ಕ್ಯಾಮೆರಾಗೆ ಮುಖ ತೋರಿಸದೇ ಗರ್ಲ್‌ಫ್ರೆಂಡ್‌ ಅದಿತಿ ಜೊತೆ ವಿದೇಶಕ್ಕೆ ಹಾರಿದ ಸಿದ್ಧಾರ್ಥ್

Public TV
1 Min Read

ಸೌತ್ ಸಿನಿಮಾರಂಗದಲ್ಲಿ ಒಂದ್ ಕಡೆ ವರುಣ್ ತೇಜ್- ಲಾವಣ್ಯ ಎಂಗೇಜ್‌ಮೆಂಟ್ ಸಿದ್ಧತೆ ಭರದಿಂದ ಸಾಗುತ್ತಿದೆ. ಇನ್ನೊಂದು ಕಡೆ ಸಿದ್ಧಾರ್ಥ್- ಅದಿತಿ ರಾವ್ ಹೈದರಿ (Aditi Rao Hydari) ಓಡಾಟ, ಇಬ್ಬರ ಲವ್ವಿ-ಡವ್ವಿ ಸಖತ್ ಸದ್ದು ಮಾಡುತ್ತಿದೆ. ಇದೀಗ ಸಿದ್- ಅದಿತಿ ಜೋಡಿ, ಕ್ಯಾಮೆರಾ ಮುಂದೆ ಮುಖ ಮುಚ್ಚಿಕೊಂಡು ವಿದೇಶಕ್ಕೆ ಹಾರಿದ್ದಾರೆ.

‘ಮಹಾಸುಮುದ್ರಂ’ (Mahasamudram) ಸೆಟ್‌ನಲ್ಲಿ ಶುರುವಾದ ಇಬ್ಬರ ಗೆಳೆತನ ಇದೀಗ ಪ್ರೀತಿಯ ಹಂತಕ್ಕೆ ಬಂದು ತಲುಪಿದೆ. ಇಬ್ಬರ ಡೇಟಿಂಗ್, ಮೀಟಿಂಗ್ ಎಲ್ಲವೂ ಜೋರಾಗಿದೆ. ಚಿತ್ರರಂಗದಲ್ಲಿ ಒಬ್ಬೊಬ್ಬರೇ ಸ್ಟಾರ್ ಜೋಡಿ ಹಸೆಮಣೆ (Wedding)  ಏರುತ್ತಿದ್ದಾರೆ. ಹೀಗಿರುವಾಗ ಸಿದ್- ಅದಿತಿ, ತಮ್ಮ ಪ್ರೀತಿ (Love) ಬಗ್ಗೆ ಎಲ್ಲೂ ಅಧಿಕೃತವಾಗಿ ಹೇಳದೇ ಸೈಲೆಂಟ್ ಆಗಿದ್ದಾರೆ. ಸದ್ಯದಲ್ಲೇ ಈ ಜೋಡಿ ಗುಡ್ ನ್ಯೂಸ್ ಕೊಡುತ್ತಾರಾ ಅಂತಾ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

 

View this post on Instagram

 

A post shared by Viral Bhayani (@viralbhayani)

ಈಗ ಸಿದ್ಧಾರ್ಥ್ (Siddarth) ಮತ್ತು ಅದಿತಿ ರಾವ್ (Aditi Rao) ಇಬ್ಬರೂ ಪ್ರವಾಸಕ್ಕೆ ಹಾರಿದ್ದಾರೆ. ಇಬ್ಬರೂ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಅದಿತಿ ಮಾತ್ರ ಕ್ಯಾಮೆರಾಗೆ ಹಾಯ್ ಹೇಳುತ್ತಾ ಹೋದರು. ಆದರೆ ಸಿದ್ಧಾರ್ಥ್ ಮಾಸ್ಕ್ ಮತ್ತು ಕನ್ನಡಕ ಹಾಕಿದ್ದರು. ಕ್ಯಾಮೆರಾ ಕಡೆ ತಿರುಗಿಯೂ ನೋಡದೆ ಹೊರಟು ಹೋದರು. ಅದಿತಿ ಮಾತ್ರ ಸೋಲೊ ಪೋಸ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇಬ್ಬರೂ ಎಲ್ಲಿಗೆ ಹಾರಿದ್ದಾರೆ ಎನ್ನುವುದು ಬಹಿರಂಗವಾಗಿಲ್ಲ. ಇದನ್ನೂ ಓದಿ:‘ಘೋಸ್ಟ್’ ಚಿತ್ರದ ಸೆಟ್ ಗೆ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ

ಸಿದ್ಧಾರ್ಥ್ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದಿತಿ ಹಿಂದಿ- ಸೌತ್ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಆದಷ್ಟು ಬೇಗ ಈ ಜೋಡಿ ಕೂಡ ಮದುವೆ ಬಗ್ಗೆ ಸಿಹಿಸುದ್ದಿ ಕೊಡಲಿ ಅಂತಾ ಫ್ಯಾನ್ಸ್ ಕಾಯ್ತಿದ್ದಾರೆ.

Share This Article