ತಮಿಳುನಾಡಿನಲ್ಲಿ ದೇವಸ್ಥಾನ ಕಟ್ಟಲು ಯಶ್ ಸಹಾಯ ನೆನೆದ ಡೇನಿಯಲ್ ಬಾಲಾಜಿ

Public TV
1 Min Read

ನ್ಯಾಷನಲ್ ಸ್ಟಾರ್ ಯಶ್ (Yash) ತೆರೆಯ ಮೇಲೆ ಮಾತ್ರ ತಾವು ಹೀರೋ ಅಲ್ಲ, ತೆರೆ ಹಿಂದೆ ಕೂಡ ಹೀರೋನೇ ಅನ್ನೋದನ್ನ ಮತ್ತೆ ಪ್ರೂವ್ ಮಾಡಿದ್ದಾರೆ. ತೆರೆಮರೆಯಲ್ಲಿ ಸಹಾಯ ಮಾಡಿರೋದನ್ನ ಎಲ್ಲೂ ಹೇಳದಿರುವ ವಿಷ್ಯ ಇದೀಗ ರಿವೀಲ್ ಆಗಿದೆ. ಯಶೋಮಾರ್ಗ ಫೌಂಡೇಶನ್ ಮೂಲಕ ಸಹಾಯ ಮಾಡಿರುವ ಯಶ್, ತಮಿಳುನಾಡಿನ ದೇವಸ್ಥಾನ ಕಟ್ಟಲು ಸಾಥ್ ನೀಡಿರೋದರ ಬಗ್ಗೆ ಡೇನಿಯಲ್ ಬಾಲಾಜಿ (Daniel Balaji)  ಮಾತನಾಡಿದ್ದಾರೆ.

ನಟ ಯಶ್ ಅವರ ಯಶೋಮಾರ್ಗ ಫೌಂಡೇಶನ್ (Yashomarga Foundation) ವತಿಯಿಂದ ಸಾಕಷ್ಟು ಕಾರ್ಯಗಳು ಕಾರ್ಯರೂಪಕ್ಕೆ ಬಂದಿದೆ. ಜನರಿಗೆ ನೆರವಾಗುವಂತಹ ಕೆಲಸಗಳ ಮೂಲಕ ಯಶ್ ಸಾಥ್ ನೀಡಿದ್ದಾರೆ. ಈಗ ಎಲ್ಲಿಯೂ ಸುದ್ದಿಯಾಗದೇ ಉಳಿದಿರುವ ವಿಷಯಗಳ ಪೈಕಿ ಯಶ್ ತಮಿಳುನಾಡಿನ ದೇವಸ್ಥಾನವೊಂದರ ನಿರ್ಮಾಣಕ್ಕೆ ಧನ ಸಹಾಯ ವಿಚಾರ ಹೊರಬಿದ್ದಿದೆ.

ನಾಲ್ಕು ವರ್ಷಗಳ ಹಿಂದೆ ಯಶ್ ತಮಿಳುನಾಡಿನ ದೇವಸ್ಥಾನ (Temple) ನಿರ್ಮಾಣಕ್ಕೆ ಹಣ ದೇಣಿಗೆ ನೀಡಿದ್ದ ವಿಚಾರ ಈಗ ಬಹಿರಂಗವಾಗಿದೆ. `ಕಿರಾತಕ’ ಸಿನಿಮಾದಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿದ್ದ ತಮಿಳು ನಟ ಡೇನಿಯಲ್ ಬಾಲಾಜಿ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿ ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಮೊದಲ ಯುಗಾದಿ ಸಂಭ್ರಮದಲ್ಲಿ `ಸಿಂಹಪ್ರಿಯಾ’ ಜೋಡಿ

ನಾಲ್ಕು ವರ್ಷಗಳ ಹಿಂದೆ ಕನ್ನಡದ ಚಿತ್ರವೊಂದರಲ್ಲಿ ನಟಿಸುವ ಆಫರ್ ತಿಳಿಸಲು ನನಗೆ ಕರೆ ಮಾಡಿದ್ದರು. ಆದರೆ ನಾನು ಇನ್ನೂ 20 ದಿನಗಳ ಕಾಲ ನನಗೊಂದು ಸಣ್ಣ ಕೆಲಸವಿದೆ ಎಂದು ಹೇಳಿದ್ದೆ. ಏನು ಕೆಲಸ ಎಂದು ಅವರು ಕೇಳಿದರು. ದೇವಸ್ಥಾನವೊಂದನ್ನು ನಿರ್ಮಿಸುತ್ತಿದ್ದೇನೆ, ಅದು ಮುಗಿಯುವವರೆಗೂ ನಾನು ಎಲ್ಲಿಗೂ ಬರಲು ಆಗುವುದಿಲ್ಲ ಎಂದು ಹೇಳಿದೆ. ಇದನ್ನು ಕೇಳಿ ಯಶ್, ನಿಮಗೆ ಒಳ್ಳೆದಾಗಲಿ ಎಂದು ಶುಭ ಕೋರಿದರು. ಕೆಲವೇ ಸೆಕೆಂಡುಗಳಲ್ಲಿ ನನಗೆ ಮೆಸೇಜ್‌ಗಳು ಬಂದವು. ಯಾವ ಮೆಸೇಜ್ ಎಂದು ನೋಡಿದರೆ ಯಶ್ ಹಣ ಕಳುಹಿಸಿದ್ದರು. ಅರೇ ಇನ್ನೂ ಸಿನಿಮಾ ಫೈನಲ್ ಆಗಿಲ್ಲ. ಈಗಲೇ ಅಡ್ವಾನ್ಸ್ ಹಾಕಿದ್ದೀರಲ್ಲ ಎಂದು ಪ್ರಶ್ನೆ ಮಾಡಿದೆ. ಅದಕ್ಕೆ ಯಶ್ ಇದು ನಿಮ್ಮ ದೇವಸ್ಥಾನಕ್ಕೆ ನಾನು ಕೊಡುತ್ತಿರುವ ದೇಣಿಗೆ ಎಂದಿದ್ದರು. ಸಂದರ್ಶನದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಮಾಡಿದ ಧನಸಹಾಯವನ್ನು ಡೇನಿಯಲ್ ನೆನೆದರು.

Share This Article
Leave a Comment

Leave a Reply

Your email address will not be published. Required fields are marked *