ಪೈಲ್ವಾನನ ಕಣ್ಮಣಿಯ ಪ್ರೇಮಪುರಾಣ!

Public TV
1 Min Read

ಪೈಲ್ವಾನ್ ಚಿತ್ರದ ಮೂಲಕವೇ ಕನ್ನಡಕ್ಕೆ ಪರಭಾಷಾ ಸುಂದರಿಯ ಆಗಮನವಾಗಿದೆ. ಕಿಚ್ಚನಿಗೆ ಜೋಡಿಯಾಗಿ ನಟಿಸಿರೋ ಆಕಾಂಕ್ಷಾ ಸಿಂಗ್ ಪಾಲಿಗೆ ಈ ಮೊದಲ ಚಿತ್ರದಿಂದಲೇ ಗ್ರ್ಯಾಂಡ್ ಓಪನಿಂಗ್ ಸಿಗುವ ಲಕ್ಷಣಗಳೂ ಸ್ಪಷ್ಟವಾಗಿಯೇ ಗೋಚರಿಸುತ್ತಿದೆ. ಇದು ಆಕಾಂಕ್ಷಾ ಮೊದಲ ಚಿತ್ರವಾದ್ದರಿಂದ, ಅವರು ಕನ್ನಡಕ್ಕೆ ಹೊಸಬರಾದ್ದರಿಂದ ಅವರ ಬಗ್ಗೆ ಪ್ರೇಕ್ಷಕರಿಗೆ ಹೆಚ್ಚೇನೂ ಗೊತ್ತಿಲ್ಲ. ಆದರೆ ಅವರೇ ಇನ್‍ಸ್ಟಾಗ್ರಾಮ್ ಖಾತೆಯ ಮೂಲಕ ತಮ್ಮ ಖಾಸಗಿ ಬದುಕಿನ ಬಗ್ಗೆ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಜಾಹೀರು ಮಾಡಿದ್ದಾರೆ.

ಸಿನಿಮಾ ನಟಿಯರ ಖಾಸಗಿ ಬದುಕಿನ ಸಂಗತಿಗಳ ಬಗ್ಗೆ ಸದಾ ಕ್ಯೂರಿಯಾಸಿಟಿ ಹೊಂದಿರುತ್ತಾರೆ. ಹಾಗಿದ್ದ ಮೇಲೆ ಸುದೀಪ್ ಜೊತೆ ಕಣ್ಣುಮಣಿಯೆ ಕಣ್ಣು ಹೊಡಿಯೆ ಎಂಬ ಹಾಡಿನ ಮೂಲಕ ಎಲ್ಲರ ಮನಗೆದ್ದಿರೋ ಆಕಾಂಕ್ಷಾ ವಿಚಾರಗಳನ್ನು ತಿಳಿದುಕೊಳ್ಳಲು ಮುಂದಾಗದಿರುತ್ತಾರಾ? ಆದರೀಗ ಅದೆಲ್ಲವನ್ನು ಅರ್ಥ ಮಾಡಿಕೊಂಡವರಂತೆ ಇನ್‍ಸ್ಟಾಗ್ರಾಮ್ ಖಾತೆಯ ಮೂಲಕ ತನ್ನ ಖಾಸಗಿ ಬದುಕು, ಅದರಲ್ಲಿಯೂ ತನ್ನ ಪತಿಯೊಂದಿಗಿನ ಸ್ನೇಹ ಸಂಬಂಧಗಳ ಬಗ್ಗೆ ಒಂದಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ.

ಅದರಲ್ಲಿಯೂ ಅವರು ಹೇಳಿಕೊಂಡಿರೋದು ತಮ್ಮ ಪತಿಯ ಬಗ್ಗೆ. ಈಕೆಗೆ ಮದುವೆಯಾಗಿದೆ ಎಂಬುದೇ ಗೊತ್ತಿಲ್ಲದ ಮಂದಿಗಿದು ಶಾಂಕಿಂಗ್ ನ್ಯೂಸ್ ಆಗಿದ್ದರೂ ಆಕಾಂಕ್ಷಾ ಸಿನಿಮಾ ಯಾನ ಆರಂಭಿಸಿದ್ದೇ ಮದುವೆಯಾದ ನಂತರವಂತೆ. ಆಕಾಂಕ್ಷಾ ಮತ್ತು ಅವರ ಪತಿ ಕುನಾಲ್ ಸೈನ್ ಅವರದ್ದು ವಿಶೇಷವಾದ ಪ್ರೇಮ್ ಕಹಾನಿ. ಆಕಾಂಕ್ಷಾ ಹತ್ತನೇ ತರಗತಿಯಲ್ಲಿರುವಾಗಲೇ ಕುನಾಲ್ ಮೇಲೆ ಲವ್ವಾಗಿತ್ತಂತೆ. ಆ ನಂತರದಲ್ಲಿ ವರ್ಷಗಟ್ಟಲೆ ಈ ಪ್ರೀತಿಯನ್ನು ಕಾಪಾಡಿಕೊಂಡು ಬಂದಿದ್ದ ಈ ಜೋಡಿ 2014ರಲ್ಲಿ ಮದುವೆಯಾಗಿತ್ತು.

https://www.instagram.com/p/B0yLpnXBeGx/

ಸಾಮಾನ್ಯವಾಗಿ ನಟಿಯರು ಅದೆಷ್ಟೇ ಬೇಡಿಕೆ ಹೊಂದಿದ್ದರೂ ಮದುವೆಯಾದ ನಂತರ ಅವಕಾಶ ಕಡಿಮೆಯಾಗುತ್ತದೆ ಅಂತ ಹೇಳಲಾಗುತ್ತದೆ. ಕೆಲ ಸ್ಟಾರ್ ನಟಿಯರೇ ಮದುವೆಯ ನಂತರ ಹೀಗೆ ಅವಕಾಶಗಳಿಲ್ಲದೇ ಕೊರಗುತ್ತಾರೆ. ಆದರೆ ಆಕಾಂಕ್ಷ ಮಾತ್ರ ಅದಕ್ಕೆ ತದ್ವಿರುದ್ಧ. ಯಾಕೆಂದರೆ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಅವರು ಸಿನಿಮಾ ನಾಯಕಿಯಾಗಿದ್ದೇ ಮದುವೆಯಾದ ನಂತರ. ತನ್ನ ಪತಿಯ ಸಂಪೂರ್ಣ ಸಹಕಾರದೊಂದಿಗೆ ಸಾಧನೆಯ ಹಾದಿಯಲ್ಲಿರೋ ಆಕಾಂಕ್ಷಾಗೆ ಪೈಲ್ವಾನ್ ಚಿತ್ರ ದೊಡ್ಡ ಮಟ್ಟದಲ್ಲಿ ಬ್ರೇಕ್ ನೀಡೋ ಸಾಧ್ಯತೆಗಳಿವೆ.

Share This Article
Leave a Comment

Leave a Reply

Your email address will not be published. Required fields are marked *