ಪತಿ ಜೊತೆ ಅತ್ಯಂತ ರೊಮ್ಯಾಂಟಕ್ ಫೋಟೋವನ್ನ ಪತ್ನಿ ರಾಧಿಕಾ ಪಂಡಿತ್ (Radhika Pandit) ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಹಲವು ದಿನಗಳಿಂದ ರಾಧಿಕಾ ಪಂಡಿತ್ ಅಮೆರಿಕಾದಲ್ಲಿದ್ದರು. ನಿನ್ನೆಯಷ್ಟೇ ಯಶ್ (Yash) ಮುಂಬೈನಿಂದ ತೆರಳಿ ಪತ್ನಿಯನ್ನ ಭೇಟಿಯಾಗಿದ್ದಾರೆ. ಪತ್ನಿ ಮಕ್ಕಳೊಂದಿಗೆ ಸಮಯ ಕಳೆಯಲು ಅಮೆರಿಕಾಗೆ ಯಶ್ ತೆರಳಿದ್ದಾರೆ. ಯಶ್ ಆಗಮಿಸಿದ ಖುಷಿಯಲ್ಲಿ ರಾಧಿಕಾ ಯಶ್ ಸೊಂಟದ ಮೇಲೆ ಹತ್ತಿ ಕುಳಿತಿದ್ದಾರೆ. ಫೋಟೋ ಅತ್ಯಂತ ರೊಮ್ಯಾಂಟಿಕ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಇದನ್ನೂ ಓದಿ: ಚಾಮುಂಡಿ ತಾಯಿಗೆ ಶಿವಣ್ಣ ದಂಪತಿ ಪೂಜೆ
View this post on Instagram
ಚಿತ್ರೀಕರಣದಲ್ಲಿ ಬ್ಯುಸಿ ಇದ್ದಿದ್ರಿಂದ ಯಶ್ ರಾಧಿಕಾ ಹಾಗೂ ಮಕ್ಕಳ ಜೊತೆ ಅಮೆರಿಕಾಗೆ ತೆರಳಲು ಸಾಧ್ಯವಾಗಿರಲಿಲ್ಲ. ಇದೀಗ ರಾಮಾಯಣ ಹಾಗೂ ಟಾಕ್ಸಿಕ್ ಚಿತ್ರದ ಶೂಟಿಂಗ್ ಮುಗಿಸಿ ಮಂಗಳವಾರ ಯಶ್ ರಾಧಿಕಾರನ್ನ ಸೇರಿಕೊಂಡಿದ್ದಾರೆ. ಹಲವು ದಿನಗಳ ಕಾಲ ಯಶ್ ಫ್ಯಾಮಿಲಿ ಅಮೆರಿಕ ವೆಕೇಶನ್‌ನಲ್ಲಿ ಇರುತ್ತಾರೆ.
ಪ್ರೀತಿಸಿ ಮದುವೆಯಾದ ಯಶ್ ರಾಧಿಕಾ ಜೋಡಿ ಯಾವತ್ತಿದ್ರೂ ಮಾದರಿ ಕಪಲ್ ಎಂದೇ ಕರೆಸಿಕೊಳ್ತಿದ್ದಾರೆ. ಇದೀಗ ರಾಧಿಕಾ ಪೋಸ್ಟ್ ಮಾಡಿರುವ ಇಬ್ಬರ ರೊಮ್ಯಾಂಟಿಕ್ ಫೋಟೋ ಮುದ್ದಾಗಿದ್ದು, ಜೋಡಿಯ ಅನ್ಯೂನ್ಯತೆ ತೋರಿಸುತ್ತಿದೆ. ಇದನ್ನೂ ಓದಿ: ಉದಯಪುರದಲ್ಲಿ ಭರ್ಜರಿ ಡೆವಿಲ್ ಮೇಕಿಂಗ್!