ಹನಿ ಸಿಂಗ್‌ ಕಾನ್ಸರ್ಟ್‌ನಲ್ಲಿ ರಾಕಿಂಗ್‌ ಸ್ಟಾರ್-‌ ಕನ್ನಡದಲ್ಲಿ ಹಾಡುವಂತೆ ಯಶ್‌ ಕಂಡೀಷನ್‌

Public TV
2 Min Read

ಬಾಲಿವುಡ್‌ನ ಖ್ಯಾತ ಗಾಯಕ, ರ‍್ಯಾಪರ್ ಹನಿ ಸಿಂಗ್ (Honey Singh) ನಿನ್ನೆ (ಮಾ.22) ಬೆಂಗಳೂರಿಗೆ ಆಗಮಿಸಿ ಅದ್ಧೂರಿಯಾಗಿ ಲೈವ್ ಕಾನ್ಸರ್ಟ್ (ಸಂಗೀತ ಕಾರ್ಯಕ್ರಮ) ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ (Yash) ಅವರು ಸಾಥ್ ನೀಡಿದ್ದಾರೆ. ಅದಲ್ಲದೇ, ಹನಿ ಸಿಂಗ್‌ಗೆ ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೂ ಹಾಡಬೇಕು ಎಂದು ಯಶ್ ಬೇಡಿಕೆಯಿಟ್ಟಿದ್ದಾರೆ. ಈ ಕುರಿತ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಟಾಕ್ಸಿಕ್‌ ಸಿನಿಮಾ ಮುಂದಿನ ವರ್ಷ ರಿಲೀಸ್‌ – ದಿನಾಂಕ ಘೋಷಿಸಿದ ಯಶ್‌

ನಿನ್ನೆ ಸಂಜೆ ಬೆಂಗಳೂರಿನಲ್ಲಿ ಹನಿ ಸಿಂಗ್ ಆಗಮಿಸಿ ತಮ್ಮ ಗಾಯನದ ಮೂಲಕ ರಂಜಿಸಿದ್ದಾರೆ. ಈ ವೇಳೆ, ಯಶ್ ಕೂಡ ವೇದಿಕೆಗೆ ಆಗಮಿಸಿ ಕನ್ನಡದಲ್ಲಿಯೇ ಹನಿ ಸಿಂಗ್‌ಗೆ ‘ಬೆಂಗಳೂರಿಗೆ ಸ್ವಾಗತ’ ಎಂದಿದ್ದಾರೆ. ನಮಸ್ಕಾರ ಎಲ್ಲರೂ ಹೇಗಿದ್ದೀರಿ. ತುಂಬಾ ಖುಷಿ ಆಗುತ್ತಿದೆ ನಿಮ್ಮೆಲ್ಲರನ್ನೂ ನೋಡಿ. ನಮ್ಮ ಊರಿಗೆ ಬಂದ ಇವರಿಗೆ ಸ್ವಾಗತಿಸೋಣ, ವೆಲ್ ಕಮ್ ಬ್ರದರ್. ವಿ ಲವ್ ಯೂ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಹನಿ ಸಿಂಗ್‌ಗೆ ನೀವು ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೂ ಹಾಡಬೇಕು ಎಂದು ಯಶ್ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಗಾಯಕ, ಖಂಡಿತ ನಿಮಗಾಗಿ ಕನ್ನಡದಲ್ಲಿ ಹಾಡು ಹಾಡುತ್ತೇನೆ ಎಂದಿದ್ದಾರೆ. ಯಶ್‌ ಕಾರ್ಯಕ್ರಮಕ್ಕೆ ಬಂದು ಸಾಥ್‌ ಕೊಟ್ಟಿದಕ್ಕೆ ಗಾಯಕ ಧನ್ಯವಾದ ಹೇಳಿದ್ದಾರೆ. ಇನ್ನೂ ಹಿಂದಿ ಹಾಡುಗಳ ಕಾನ್ಸರ್ಟ್‌ನಲ್ಲಿ ಕನ್ನಡದಲ್ಲಿ ಯಶ್ ಮಾತನಾಡಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಜೊತೆಗೆ ಕನ್ನಡದ ಹಾಡುಗಳನ್ನು ಹಾಡಿ ಎಂದು ಒತ್ತಾಯಿಸಿರೋದು ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

 

View this post on Instagram

 

A post shared by Yo Yo Honey Singh (@yoyohoneysingh)

ಇನ್ನೂ ಯಶ್ ಕೂಡ ಆಗಮಿಸಿ ನೆರೆದಿದ್ದ ಜನರಿಗೆ ಅಚ್ಚರಿ ಮೂಡಿಸಿದ್ದಾರೆ. ಮುಂಚೆಯೇ ಹನಿ ಸಿಂಗ್ ಕಾನ್ಸರ್ಟ್‌ನಲ್ಲಿ ಯಶ್ ಭಾಗಿಯಾಗ್ತಾರೆ ಎಂಬ ಯಾವುದೇ ಮುನ್ಸೂಚನೆ ಇರಲಿಲ್ಲ. ಇದನ್ನೂ ಓದಿ:ಕನ್ನಡದಲ್ಲಿ ಸಿನಿಮಾ ಮಾಡಲಿದ್ದಾರೆ ತಮಿಳಿನ ಖ್ಯಾತ ನಿರ್ದೇಶಕ ಗೌತಮ್

ಅಂದಹಾಗೆ, ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮುಂದಿನ ವರ್ಷ ರಿಲೀಸ್ ಮಾಡೋದಾಗಿ ಗುಡ್ ನ್ಯೂಸ್ ನೀಡಿದ್ದಾರೆ. 2026ರ ಮಾ.19ರಂದು ರಿಲೀಸ್ ಮಾಡೋದಾಗಿ ಯಶ್ ಘೋಷಿಸಿದ್ದಾರೆ. ಈ ಚಿತ್ರವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ.

Share This Article