ಭಟ್ಕಳಕ್ಕೆ ಧಿಡೀರ್ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್ ದಂಪತಿ

Public TV
1 Min Read

ಟ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ದಂಪತಿಗಳು ತಮ್ಮ ಮಕ್ಕಳೊಂದಿಗೆ ಇಂದು (ಫೆ.15) ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪ್ರಸಿದ್ಧ ಚಿತ್ರಾಪುರ ಮಠಕ್ಕೆ ಭೇಟಿ ನೀಡಿದ್ದಾರೆ. ವ್ಯಾಲೆಂಟೈನ್ ಡೇ ಆಚರಿಸಿದ ಬೆನ್ನಲ್ಲೇ ಚಿತ್ರಾಪುರ ಮಠಕ್ಕೆ ಯಶ್ ದಂಪತಿ ಭೇಟಿ ನೀಡಿದ್ದಾರೆ.

ಮಠದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಅವರ ದರ್ಶನವನ್ನು ಪಡೆದ ಯಶ್ ದಂಪತಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಮಠದಲ್ಲಿ ಕಾಲ ಕಳೆದಿದ್ದಾರೆ. ಇದನ್ನೂ ಓದಿ:‘ಹನುಮಾನ್’- 2ನಲ್ಲಿ ರಾಕಿ ಬಾಯ್: ಯಶ್ ಕೊಟ್ರು ಕ್ಲ್ಯಾರಿಟಿ

ರಾಧಿಕಾ ಪಂಡಿತ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು, ವಿವಾಹದ ನಂತರ ತಮ್ಮ ಜನಾಂಗದ ಮಠಕ್ಕೆ ಭೇಟಿ ನೀಡಿರಲಿಲ್ಲ. ಇದೀಗ ಮಠಕ್ಕೆ ಭೇಟಿ ನೀಡಿ ಪೂಜಾಕಾರ್ಯದ ಜೊತೆ ಸ್ವಾಮೀಜಿಗಳ ಆಶೀರ್ವಾದ ಪಡೆದ್ದಾರೆ. ಈ ವೇಳೆ, ಯಶ್ ಮತ್ತು ರಾಧಿಕಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ಮಠದ ಅತಿಥಿ ಗೃಹದಲ್ಲಿಯೇ ಯಶ್ ಕುಟುಂಬ ವಾಸ್ತವ್ಯ ಹೂಡಿದ್ದು, ಫೆ.16ರ ಬೆಳಿಗ್ಗೆ ಇಲ್ಲಿಂದ ಪ್ರಯಾಣ ಬೆಳೆಸಲಿದೆ ಎಂದು ಮೂಲಗಳು ತಿಳಿಸಿವೆ.

Share This Article