ಪ್ಯಾರಿಸ್‌ನ ರೊಮ್ಯಾಂಟಿಕ್‌ ಫೋಟೋ ಹಂಚಿಕೊಂಡ ಅದಿತಿ ಪ್ರಭುದೇವ

Public TV
1 Min Read

ಸ್ಯಾಂಡಲ್‌ವುಡ್ ಬ್ಯೂಟಿ ಅದಿತಿ ಪ್ರಭುದೇವ (Aditi Prabhudeva) ಅವರು ಗೃಹಿಣಿಯಾದ್ಮೇಲೆ ವೈವಾಹಿಕ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಯಶಸ್ ಪಟ್ಲಾ ಜೊತೆ ಅದಿತಿ ದಾಂಪತ್ಯ ಬದುಕಿಗೆ ಕಾಲಿಟ್ಟ ಮೇಲೆ ಮ್ಯಾರೇಜ್ ಲೈಫ್‌ನ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಅವರು ಪತಿ ಜೊತೆ ಪ್ಯಾರಿಸ್‌ನಲ್ಲಿದ್ದಾರೆ. ಪ್ಯಾರಿಸ್ (Paris) ಪ್ರಣಯದ ಬ್ಯೂಟಿಫುಲ್ ಫೋಟೋಗಳನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ನಿರೂಪಕಿ, ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಅದಿತಿ ಕಾಲಿಟ್ಟರು. ಬಳಿಕ ಅಜಯ್ ರಾವ್‌ಗೆ ‘ಧೈರ್ಯಂ’ (Dhairayam) ಚಿತ್ರಕ್ಕೆ ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಅದಿತಿ ಪಾದಾರ್ಪಣೆ ಮಾಡಿದ್ರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದರು. ಅವರ ಅದ್ಭುತ ನಟನೆ & ಸ್ಪಷ್ಟ ಕನ್ನಡಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ಇದನ್ನೂಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ

ಧೈರ್ಯಂ, ಸಿಂಗ, ಬ್ರಹ್ಮಚಾರಿ, ಬಜಾರ್, ತೋತಾಪುರಿ, ತ್ರಿಬಲ್ ರೈಡಿಂಗ್ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಅದಿತಿ ಪ್ರಭುದೇವ ಕಳೆದ ವರ್ಷ ನವೆಂಬರ್‌ನಲ್ಲಿ ವೈವಾಹಿಕ ಬದುಕಿಗೆ ನಾಂದಿ ಹಾಡಿದರು. ಯಶಸ್ ಪಟ್ಲಾ ಅವರನ್ನ ಅದಿತಿ ಪ್ರಭುದೇವ ಮದುವೆಯಾದರು. ಅದಿತಿ- ಯಶಸ್ ಪಟ್ಲಾ ವಿವಾಹ ಮಹೋತ್ಸವ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿತ್ತು.

ಮದುವೆಯ ಬಳಿಕ ಅದಿತಿ ಪ್ರಭುದೇವ ಹಾಗೂ ಯಶಸ್ ಪಟ್ಲಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಅದಿತಿ ಪ್ರಭುದೇವ ಮತ್ತು ಪತಿ ಯಶಸ್ ಪಟ್ಲಾ ಸ್ವಿಟ್ಜರ್ಲ್ಯಾಂಡ್‌ಗೆ ಫ್ಲೈಟ್ ಹತ್ತಿದ್ದರು. ಇದೀಗ ಪ್ಯಾರಿಸ್‌ನಲ್ಲಿದ್ದಾರೆ ಅದಿತಿ ದಂಪತಿ. ಪ್ಯಾರಿಸ್‌ನ ವಿಶ್ವವಿಖ್ಯಾತ ಐಫೆಲ್ ಟವರ್ ಎದುರು ಅದಿತಿ ಪ್ರಭುದೇವ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅದಿತಿ – ಯಶಸ್ ಪ್ಯಾರಿಸ್ ಪ್ರಣಯದ ಬ್ಯೂಟಿಫುಲ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Share This Article