ಮಗನ ಜೊತೆ ಗಿಡ ನೆಟ್ಟು ವಿಶೇಷ ಸಂದೇಶ ನೀಡಿದ ಯಶ್ ದಂಪತಿ

Public TV
1 Min Read

ನ್ಯಾಷನಲ್ ಸ್ಟಾರ್ ಯಶ್ (Yash) ಸದ್ಯ ‘ಟಾಕ್ಸಿಕ್’ (Toxic Film) ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮಗನ ಜೊತೆ ಗಿಡ ನೆಡುವ ಮೂಲಕ ಅಭಿಮಾನಿಗಳಿಗೆ ಯಶ್ ದಂಪತಿ ಸಾಮಾಜಿಕ ಸಂದೇಶವೊಂದನ್ನು ನೀಡಿದ್ದಾರೆ. ಇದನ್ನೂ ಓದಿ:ಮದುವೆ ತಯಾರಿಯಲ್ಲಿ ಮಾನ್ವಿತಾ ಬ್ಯುಸಿ- ಆಮಂತ್ರಣ ಪತ್ರಿಕೆ ರಿವೀಲ್ ಮಾಡಿದ ನಟಿ

 

View this post on Instagram

 

A post shared by Radhika Pandit (@iamradhikapandit)

ಇಂದು (ಏ.22) ಭೂಮಿಯ (Earth Day) ದಿನಾಚರಣೆವಾಗಿದ್ದು, ಮಗನ ಜೊತೆ ಯಶ್ ಮತ್ತು ರಾಧಿಕಾ ಗಿಡ ನೆಟ್ಟಿದ್ದಾರೆ. ಪುಟ್ಟ ಕೈಗಳು ಸಹ ದೊಡ್ಡ ವ್ಯತ್ಯಾಸವನ್ನು ಮಾಡಬಹುದು ಎಂದು ನಟಿ ರಾಧಿಕಾ (Radhika Pandit) ಅಡಿಬರಹ ನೀಡಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಭೂಮಿ ದಿನದ ಶುಭಾಶಯಗಳು ಎಂದಿದ್ದಾರೆ. ಈ ಮೂಲಕ ವಿಶೇಷ ಸಂದೇಶ ಸಾರಿದ್ದಾರೆ ಯಶ್ ದಂಪತಿ.

ಸದ್ಯ ‘ಟಾಕ್ಸಿಕ್’ ಚಿತ್ರದ ಜೊತೆ ರಣ್‌ಬೀರ್ ಕಪೂರ್ ನಟನೆಯ ‘ರಾಮಾಯಣ’ ಚಿತ್ರದ ನಿರ್ಮಾಣಕ್ಕೆ ಯಶ್ ಸಾಥ್ ನೀಡುತ್ತಿದ್ದಾರೆ.

Share This Article