ಸೆಲೆಬ್ರಿಟಿ ಟ್ರೈನರ್ ಕಿಟ್ಟಿ ಜಿಮ್ ಉದ್ಘಾಟಿಸಿದ ಯಶ್

Public TV
1 Min Read

‘ಕೆಜಿಎಫ್ 2′ (KGF 2) ನಟ ಯಶ್ (Yash) ಇದೀಗ ಸೆಲೆಬ್ರಿಟಿ ಟ್ರೈನರ್ ಕಿಟ್ಟಿ ಅವರ ಹೊಸ ಜಿಮ್ ಉದ್ಘಾಟಿಸಿದ್ದಾರೆ. ಪ್ರೇಮಿಗಳ ದಿನಾಚರಣೆಯಂದು ಪಾನಿಪುರಿ ಕಿಟ್ಟಿ ಅವರ ಹೊಸ ಜಿಮ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಯಶ್ ಭಾಗಿಯಾಗಿ ಹಾರೈಸಿದ್ದಾರೆ. ಇದನ್ನೂ ಓದಿ:ವ್ಯಾಲೆಂಟೈನ್‌ ದಿನದ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ಜಿಮ್ ಟ್ರೈನರ್ ಕಿಟ್ಟಿ ಮತ್ತು ಯಶ್ ಹಲವು ವರ್ಷಗಳಿಂದ ಸ್ನೇಹಿತರು. ಯಶ್‌ಗೆ ಕಿಟ್ಟಿ ಫಿಟ್‌ನೆಸ್ ಟ್ರೈನರ್‌ ಆಗಿದ್ದಾರೆ. ಈ ಹಿಂದೆ ಕಿಟ್ಟಿ ಅವರ ಹಳೆಯ ಜಿಮ್ ಬ್ರ್ಯಾಂಚ್‌ಗಳನ್ನು ಯಶ್ ಚಾಲನೆ ನೀಡಿದ್ದರು. ಈ ಬಾರಿ ಕತ್ರಿಗುಪ್ಪೆ ಮುಖ್ಯ ರಸ್ತೆಯಲ್ಲಿ ‘ಕಿಟ್ಟೀಸ್ ಮಸಲ್ ಪ್ಲಾನೆಟ್’ ಎಂಬ ಜಿಮ್‌ಗೆ ಯಶ್ ಚಾಲನೆ ನೀಡಿದ್ದಾರೆ.

ಹೊಸ ಬ್ರ್ಯಾಂಚ್ ಉದ್ಘಾಟನೆ ಕಾರ್ಯಕ್ರಮಕ್ಕೆ ಕರೆದಾಗ ವ್ಯಾಲೆಂಟೈನ್ ದಿನ ಎಂಬುದು ಅವರ ಅರಿವಿಗೆ ಇರಲಿಲ್ಲ. ನನಗೂ ಇದರ ಬಗ್ಗೆ ಐಡಿಯಾ ಇರಲಿಲ್ಲ. ಆದರೆ ಯಶ್ ಖಾಸಗಿ ಕೆಲಸ ಮುಗಿಸಿ ಉದ್ಘಾಟನೆಯಲ್ಲಿ ಭಾಗಿಯಾಗಿರೋದಾಗಿ ತಿಳಿಸಿದರು. ಬಳಿಕ ಸ್ನೇಹಿತ ಕಿಟ್ಟಿ ಹೊಸ ಹೆಜ್ಜೆಗೆ ಯಶ್ ಶುಭಕೋರಿದ್ದರು.

ಯಶ್ ಜೊತೆ ಅಜಯ್ ರಾವ್, ನೆನಪಿರಲಿ ಪ್ರೇಮ್, ಅಮೃತಾ ಪ್ರೇಮ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜಿಮ್ ಟ್ರೈನರ್ ಕಿಟ್ಟಿಗೆ ಶುಭಹಾರೈಸಿದ್ದಾರೆ.

Share This Article