆ.

ಮಂಡಿಯೂರಿ ಪ್ರಪೋಸ್ ಮಾಡಿದ್ರು:
ನಮ್ಮ ಸಂತೋಷಕ್ಕಾಗಿ ಮದುವೆಗೆ ಒಂದು ವಾರದ ಮುಂಚಿತವಾಗಿ ಅನಾಥಾಶ್ರಮಗಳು ಮತ್ತು ಪ್ರಾಣಿ ಆಶ್ರಯಗಳನ್ನು ಭೇಟಿ ಮಾಡುತ್ತೇವೆ. ಮೂರು ತಿಂಗಳ ಹಿಂದೆ ದಿಗಂತ್ ಅವರ ಮನೆಯಲ್ಲಿರುವ ಟೆರೇಸ್ ನಲ್ಲಿ ಮದುವೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಲ್ಲಿ ನಮ್ಮ ಕುಟುಂಬದವರು ಕೂಡ ಇದ್ದರು. ಈ ವೇಳೆ ದಿಗಂತ್ ತಮ್ಮ ಮೊಣಕಾಲೂರಿ ಕುಳಿತು ಎಲ್ಲರ ಮುಂದೆ ಪ್ರಪ್ರೋಸ್ ಮಾಡಿದ್ದರು. ನಿಜಕ್ಕೂ ನನಗೆ ಆಶ್ಚರ್ಯವಾಯಿತು. ಆದರೆ ಆ ಕ್ಷಣ ತುಂಬಾ ಸುಂದರ ಮತ್ತು ಭಾವನಾತ್ಮಕವಾಗಿತ್ತು ಎಂದು ತನ್ನ ಮದುವೆಯ ಬಗ್ಗೆ ಹಂಚಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *